Advertisement

ನನ್ನ ರಕ್ತಕ್ಕಾಗಿ ಕಾಂಗ್ರೆಸ್‌ ಹಪಹಪಿಕೆ: ಮಧ್ಯ ಪ್ರದೇಶ ಸಿಎಂ ಚೌಹಾಣ್‌

05:34 PM Sep 03, 2018 | Team Udayavani |

ಭೋಪಾಲ್‌ : ”ಕಾಂಗ್ರೆಸ್‌ ಪಕ್ಷ ನನ್ನ ರಕ್ತಕ್ಕಾಗಿ ಹಪಹಪಿಸುತ್ತಿದೆ” ಎಂದು ಮಧ್ಯ ಪ್ರದೇಶ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ ಶಿವರಾಜ್‌ ಸಿಂಗ್‌ ಚೌಹಾಣ್‌ ಹೇಳಿದ್ದಾರೆ. 

Advertisement

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಮಾಜಿ ಮುಖ್ಯಸ್ಥೆ ಸೋನಿಯಾ ಗಾಂಧಿ ಮತ್ತು ಮಧ್ಯ ಪ್ರದೇಶ ಕಾಂಗ್ರೆಸ್‌ ಮುಖ್ಯಸ್ಥ ಕಮಲ್‌ ನಾಥ್‌ ವಿರುದ್ಧ  ತೀವ್ರ ವಾಕ್‌ ದಾಳಿಯ ಮೂಲಕ ಹರಿಹಾಯ್ದಿರುವ ಸಿಎಂ ಚೌಹಾಣ್‌, ”ನೀವೆಲ್ಲ ಸೇರಿ ಈ ದೇಶದ ಅತ್ಯಂತ ಹಳೆಯ ಪಕ್ಷವಾಗಿರುವ ಕಾಂಗ್ರೆಸನ್ನು ಎತ್ತ ಕಡೆ ಒಯ್ಯುತ್ತಿದ್ದೀರಿ” ಎಂದು ಪ್ರಶ್ನಿಸಿದರು. 

ಸಿಎಂ ಚೌಹಾಣ್‌ ಅವರಿಂದು ಸಿಧಿ ಸಿಧಿ ಜಿಲ್ಲೆಯ ಸಮೀಪ ಚುರ್ಹಾಟ್‌ ಎಂಬಲ್ಲಿ ಜನ ಆಶೀರ್ವಾದ್‌ ಯಾತ್ರೆಯನ್ನು ಕೈಗೊಂಡಿದ್ದ ಸಂದರ್ಭದಲ್ಲಿ ಅವರ ಕಾರಿನ ಮೇಲೆ ಕಲ್ಲೆಸೆತ ನಡೆದಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next