Advertisement

ಮಕ್ಕಳಿಗೆ ಟಿಕೆಟ್‌ ಪಡೆಯುವಲ್ಲಿ ನಾಯಕರು ಯಶಸ್ವಿ

06:35 AM Apr 16, 2018 | |

ಬೆಂಗಳೂರು:ಕಾಂಗ್ರೆಸ್‌ ಟಿಕೆಟ್‌ ಹಂಚಿಕೆಯಲ್ಲಿ ಹಳೇ ಮೈಸೂರು ಭಾಗದಲ್ಲಿ ಸಿಎಂ ಸಿದ್ದರಾಮಯ್ಯ ಸಹಿತ ನಾಯಕರು
ತಾವು ಹಾಗೂ ತಮ್ಮ ಮಕ್ಕಳಿಗೆ ಟಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿಯಲ್ಲಿ ಹಾಗೂ ಪುತ್ರ ಯತೀಂದ್ರಗೆ ವರುಣಾದಲ್ಲಿ, ಸಚಿವ ರಾಮಲಿಂಗಾರೆಡ್ಡಿ ಬಿಟಿಎಂ ಲೇ ಔಟ್‌ನಲ್ಲಿ ತನಗೆ ಹಾಗೂ ಪುತ್ರಿ ಸೌಮ್ಯರೆಡ್ಡಿಗೆ ಜಯನಗರ, ಸಚಿವ ಟಿ.ಬಿ.ಜಯಚಂದ್ರ ತನಗೆ ಶಿರಾ ಹಾಗೂ ಪುತ್ರ ಸಂತೋಷ್‌ಗೆ ಚಿಕ್ಕನಾಯಕನಹಳ್ಳಿ ಟಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಕೋಲಾರ ಸಂಸದ ಕೆ.ಎಚ್‌.ಮುನಿಯಪ್ಪ ಕೆಜಿಎಫ್ನಲ್ಲಿ ಪುತ್ರಿ ರೂಪಾ ಶಶಿಧರ್‌ಗೆ ಟಿಕೆಟ್‌ ಪಡೆದಿದ್ದು, ಸಚಿವ ಡಿ.ಕೆ. ಶಿವಕುಮಾರ್‌ ತಮ್ಮ ಬೆಂಬಲಿಗರಿಗೆ ಬೆಂಗಳೂರು ದಕ್ಷಿಣ, ಕುಣಿಗಲ್‌, ಮಹಾಲಕ್ಷ್ಮಿಲೇ ಔಟ್‌, ಬಸನವನಗುಡಿ ಕ್ಷೇತ್ರಗಳಲ್ಲಿ ಟಿಕೆಟ್‌ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಎಚ್‌.ಸಿ. ಮಹದೇವಪ್ಪ ತಮ್ಮ ಪುತ್ರನಿಗೆ ಟಿಕೆಟ್‌ ಪಡೆಯಲು ಸಾಧ್ಯವಾಗಿಲ್ಲ. ಟಿ.ನರಸೀಪುರದಿಂದ ಅವರಿಗೆ ಟಿಕೆಟ್‌ ದೊರೆತಿದ್ದು ನಂಜನ ಗೂಡಿನಿಂದ ಕಳಲೆ ಕೇಶವಮೂರ್ತಿಗೆ ಮಣೆ ಹಾಕಲಾಗಿದೆ.

ಬಿಬಿಎಂಪಿ ಮಾಜಿ ಆಯುಕ್ತ ಸಿದ್ದಯ್ಯ ಸಕಲೇಶಪುರದಿಂದ ಹಾಗೂ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಮಂಜೇಗೌಡ
ಹೊಳೇನರಸೀಪುರದಿಂದ ಟಿಕೆಟ್‌ ಪಡೆದಿದ್ದಾರೆ. ಚನ್ನಪಟ್ಟಣ ಕ್ಷೇತ್ರಕ್ಕೆ ಸಚಿವ ಎಚ್‌.ಎಂ.ರೇವಣ್ಣ ಅವರನ್ನು ಕಣಕ್ಕಿಳಿಸಿ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಸಿ.ಪಿ.ಯೋಗೇಶ್ವರ್‌ಗೆ ಸ್ಪರ್ಧೆ ಒಡ್ಡುವ ತಂತ್ರ ರೂಪಿಸಲಾಗಿದೆ. 

ಜೆಡಿಎಸ್‌ನಿಂದ ವಲಸೆ ಬಂದಿದ್ದ ಈ ಭಾಗದ ಜಮೀರ್‌ ಅಹಮದ್‌, ಚೆಲುವರಾಯ ಸ್ವಾಮಿ, ಅಖಂಡ ಶ್ರೀನಿವಾಸಮೂರ್ತಿ, ಮಾಗಡಿ ಬಾಲಕೃಷ್ಣ, ರಮೇಶ್‌ ಬಂಡಿಸಿದ್ದೇಗೌಡ ಅವರಿಗೆ ಟಿಕೆಟ್‌ ಕೊಡಿಸುವಲ್ಲಿ ಸಿಎಂ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ. ಜತೆಗೆ ಮೈಸೂರು
ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ತಮ್ಮ ಬೆಂಬಲಿಗರಿಗೆ ಟಿಕೆಟ್‌ ಕೊಡಿಸುವಲ್ಲಿ ಸಿದ್ದರಾಮಯ್ಯ ಮೆಲುಗೈ ಸಾಧಿಸಿದ್ದಾರೆ.
ಕೊಳ್ಳೇಗಾಲ ಕ್ಷೇತ್ರದಿಂದ ಎ.ಆರ್‌.ಕೃಷ್ಣಮೂರ್ತಿ, ಹೆಗ್ಗಡದೇವನ ಕೋಟೆಯಿಂದ ಅನಿಲ್‌ಕುಮಾರ್‌, ಕೃಷ್ಣರಾಜನಗರದಿಂದ ಡಾ.ರವಿಶಂಕರ್‌ ಟಿಕೆಟ್‌ ಪಡೆದಿದ್ದಾರೆ. ಮಂಡ್ಯದಲ್ಲಿ ನಟ ಅಂಬರೀಷ್‌ಗೆ ಟಿಕೆಟ್‌ ನೀಡಲಾಗಿದ್ದು, ಮದ್ದೂರು ಕ್ಷೇತ್ರಕ್ಕೆ ಜಿ.ಮಧು ಮಾದೇಗೌಡ, ಕೃಷ್ಣರಾಜಪೇಟೆಗೆ ಕೆ.ಬಿ.ಚಂದ್ರಶೇಖರ್‌, ಮಳವಳ್ಳಿಯಲ್ಲಿ ನರೇಂದ್ರಸ್ವಾಮಿಗೆ ಟಿಕೆಟ್‌ ನೀಡಲಾಗಿದೆ. ತಿಪಟೂರಿನಲ್ಲಿ ಹಾಲಿ ಶಾಸಕ ಷಡಕ್ಷರಿಗೆ ಟಿಕೆಟ್‌ ತಪ್ಪಿದ್ದು ಅವರ ಬದಲಾಗಿ ನಂಜಾಮರಿ ಅವರಿಗೆ ಟಿಕೆಟ್‌ ನೀಡಲಾಗಿದೆ. ಗುಬ್ಬಿಯಲ್ಲಿ ಕೆ.ಕುಮಾರ್‌, ತುಮಕೂರು ಗ್ರಾಮಾಂತರದಲ್ಲಿ ಆರ್‌.ಎಸ್‌.ರವಿಕುಮಾರ್‌, ಕುಣಿಗಲ್‌ನಲ್ಲಿ  ಡಾ.ಎಚ್‌.ಡಿ.ರಂಗನಾಥ್‌, ತುರುವೇಕೆರೆಯಲ್ಲಿ ರಂಗಪ್ಪ ಚೌಧರಿ, ಚಿಕ್ಕನಾಯಕನಹಳ್ಳಿಯಲ್ಲಿ ಸಂತೋಷ್‌ ಜಯಚಂದ್ರ, ಪಾವಗಡದಲ್ಲಿ ವೆಂಕಟರಮಣಪ್ಪ ಅವರಿಗೆ ಟಿಕೆಟ್‌ ನೀಡಲಾಗಿದೆ. ಹಾಲಿ ಶಾಸಕರ ಪೈಕಿ ರಾಜಣ್ಣ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ಗೆ ಕೊರಟಗೆರೆ, ತುಮಕೂರಿನಲ್ಲಿ ರμàಕ್‌ ಅಹಮದ್‌,ಮಧುಗಿರಿಯಲ್ಲಿ ರಾಜಣ್ಣ ಅವರಿಗೆ ಟಿಕೆಟ್‌ ನೀಡಲಾಗಿದೆ.

Advertisement

ಹಾಸನ ಜಿಲ್ಲೆಯಲ್ಲಿ ಅರಕಲಗೂಡಿನಲ್ಲಿ ಎಂ.ಮಂಜು, ಶ್ರವಣಬೆಳಗೊಳದಲ್ಲಿ ಸಿ.ಎಸ್‌.ಪುಟ್ಟೇಗೌಡ, ಅರಸೀಕೆರೆಯಲ್ಲಿ
ಜಿ.ಬಿ.ಶಶಿಧರ್‌, ಬೇಲೂರಿನಲ್ಲಿ ಕೀರ್ತನಾ ರುದ್ರೇಗೌಡ, ಹಾಸನದಲ್ಲಿ ಎಚ್‌.ಕೆ.ಮಹೇಶ್‌ ಅವರಿಗೆ ಟಿಕೆಟ್‌ ನೀಡಲಾಗಿದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರಗಳ ಮಟ್ಟಿಗೆ ಸಂಸದರಾದ ಕೆ.ಎಚ್‌.ಮುನಿಯಪ್ಪ, ವೀರಪ್ಪಮೊಯ್ಲಿ ಮೇಲುಗೈ ಸಾಧಿಸಿದ್ದಾರೆ. ಕೋಲಾರದಲ್ಲಿ ಜಮೀರ್‌ ಪಾಶಾ, ಚಿಂತಾಮಣಿಯಲ್ಲಿ ವಾಣಿ ಕೃಷ್ಣಾರೆಡ್ಡಿಗೆ ಟಿಕೆಟ್‌ ಕೊಡಿಸಿ ಕೋಲಾರದಲ್ಲಿ ಜೆಡಿಎಸ್‌ನ ಶ್ರೀನಿವಾಸಗೌಡ ಪ್ರವೇಶಕ್ಕೆ ತಡೆಯೊಡ್ಡುವಲ್ಲಿ ಮುನಿಯಪ್ಪ ಯಶಸ್ವಿಯಾಗಿದ್ದಾರೆ.

ಚಿಂತಾಮಣಿಯಲ್ಲಿ ಮಾಜಿ ಶಾಸಕ ಸುಧಾಕರ್‌ಗೆ ಟಿಕೆಟ್‌ ಸಿಗದಂತೆ ನೋಡಿಕೊಂಡಿದ್ದಾರೆ.ವೀರಪ್ಪ ಮೊಯ್ಲಿ ಅವರು ದೇವನಹಳ್ಳಿ, ಯಲಹಂಕದಲ್ಲಿತಮ್ಮ ಶಿಷ್ಯರಾದ ವೆಂಕಟಸ್ವಾಮಿ ಹಾಗೂ ಗೋಪಾಲಕೃಷ್ಣ ಅವರಿಗೆ ಟಿಕೆಟ್‌ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಬಾಗೇಪಲ್ಲಿಯಲ್ಲಿ ಮೊಯ್ಲಿ ಶಿಷ್ಯ ಮಾಜಿ ಶಾಸಕ ಸಂಪಂಗಿಗೆ ಟಿಕೆಟ್‌ ತಪ್ಪಿದೆ. ಶಿಡ್ಲಘಟ್ಟದಲ್ಲಿ ಮಾಜಿ ಸಚಿವ ವಿ.ಮುನಿಯಪ್ಪ ಅವರಿಗೆ ಟಿಕೆಟ್‌ ದಕ್ಕಿದ್ದು, ಗೌರಿಬಿದನೂರಿನಲ್ಲಿ ವಿಧಾನಸಭೆ ಉಪಾಧ್ಯಕ್ಷ ಶಿವಶಂಕರ ರೆಡ್ಡಿಗೆ ಟಿಕೆಟ್‌ ದೊರೆತಿದೆ.

ರಾಮನಗರ ಜಿಲ್ಲೆಯಲ್ಲಿ ಡಿ.ಕೆ.ಶಿವಕುಮಾರ್‌ ಕನಕಪುರದಿಂದ ಸ್ಪರ್ಧೆ ಮಾಡಲಿದ್ದು ಉಳಿದಂತೆ ಮಾಗಡಿಯಲ್ಲಿ ಬಾಲಕೃಷ್ಣ, ಚನ್ನಪಟ್ಟಣದಲ್ಲಿ ಎಚ್‌.ಎಂ.ರೇವಣ್ಣ, ರಾಮನಗರದಲ್ಲಿ ಎಚ್‌. ಎ.ಇಕ್ಬಾಲ್‌ ಹುಸೇನ್‌ ಅವರಿಗೆ ಟಿಕೆಟ್‌ ದೊರೆತಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಮಾಯಕೊಂಡ ಕ್ಷೇತ್ರದಲ್ಲಿ ಹಾಲಿ ಶಾಸಕ ಶಿವಮೂರ್ತಿನಾಯಕ್‌ ಹಾಗೂ ಜಗಳೂರಿನ ಎಚ್‌. ಪಿ.ರಾಜೇಶ್‌ಗೆ ಟಿಕೆಟ್‌ತಪ್ಪಿದೆ. ಮಾಯಕೊಂಡದಲ್ಲಿ ಕೆ.ಎಸ್‌. ಬಸವರಾಜ್‌ಗೆ ಜಗಳೂರಿನಿಂದ ಎಚ್‌.ಎಲ್‌.ಪುಷ್ಪ ಅವರಿಗೆ ಟಿಕೆಟ್‌ ನೀಡಲಾಗಿದೆ. ಮೊಳಕಾಲ್ಮೂರಿನಿಂದ ಡಾ.ಬಿ.ಯೋಗೇಶ್‌ ಬಾಬು, ಹೊಸದುರ್ಗದಿಂದ ಬಿ.ಜಿ.ಗೋವಿಂದಪ್ಪ, ಹೊಳಲ್ಕೆರೆಯಿಂದ ಎಚ್‌.ಆಂಜನೇಯ ಕಣಕ್ಕಿಳಿಯಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next