Advertisement

ಕಾಂಗ್ರೆಸ್‌ ಹೇಳಿಕೆ ಹಾಸ್ಯಾಸ್ಪದ: ಬಿಜೆಪಿ 

03:55 AM Jul 08, 2017 | Team Udayavani |

ಉಡುಪಿ: ನರ್ಮ್ ಬಸ್‌ಗಳ ಸಂಚಾರಕ್ಕೆ ಹೈಕೋರ್ಟ್‌ ನೀಡಿರುವ ತಡೆಯಾಜ್ಞೆಯ ಹಿಂದೆ ಬಿಜೆಪಿ ಕುಮ್ಮಕ್ಕು ಇದೆ ಎಂದು ಯುವ ಕಾಂಗ್ರೆಸ್‌ ಮಾಡಿರುವ ಆರೋಪ ಹಾಸ್ಯಾಸ್ಪದ ಎಂದು ನಗರ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಶ್ರೀಶ ನಾಯಕ್‌ ಮತ್ತು  ಯುವ ಮೋರ್ಚಾ ಅಧ್ಯಕ್ಷ ಅಕ್ಷಿತ್‌ ಶೆಟ್ಟಿ ಹೇಳಿದರು. 

Advertisement

ಜಿಲ್ಲೆಯಲ್ಲಿ ಸರಕಾರಿ ನರ್ಮ್ ಬಸ್‌ಗಳ ಸಂಚಾರಕ್ಕೆ ತಡೆ ನೀಡಬೇಕು ಎಂದು ಕೋರ್ಟ್‌ ಮೊರೆ ಹೋದವರು ಖಾಸಗಿ ಬಸ್‌ ಮಾಲಕರು. ಆ ಪೈಕಿ ಹೆಚ್ಚಿನ ಮಾಲಕರು ಕಾಂಗ್ರೆಸ್ಸಿಗರಾಗಿದ್ದಾರೆ. ಡಾ ವಿ. ಎಸ್‌. ಆಚಾರ್ಯ ಅವರು ಕರಾವಳಿ ಜಿಲ್ಲೆಗಳಲ್ಲಿ ಮೊದಲ ಬಾರಿಗೆ ಸರಕಾರಿ ಹವಾನಿಯಂತ್ರಿತ ಬಸ್ಸುಗಳನ್ನು ತಂದವರು. ಸಚಿವ ಪ್ರಮೋದ್‌ ಮಧ್ವರಾಜ್‌ ಅವರು ಕಾಂಗ್ರೆಸ್‌ ಪಕ್ಷದ ಕೆಲವು ಪ್ರಭಾವಿಗಳ ಖಾಸಗಿ ಲಾಬಿ ಎದುರಿಸಲಾಗದೆ ತಮ್ಮ ವೈಫ‌ಲ್ಯ ಮುಚ್ಚಿ ಹಾಕಲು ಬಿಜೆಪಿಯ ಮೇಲೆ ಗೂಬೆ ಕೂರಿಸಿ ಜನರ ಅನುಕಂಪ ಗಳಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next