ಗಂಗಾವತಿ: ರಾಜ್ಯ ಮತ್ತು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರವನ್ನು ಕಿತ್ತೊಗೆಯಲು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಜತೆಗೂಡಿ ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಕೆಲಸ ಮಾಡಲಾಗುತ್ತದೆ. ಪಕ್ಷ ಅವಕಾಶ ನೀಡಿದರೆ ಗಂಗಾವತಿ ಮತಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸುವುದಾಗಿ ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ ಹೇಳಿದರು.
ಅವರು ಬುಧವಾರ ತಮ್ಮ ನಿವಾಸದಲ್ಲಿ ಅಭಿಮಾನಿಗಳು ಮತ್ತು ಅವರ ಹಿತೈಷಿಗಳ ಸಭೆಯಲ್ಲಿ ಮಾತನಾಡಿದರು.
ಅನಿವಾರ್ಯ ಕಾರ್ಯಗಳಿಂದ ಕಾಂಗ್ರೆಸ್ ತೊರೆಯಬೇಕಾಯಿತು. ಇದರಿಂದ ಬಹ ನೊಂದಿದ್ದೇನೆ. ನಮ್ಮ ತಂದೆ ಎಚ್.ಜಿ.ರಾಮುಲು ಕಾಂಗ್ರೆಸ್ ಪಕ್ಷವನ್ನು ರಾಯಚೂರು, ಕೊಪ್ಪಳ ಮತ್ತು ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಕಟ್ಟಿ ಬೆಳೆಸಿದ್ದಾರೆ. ನಾನು ಕಾಂಗ್ರೆಸ್ ತೊರೆಯಬಾರದಿತ್ತು. ಕೆಟ್ಟ ಗಳಿಗೆಯ ನಿರ್ಧಾರದಿಂದ ಹೀಗಾಯಿತು. ಪ್ರಸ್ತುತ ಬಿಜೆಪಿ ಸರಕಾರ ಮುಸ್ಲಿಂ ಮತ್ತು ಹಿಂದೂ ಬಾಂಧವರ ಮಧ್ಯೆ ಜಗಳ ಹಚ್ಚಿ ರಾಜಕೀಯ ಲಾಭ ಪಡೆಯುತ್ತಿದೆ. ಗಂಗಾವತಿ ಭಾವೈಕ್ಯತೆಗೆ ಹೆಸರಾಗಿತ್ತು. ಮೊಹರಂ, ಗಣೇಶ ಹಬ್ಬದ ಸಂದರ್ಭದಲ್ಲಿ ಕ್ಷುಲ್ಲಕ ವಿಚಾರಗಳಿಂದ ಗಲಾಟೆ ನಡೆದು ದ್ವೇಷ ಮನೋಭಾವನೆ ಬೆಳೆಯಲು ಬಿಜೆಪಿ ಕಾರಣವಾಗಿದೆ. ಇನ್ನೂ ಭ್ರಷ್ಠಾಚಾರ ಮಿತಿಮೀರಿದೆ. ರೈತರು, ಕೃಷಿ ಕೂಲಿಕಾರ್ಮಿಕರು ಸೇರಿ ಸಣ್ಣ ಪುಟ್ಟ ವ್ಯಾಪಾರಸ್ಥರಿಗೆ ಬಿಜೆಪಿಯವರು ಕಿರುಕುಳ ನೀಡುತ್ತಿದ್ದಾರೆ. ಇದರಿಂದ ಜನತೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಸ್ಪಷ್ಟ ಬಹುಮತ ನೀಡಲಿದ್ದಾರೆ. ಈಗಾಗಲೇ ತಾವು ಬೆಂಗಳೂರಿನಲ್ಲಿ ವಿಪಕ್ಷ ನಾಯಕರಾದ ಸಿದ್ದರಾಮಯ್ಯ, ಬಿ.ಕೆ. ಹರಿಪ್ರಸಾದ, ಡಿ.ಕೆ.ಶಿವಕುಮಾರ, ಸಲೀಂ ಆಹಮದ್, ಮಲ್ಲಿಕಾರ್ಜುನ ಖರ್ಗೆ , ಸತೀಶ ಜಾರಕಿಹೊಳೆ ಸೇರಿ ಪ್ರಮುಖ ನಾಯಕರನ್ನು ಭೇಟಿಯಾಗಿದ್ದು ಉತ್ತಮ ಸ್ಪಂದನೆ ದೊರಕಿದೆ. ಜಿಲ್ಲೆಯ ಕಾಂಗ್ರೆಸ್ ಮುಖಂಡರಾದ ಶಿವರಾಜ್ ತಂಗಡಗಿ, ಮಲ್ಲಿಕಾರ್ಜುನ ನಾಗಪ್ಪ, ಶಿವರಾಮಗೌಡ ಸೇರಿ ಪ್ರಮುಖರ ಜತೆಗೆ ಕಾಂಗ್ರೆಸ್ ಸೇರ್ಪಡೆ ಕುರಿತು ಮಾತನಾಡಿದ್ದು ಇಕ್ಬಾಲ್ ಅನ್ಸಾರಿ ಜತೆ ಶೀಘ್ರವೇ ಮಾತುಕತೆ ನಡೆಸಿ ಜು.03 ರಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಅಪಾರ ಸಂಖ್ಯೆ ಅಭಿಮಾನಿಗಳು ಮತ್ತು ಜೆಡಿಎಸ್ ಕಾರ್ಯಕರ್ತರ ಜತೆ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದು ಗಂಗಾವತಿ ಮತ ಕ್ಷೇತ್ರದ ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿಯಾಗಿದ್ದರೂ ಪಕ್ಷದ ಹೈಕಮಾಂಡ ಅಭಿಪ್ರಾಯದಂತೆ ನಡೆದುಕೊಂಡು ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಲಾಗುತ್ತದೆ ಎಂದರು.
ಇದನ್ನೂ ಓದಿ : ವಿಜಯಪುರ: ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ಕ್ಲರ್ಕ್
ಮಾಜಿ ಎಂಎಲ್ಸಿ ಕರಿಯಣ್ಣ ಸಂಗಟಿ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕೆಲ ಕಾಂಗ್ರೆಸ್ ಮುಖಂಡರು ಎಚ್‌ಆರ್‌ಜಿ ಕುಟುಂಬ ಹಾಗೂ ಪ್ರಮುಖ ಕಾರ್ಯಕರ್ತರನ್ನು ನಿರ್ಲಕ್ಷ್ಯ ಮಾಡಿದ್ದರಿಂದ ಅನಿವಾರ್ಯವಾಗಿ ಜೆಡಿಎಸ್ ಸೇರಬೇಕಾಯಿತು. ದೇಶದಲ್ಲಿ ಬಿಜೆಪಿ ಸೃಷ್ಠಿಸುತ್ತಿರುವ ತಲ್ಲಣ್ಣಗಳಿಂದ ಜನರು ಬೇಸತ್ತಿದ್ದಾರೆ. ಆದ್ದರಿಂದ ಎಚ್.ಆರ್.ಶ್ರೀನಾಥ ಮುಖಂಡತ್ವದಲ್ಲಿ ಪುನಹ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದು ಮುಂಬರುವ ದಿನಗಳಲ್ಲಿ ಭ್ರಷ್ಠ ಮತ್ತು ಜಾತಿವಾದಿ ಬಿಜೆಪಿಯನ್ನು ಮನೆಗೆ ಕಳಿಸಲು ಜಾತ್ಯತೀತ ಮತ್ತು ಜನಸಾಮಾನ್ಯರ ಅಸ್ತçದ ಶಕ್ತಿಯಾದ ಕಾಂಗ್ರೆಸ್ ಪಕ್ಷದ ಆಡಳಿತ ಬರಲಿದೆ ಎಂದರು.
ಈ ಸಂದರ್ಭದಲ್ಲಿ ನ್ಯಾಯವಾದಿ ಆರ್.ಪಿ.ರೆಡ್ಡಿ, ಚಿಲಕೂರಿ ರಾಮಕೃಷ್ಣ, ಸುರೇಶ ಗೌರಪ್ಪ, ಜೋಗದ ನಾರಾಯಣಪ್ಪ ನಾಯಕ, ಬಿ.ಕೃಷ್ಣಪ್ಪ ನಾಯಕ, ಈ.ರಾಮಕೃಷ್ಣ, ರಾಜಮ್ಮ ಮನಿಯಾರ್, ರಜೀಯಾಬೇಗಂ,. ರ‍್ಹಾಳ ವಿರೇಶಪ್ಪ, ಅಂಗಡಿ ದ್ಯಾಮನಗೌಡರ್, ಗೌಳಿ ರಮೇಶ, ಖಾಜಿ ಮೀರ್ ಕಾಶಿಂ ಅಲಿ, ಜಿನ್ನಾ ಟೇಲರ್, ಮಹಮದ್ ಉಸ್ಮಾನ, ಆಯುಬ್ ಖಾನ್, ಕೆ.ವೆಂಕಟೇಶ, ಅನ್ನಪೂರ್ಣಸಿಂಗ್, ಸಿರಿಗೇರಿ ಶ್ರೀನಿವಾಸರಾವ್, ಚೇಗೂರು ಹನುಮಂತಪ್ಪ, ವೀರನಗೌಡ, ಹನುಮಂತರಾಯ, ಶೋಭಾಸಿಂಗ್, ಕೋಡಿ ನಾಗೇಶ, ರಾಜರತ್ನಂ, ಶಿವು ಕಂಪ್ಲಿ ಸೇರಿ ನೂರಾರು ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರಿದ್ದರು.
ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯ ಪರಣ್ಣ ಮುನವಳ್ಳಿ ಗೆಲ್ಲಲು ಹಲವು ದಶಕಗಳಿಂದ ಕಾಂಗ್ರೆಸ್‌ನಿಂದ
ಎಲ್ಲವನ್ನೂ ಪಡೆದ ಎಲ್ಲಾ ಜಾತಿಯ ನಾಯಕರು ಕಾರಣರಾಗಿದ್ದು ಈಗ ಎಲ್ಲವನ್ನು ಅನುಭವಿಸುವಂತಾಗಿದೆ. ಪ್ರಸ್ತುತ ಎಚ್.ಆರ್.ಶ್ರೀನಾಥ ಅವರು ಪುನಹ ಕಾಂಗ್ರೆಸ್ ಸೇರ್ಪಡೆಯಾಗುತ್ತಿರುವುದು ಸಂತೋಷದ ವಿಷಯವಾಗಿದೆ. ಎಚ್.ಜಿ.ರಾಮುಲು ಕುಟುಂಬ ಎಂದೆಂದಿಗೂ ಕಾಂಗ್ರೆಸ್ ಕುಟುಂಬವಾಗಿದ್ದು ಎಚ್.ಆರ್.ಶ್ರೀನಾಥ ಕಾಂಗ್ರೆಸ್‌ಗೆ ಬರುವುದರಿಂದ ಮತ್ತೆ ಹಳೆಯ ವೈಭವ ಬರುತ್ತದೆ. ಇಕ್ಬಾಲ್ ಅನ್ಸಾರಿ, ಮಲ್ಲಿಕಾರ್ಜುನ ನಾಗಪ್ಪ, ಶಿವರಾಮಗೌಡ ಸೇರಿ ಎಲ್ಲಾ ಮುಖಂಡರು ಹಳೆಯ ವಿಚಾರಗಳನ್ನು ಮರೆತರೆ ಕಾಂಗ್ರೆಸ್ ಗೆಲ್ಲಲು ಸುಲಭವಾಗುತ್ತದೆ.
– ರಾಜಮ್ಮ ಮನಿಯಾರ್ ಮಹಿಳಾ ಕಾಂಗ್ರೆಸ್ ಧುರೀಣೆ