Advertisement
ಜನತಾ ದರ್ಶನ ಕಾರ್ಯಕ್ರಮ ಉದ್ಘಾಟನೆಗೆ ಬಂದಿದ್ದ ಅವರು ಮಾಧ್ಯಮಗಳ ಜೊತೆ ಮಾತನಾಡಿದರು.
Related Articles
Advertisement
ಹಿಂದೆ ರಾಜ್ಯದಲ್ಲಿ ಈಗ ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಇದೆ. ಅವಾಗ ಕಾವೇರಿ ನದಿ ನೀರು ಹಂಚಿಕೆ ವಿಚಾರ ಬಗೆಹರೆಸಬೇಕಿತ್ತು. ಆಗ ಮೌನವಾಗಿದ್ದ ಬಿಜೆಪಿ, ಈಗ ರಾಜ್ಯದಲ್ಲಿ ಬೊಬ್ಬೆ ಹಾಕುತ್ತಿದೆ. ಬಿಜೆಪಿ 26 ಸಂಸದರು ತುಟಿ ಪಿಟಕ್ ಎನ್ನುತ್ತಿಲ್ಲ. ರೈತರ ಪರವಾಗಿ ಬಿಜೆಪಿಯವರು ಎಂದೂ ಕೆಲಸ ಮಾಡಿಲ್ಲ. ನಾವು ರೈತರ ಪರವಾಗಿ ನಿಲ್ಲುತ್ತೇವೆ ಎಂದು ಮಂಕಾಳ ವೈದ್ಯ ಹೇಳಿದರು.
ಕಾವೇರಿ ನೀರಿನ ವಿಚಾರವಾಗಿ ಜೆಡಿಎಸ್ – ಬಿಜೆಪಿ ರಸ್ತೆಗೆ ಇಳಿದು ಹೋರಾಟ ಮಾಡುತ್ತಿದ್ದಾರೆ. ಅವರು ಕಾಂಗ್ರೆಸ್ ಪಕ್ಷವನ್ನ ಹೆದರಿಸಲಿಕ್ಕೆ ಹೊರಟಿದ್ದಾರೆ. ಆದರೆ ನಾವು ಯಾವುದೇ ಕಾರಣಕ್ಕೂ ಹೆದರವುದಿಲ್ಲ. ನಾವು ರಾಜಕಾರಣ ಮಾಡುತ್ತಿಲ್ಲ, ಜನಪರ ಕೆಲಸ ಮಾಡುತ್ತಿದ್ದೆವೆ ಎಂದರು.
ಬೀದಿಗಿಳಿದು ಹೋರಾಟ ಮಾಡಿ ನಮ್ಮ ದಾರಿ ತಪ್ಪಿಸಲಿಕ್ಕೆ ನೋಡುತ್ತಿದ್ದಾರೆ. ಅವರು ಏನೇ ಮಾಡಿದರು ನಾವು ಹೆದರುವುದಿಲ್ಲ. ಜನ ನಮ್ಮ ಪರವಾಗಿದ್ದರಿಂದ ಅವರು ಹೆದರಿಕೊಂಡು ಬೀದಿಗಿಳಿದಿದ್ದಾರೆ ಎಂದು ಸಚಿವ ಮಂಕಾಳ ವೈದ್ಯ ನುಡಿದರು.
ಮೂರು ಡಿಸಿಎಂ ಹುದ್ದೆ ಸೃಷ್ಟಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ವೈದ್ಯರು, ಮಂತ್ರಿ, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಯನ್ನು ಹೈಕಮಾಂಡ್ ಹಾಗೂ ಎಲ್ಲ ಶಾಸಕರು ಸೇರಿ ಆಯ್ಕೆ ಮಾಡಿದ್ದಾರೆ. ಮೂರು ಡಿಸಿಎಂ ಬೇಕಾದರೆ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಹೈಕಮಾಂಡ ನಿರ್ಧಾರವೇ ಪೈನಲ್ ಎಂದ ಸಚಿವರು, ಇಂತಹ ವಿಷಯದಲ್ಲಿ ನಮ್ಮ ಬೆಂಬಲ ಮುಖ್ಯವಲ್ಲ, ಹೈಕಮಾಂಡ್ ಇಂತಹ ವಿಚಾರದಲ್ಲಿ ಏನು ಮಾಡುತ್ತದೆ ಎಂಬುವುದೇ ಮುಖ್ಯ ಎಂದು ಸಚಿವ ಮಂಕಾಳ ವೈದ್ಯ ಹೇಳಿದರು.