Advertisement

ಮಧ್ಯ ಪ್ರದೇಶದಲ್ಲಿ ಬಿಎಸ್ಪಿ-ಕಾಂಗ್ರೆಸ್‌ ಮೈತ್ರಿ?

06:00 AM Jun 03, 2018 | Team Udayavani |

ಭೋಪಾಲ್‌/ಲಕ್ನೋ: ಕರ್ನಾಟಕದಲ್ಲಿ ಜೆಡಿಎಸ್‌ ಜತೆಗೆ ಚುನಾವಣೋತ್ತರ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ ಕಾಂಗ್ರೆಸ್‌, ಅದೇ ರೀತಿ ಮಧ್ಯಪ್ರದೇಶದಲ್ಲಿ ವರ್ಷಾಂತ್ಯದಲ್ಲಿ ಅಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗಾಗಿ ಅಲ್ಲಿನ ಪ್ರಾದೇಶಿಕ ಪಕ್ಷವಾದ ಬಿಎಸ್‌ಪಿ ಜತೆ ಹೊಂದಾಣಿಕೆಗೆ  ಮುಂದಾಗಿದೆ. ಪ್ರತಿ ರಾಜ್ಯಗಳ ಚುನಾವಣೆಗಳಲ್ಲೂ ಬಿಜೆಪಿ ತನಗೆ ಒಡ್ಡುತ್ತಿರುವ ಕಠಿಣ ಸವಾಲುಗಳನ್ನು ಮೆಟ್ಟಲು ಕಾಂಗ್ರೆಸ್‌ ಪಾಲಿಗೆ ಆಯಾ ರಾಜ್ಯಗಳ ಪ್ರಾದೇಶಿಕ ಪಕ್ಷಗಳ ಜತೆಗೆ ಕೈ ಜೋಡಿಸುವುದು ಅನಿವಾರ್ಯವಾಗಿರುವುದರಿಂದ ಈ ಹೊಂದಾಣಿಕೆಗೆ ಪಕ್ಷ ಮುಂದಾಗಿದೆ. 

Advertisement

ಮಧ್ಯಪ್ರದೇಶದಲ್ಲಿ ಚುನಾವಣೆ ಘೋಷಣೆಗೆ ಮೊದಲೇ ಕಾಂಗ್ರೆಸ್‌ ವತಿಯಿಂದಲೇ ಬಿಎಸ್‌ಪಿ ನಾಯಕಿ ಮಾಯಾವತಿಗೆ ಮೈತ್ರಿ ಪ್ರಸ್ತಾಪ ಸಲ್ಲಿಸಲಾಗಿದೆ. ಆದರೆ ಬಿಎಸ್‌ಪಿ ನಾಯಕಿ ಪ್ರತಿಕ್ರಿಯೆ ನೀಡಿಲ್ಲ. ಆದರೆ “ದ ವೈರ್‌’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಕೇಂದ್ರದ ಮಾಜಿ ಸಚಿವ ಕಮಲ್‌ನಾಥ್‌, ಮಧ್ಯಪ್ರದೇಶದಲ್ಲಿ ಬಿಎಸ್‌ಪಿ ಜತೆಗಿನ ಮೈತ್ರಿ ಅಂತಿಮವಾಗಿದೆ ಎಂದಿದ್ದಾರೆ. ಇಷ್ಟೇ ಅಲ್ಲ, ರಾಜಸ್ಥಾನ ಮತ್ತು ಛತ್ತೀಸ್‌ಗಡ ವಿಧಾನಸಭೆ ಚುನಾವಣೆಯಲ್ಲಿಯೂ ಮೈತ್ರಿ ಮಾಡಿಕೊಳ್ಳಲಾಗುತ್ತದೆ ಎಂದಿದ್ದಾರೆ. 20 ವರ್ಷಗಳಿಂದ ಮಧ್ಯಪ್ರದೇಶದಲ್ಲಿ ಬಿಎಸ್ಪಿಗೆ ಶೇ.7ರಷ್ಟು, ಕಾಂಗ್ರೆಸ್‌ಗೆ ಶೇ.36ರಷ್ಟು ಮತಗಳು ಸಿಕ್ಕಿವೆ. ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡರೆ ದಲಿತ ಸಮುದಾಯದ ಮತಗಳನ್ನು ಸೆಳೆಯು ವುದು ಮತ್ತು ಶೇ.45ರಷ್ಟು ಮತ ಪಡೆದಿ ರುವ ಬಿಜೆಪಿಗೆ ಪ್ರಬಲ ಸವಾಲೊಡ್ಡುವುದು ಕಾಂಗ್ರೆಸ್‌ ಲೆಕ್ಕಾಚಾರ. 

80 ಸ್ಥಾನ ಕೇಳಿದ ಬಿಎಸ್ಪಿ?: ಮತ್ತೂಂದು ಬೆಳವಣಿಗೆಯಲ್ಲಿ 2019ರ ಲೋಕಸಭೆ ಚುನಾವಣೆಗಾಗಿ ಉತ್ತರ ಪ್ರದೇಶದ ಒಟ್ಟು 80 ಸ್ಥಾನಗಳ ಪೈಕಿ 40 ಕ್ಷೇತ್ರಗಳನ್ನು ತನಗೇ ಬಿಟ್ಟುಕೊಡಬೇಕು ಎಂದು ಮಾಯಾವತಿ ಬೇಡಿಕೆ ಮುಂದಿಟ್ಟಿದ್ದಾರೆ ಎಂದು ಹೇಳಲಾ ಗಿದೆ. ಇತ್ತೀಚಿನ ಲೋಕಸಭೆ, ವಿಧಾನಸಭೆ ಉಪಚುನಾವಣಾ ಫ‌ಲಿತಾಂಶದಲ್ಲಿ ಪ್ರತಿಪಕ್ಷಗಳ ಮೈತ್ರಿಕೂಟದ ಅಭ್ಯರ್ಥಿಗಳು ಜಯ ಗಳಿಸಿದ್ದರೂ ಮಾಯಾಮತಿ ಮೌನವಾಗಿಯೇ ಇದ್ದಾರೆ. ಫ‌ಲಿತಾಂಶಕ್ಕೆ ಮುನ್ನ ನಡೆದಿದ್ದ ಪಕ್ಷದ ಸಭೆಯಲ್ಲಿ ತನಗೆ ಗೌರವಯುತ ಸ್ಥಾನಗಳನ್ನು ಬಿಟ್ಟುಕೊಟ್ಟರೆ ಮಾತ್ರ ಮೈತ್ರಿಕೂಟ. ಇಲ್ಲದೇ ಇದ್ದರೆ ಏಕಾಂಗಿಯಾಗಿ ಸ್ಪರ್ಧಿಸುತ್ತೇವೆ ಎಂದಿದ್ದರು ಮಾಯಾವತಿ. ಅದು ಈ ಅಂಶವನ್ನು ಪುಷ್ಟೀಕರಿಸುತ್ತದೆ ಎಂದು ಹೆಸರು ಬಹಿರಂಗ ಪ ಡಿಸಲಿಚ್ಛಿದ ಬಿಎಸ್‌ಪಿ ನಾಯಕ “ದ ಟೈಮ್ಸ್‌ ಆಫ್ ಇಂಡಿಯಾ’ಕ್ಕೆ ತಿಳಿಸಿದ್ದಾರೆ. 

ಮತ್ತೂಂದೆಡೆ ದೆಹಲಿಯಲ್ಲಿ ಮುಂದಿನ ಚುನಾವಣೆಗಾಗಿ ಆಮ್‌ ಆದ್ಮಿ ಪಕ್ಷದ ಜತೆಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಪಕ್ಷದ ಕಾರ್ಯಕರ್ತರು, ನಾಯಕರಿಗೆ ಅದು ಸಮ್ಮತವಿಲ್ಲವೆಂದು ದೆಹಲಿ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಅಜಯ್‌ ಮಕೇನ್‌ ತಿಳಿಸಿದ್ದಾರೆ.

ಕರ್ನಾಟಕ ಮಾದರಿಯಲ್ಲಿ  ಕೊಂಚ ಬದಲು ಮಾಡಿ ಅನುಸರಿಸಿದ ಕಾಂಗ್ರೆಸ್‌

Advertisement

ಉಪ ಚುನಾವಣಾ ಫ‌ಲಿತಾಂಶದ ಬಳಿಕ ಇದುವರೆಗೆ ಮೌನವಾಗಿರುವ ಮಾಯಾವತಿ

Advertisement

Udayavani is now on Telegram. Click here to join our channel and stay updated with the latest news.

Next