ಶಿಲ್ಲಾಂಗ್ : ಮೇಘಾಲಯದಲ್ಲಿ ಕಾಂಗ್ರೆಸ್ ಗೆ ಭಾರೀ ದೊಡ್ಡ ಹೊಡೆತ ಬಿದ್ದಿದೆ. ಐದು ಬಾರಿಯ ಮುಖ್ಯಮಂತ್ರಿ ಡಿ ಡಿ ಲಪಾಂಗ್ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಹಿರಿಯ ನಾಯಕರನ್ನು ಮೂಲೆಗುಂಪು ಮಾಡಿ ಹೊರಗಟ್ಟುವ ನೀತಿಯನ್ನು ಪಕ್ಷವು ಅನುಸರಿಸುತ್ತಿದೆ ಎಂದು ಆರೋಪಿಸಿ ಲಪಾಂಗ್, ಪಕ್ಷಕ್ಕೆ ಗುಡ್‌ಬೈ ಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ನಿನ್ನೆ ಗುರುವಾರ ರಾತ್ರಿ ಸಲ್ಲಿಸಿರುವ ಲಪಾಂಗ್ ಅವರು ತಾನು ‘ಒಲ್ಲದ ಮನಸ್ಸು ಮತ್ತು ಭಾರವಾದ ಹೃದಯದಿಂದ ರಾಜೀನಾಮೆ ನೀಡುತ್ತಿದ್ದೇನೆ’ ಎಂದು ಹೇಳಿದ್ದಾರೆ.
ಮೇಘಾಲಯ ಪ್ರದೇಶ್ ಕಾಂಗ್ರೆಸ್ ಸಮಿತಿಯ ಮಾಜಿ ಮುಖ್ಯಸ್ಥ ಲಪಾಂಗ್ ಅವರು “ಪಕ್ಷವು ಹಳಬರನ್ನು ಹೊರಗಟ್ಟುವ ತಂತ್ರವನ್ನು ಅನುಸರಿಸುತ್ತಿದೆ’ ಎಂದು ಆರೋಪಿಸಿದ್ದಾರೆ.