Advertisement
ಈ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್, ನಮ್ಮ ನಾಯಕ ರಾಹುಲ್ ಗಾಂಧಿ ಅವರ ಟ್ವೀಟರ್ ಖಾತೆಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿದ್ದರೂ ಕೂಡ ಇತರೆ ಸಾಮಾಜಿಕ ಜಾಲತಾಣಗಳ ಮೂಲಕ ಜನರ ಧ್ವನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದಿದೆ.
Related Articles
Advertisement
ಈ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿರುವ ಟ್ವೀಟರ್ ಕಚೇರಿಯ ಮುಂಭಾಗದಲ್ಲಿ ಕಾಂಗ್ರೆಸ್ ಸ್ಟೂಡೆಂಟ್ಸ್ ವಿಂಗ್ ಪ್ರತಿಭಟನೆ ಮಾಡುವುದಾಗಿ ಹಾಗೂ ಎನ್ ಎಸ್ ಯು ಐ ಸಂಸತ್ ಭವನದ ಸುತ್ತ ಮುತ್ತ ಪ್ರತಿಭಟನೆ ನಡೆಸುವುದಾಗಿ ಘೋಷಿಸಿವೆ ಎಂದು ಸುದ್ದಿ ಸಂಸ್ಥೆ ಎಎನ್ ಐ ವರದಿ ಮಾಡಿದೆ.
ನಿರಂತರವಾಗಿ ಕೇಂದ್ರ ಸರ್ಕಾರದ ಮೇಲೆ ಟ್ವೀಟರ್ ಖಾತೆಯ ಮೂಲಕ ವಾಗ್ದಾಳಿ ಮಾಡುತ್ತಿದ್ದ ರಾಹುಲ್ ಗಾಂಧಿ, ಎರಡು ದಿನಗಳ ತಾತ್ಕಾಲಿಕ ಅಮಾನತುಗೊಳಿಸಿರುವ ಕಾರಣದಿಂದಾಗಿ ಯಾವುದೇ ಟ್ವಿಟ್ ಮಾಡುವುದಕ್ಕೆ ಆಗಿರಲಿಲ್ಲ. ಕಾಂಗ್ರೆಸ್ ಶನಿವಾರ ತಡರಾತ್ರಿ ಈ ಮಾಹಿತಿಯನ್ನು ನೀಡಿದೆ, ಜೊತೆಗೆ ಖಾತೆಯನ್ನು ಮರುಸ್ಥಾಪಿಸುವ ಪ್ರಕ್ರಿಯೆಯನ್ನು ಮಾಡಲಾಗುತ್ತಿದೆ ಎಂದು ಹೇಳಿತ್ತು.
ಪಕ್ಷದ ನಾಯಕರು ಟ್ವಿಟರ್ ಮತ್ತು ಕೇಂದ್ರ ಸರ್ಕಾರವನ್ನು ಗುರಿಯಾಗಿಸಲು ಆರಂಭಿಸಿದರು, ಆದರೆ ಕಾಂಗ್ರೆಸ್ ಕಾರ್ಯಕರ್ತರು “ಮುಖ್ಯ ಭೀ ರಾಹುಲ್” ಪ್ರವೃತ್ತಿಯನ್ನು ಆರಂಭಿಸಿದರು.
ಇನ್ನು, ಈ ಬಗ್ಗೆ ಪ್ರತಿಕ್ರಿಯಿಸಿದ ಎನ್ ಎಸ್ ಯು ಐ ನ ಮುಖ್ಯಸ್ಥ ನೀರಜ್ ಕುಂದನ್, ಬಿಜೆಪಿ ಸರ್ಕಾರದ ‘ಬೆದರಿಕೆ ರಾಜಕಾರಣ’ ಮಿತಿ ಮೀರುತ್ತಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಟ್ವೀಟರ್ ಖಾತೆಯನ್ನು ಅಮಾನತುಗೊಳಿಸಲು ಟ್ವಿಟರ್ ಮೇಲೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ನ ಯುವ ಕಾಂಗ್ರೆಸ್ ನ ಅಧ್ಯಕ್ಷ ಶ್ರೀನಿವಾಸ್ ಬಿ ವಿ ಪ್ರತಿಕ್ರಯಿಸಿ, ಟ್ವೀಟರ್ ಇಂಡಿಯಾ ಕೇಂದ್ರ ಸರ್ಕಾರದ ನಿರ್ದೇಶನದಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಟ್ವೀಟರ್ ಇಂಡಿಯಾ ರಾಹುಲ್ ಗಾಂಧಿ ಅವರ ಖಾತೆಯನ್ನು ಬ್ಲಾಕ್ ಮಾಡಬಹುದು ಆದರೇ, ಅವರ ಜನ ಪರ ಧ್ವನಿಯನ್ನು ನಿಲ್ಲಿಸಲು ಸಾಧ್ಯವಿಲ್ಲ. ರಾಹುಲ್ ಗಾಂಧಿ ನಿರಂತರವಾಗಿ ಬಡ ಜನರ ಧ್ವನಿಯಾಗಿ, ಸಮಾಜದ ಧ್ವನಿಯಾಗಿ ಕಾರ್ಯ ನಿರ್ವಹಿಸುತ್ತಾರೆ. ನಾವೆಲ್ಲಾ ಅವರ ಬೆಂಬಲಕ್ಕಾಗಿ ಇದ್ದೇವೆ ಎಂದಿದ್ದಾರೆ.
ಸದ್ಯ, ರಾಹುಲ್ ಗಾಂಧಿ ಅವರ ಟ್ವೀಟರ್ ಖಾತೆ ಜಾಲ್ತಿಯಲ್ಲಿದೆ.
ಇದನ್ನೂ ಓದಿ : ಸಚಿವರಿಗೆ ಜನರ ಸಂಕಷ್ಟ ಪರಿಹಾರವಾಗಬೇಕಿಲ್ಲ, ವಿಜಯೋತ್ಸವಗಳು ಬೇಕು: ಕುಮಾರಸ್ವಾಮಿ ಕಿಡಿ