Advertisement

ಷರೀಫ್ ಅರೆಸ್ಟ್‌ : ಟ್ವಿಟರ್‌ನಲ್ಲಿ ಮೋದಿಗೆ ಕಾಂಗ್ರೆಸ್‌ ಟ್ರೋಲ್‌

07:14 PM Jul 14, 2018 | udayavani editorial |

ಹೊಸದಿಲ್ಲಿ : ಪಾಕ್‌ ಪದಚ್ಯುತ ಪ್ರಧಾನಿ ನವಾಜ್‌ ಷರೀಫ್ ಅವರು ಭ್ರಷ್ಟಾಚಾರದ ಕೇಸಿನಲ್ಲಿ ಅರೆಸ್ಟ್‌ ಆಗಿರುವುದಕ್ಕೆ ಕಾಂಗ್ರೆಸ್‌ ಪಕ್ಷ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟ್ವಿಟರ್‌ನಲ್ಲಿ ಟ್ರೋಲ್‌ ಮಾಡಿದೆ. 

Advertisement

2015ರ ಡಿಸೆಂಬರ್‌ನಲ್ಲಿ ಪ್ರಧಾನಿ ಮೋದಿ ಅವರು ಎಲ್ಲ ಶಿಷ್ಟಾಚಾರಗಳನ್ನು ಬದಿಗಿಟ್ಟು ನವಾಜ್‌ ಷರೀಫ್ ಅವರನ್ನು ಅತ್ಯಂತ ಅಚ್ಚರಿಯಾಗಿ ಪಾಕಿಸ್ಥಾನದಲ್ಲಿ ಖಾಸಗಿ ನೆಲೆಯಲ್ಲಿ ಭೇಟಿ ಮಾಡಿದ್ದರು.

“ಪ್ರಧಾನಿ ಮೋದೀಜೀ, ನಿಮ್ಮ ಡಿಯರ್‌ ಫ್ರೆಂಡ್‌ ನವಾಜ್‌ ಷರೀಫ್ ಅರೆಸ್ಟ್‌ ಆಗಿರುವ ಬಗ್ಗೆ ಈಗ ನೀವೇನಂತೀರಿ?’ ಎಂದು ಕಾಂಗ್ರೆಸ್‌ ಟ್ವಿಟರ್‌ನಲ್ಲಿ ಲೇವಡಿ ಮಾಡಿದೆ. 

Advertisement

Udayavani is now on Telegram. Click here to join our channel and stay updated with the latest news.

Next