Advertisement

ದುಬಾರಿ ದುನಿಯಾ: ಬಿಜೆಪಿ ಸರ್ಕಾರದಿಂದ ‘ತೆರಿಗೆ ದಾಳಿ’ ಎಂದ ಕಾಂಗ್ರೆಸ್

04:24 PM Jul 18, 2022 | Team Udayavani |

ಬೆಂಗಳೂರು: ಕಳೆದ ತಿಂಗಳು ನಡೆದ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಆಹಾರ ಉತ್ಪನ್ನಗಳ ಮೇಲೆ ಜಿಎಸ್‌ಟಿ ವಿಧಿಸಲು ನಿರ್ಧರಿಸಲಾಗಿದ್ದು, ಇಂದಿನಿಂದ ಅಗತ್ಯ ವಸ್ತುಗಳು, ಆಹಾರ ವಸ್ತುಗಳ ದರ ಹೆಚ್ಚಳವಾಗುತ್ತದೆ. ಹೀಗಾಗಿ ದುಬಾರಿ ದುನಿಯಾ ಎಂಬ ಹ್ಯಾಶ್ಟ್ಯಾಗ್ ಅಡಿ ಸರಣಿ ಕೂ ಮಾಡಿರುವ ಕಾಂಗ್ರೆಸ್ ಈ ನಿರ್ಧಾರವನ್ನು ಖಂಡಿಸಿದೆ.

Advertisement

ಅಕ್ಕಿ, ಮೊಸರು, ಹಾಲು ಸೇರಿದಂತೆ ಬಡ, ಮಧ್ಯಮ ವರ್ಗದ ಅಗತ್ಯಗಳನ್ನು ಗುರಿಯಾಗಿಸಿ ಸರ್ಕಾರ ’ತೆರಿಗೆ ದಾಳಿ ನಡೆಸಿದೆ. ಕಪ್ಪು ಹಣ ಎಲ್ಲಿ ಹೋಯ್ತು? ನೋಟ್ ಬ್ಯಾನ್‌ನಿಂದ ಎಷ್ಟು ಹಣ ಸಿಕ್ಕಿತು? ಸಿರಿವಂತ ಉದ್ಯಮಿಗಳಿಗೆ ಎನ್ ಪಿಎ ಉಡುಗೊರೆ ಕೊಟ್ಟಿದ್ದೇಕೆ ಎಂದು ಜನರನ್ನು ಪೀಡಿಸಿ ಬೊಕ್ಕಸ ತುಂಬಿಸುವ ಸರ್ಕಾರ ಉತ್ತರಿಸಲಿ ಎಂದು ಆಗ್ರಹಿಸಿದೆ.

ಇದನ್ನೂ ಓದಿ:ಕೇಂದ್ರದ ಜಿಎಸ್‌ ಟಿಯಿಂದ ಜನ ದಂಗೆ ಏಳುವ ಸ್ಥಿತಿ ಬರುತ್ತದೆ: ಭೀಮಣ್ಣ‌ ನಾಯ್ಕ

ಬಡವರು, ಮಧ್ಯಮ ವರ್ಗದವರು ಬದುಕಲೇಬಾರದು ಎಂದು ಬಿಜೆಪಿ ಸರ್ಕಾರ ನಿರ್ಧರಿಸಿದಂತಿದೆ. ಉದ್ಯೋಗ ನೀಡಬೇಕಾದ, ಆರ್ಥಿಕ ಸಬಲೀಕರಣ ಮಾಡಬೇಕಾದ ಸರ್ಕಾರ ಬೆಲೆ ಏರಿಕೆಯ ’ಸರ್ಜಿಕಲ್ ಸ್ಟ್ರೈಕ್’ ನಡೆಸುತ್ತಿದೆ. ನೇರವಾಗಿ ಬಡವರ ಅನ್ನದ ತಟ್ಟೆಗೆ ಕೈ ಹಾಕಿದೆ. ಬಸವರಾಜ ಬೊಮ್ಮಾಯಿ ಅವರೇ, ಜನಾರ್ದನ್ ಹೋಟೆಲ್ ಮೆನು ಕಾರ್ಡ್‌ನ್ನು ಈಗ ನೋಡಿ ಎಂದು ಟೀಕಿಸಿದೆ.

Koo App

Advertisement

ಬಡವರು, ಮದ್ಯಮವರ್ಗದವರು ಬದುಕಲೇಬಾರದು ಎಂದು ಬಿಜೆಪಿ ಸರ್ಕಾರ ನಿರ್ಧರಿಸಿದಂತಿದೆ. ಉದ್ಯೋಗ ನೀಡಬೇಕಾದ, ಆರ್ಥಿಕ ಸಬಲೀಕರಣ ಮಾಡಬೇಕಾದ ಸರ್ಕಾರ ಬೆಲೆ ಏರಿಕೆಯ ’ಸರ್ಜಿಕಲ್ ಸ್ಟ್ರೈಕ್’ ನಡೆಸುತ್ತಿದೆ. ನೇರವಾಗಿ ಬಡವರ ಅನ್ನದ ತಟ್ಟೆಗೆ ಕೈ ಹಾಕಿದೆ. @bsbommai ಅವರೇ, ಜನಾರ್ದನ್ ಹೋಟೆಲ್ ಮೆನು ಕಾರ್ಡ್‌ನ್ನು ಈಗ ನೋಡಿ! #ದುಬಾರಿದುನಿಯಾ

ಕರ್ನಾಟಕ ಕಾಂಗ್ರೆಸ್ (@inckarnataka) 18 July 2022

ವಿದ್ಯಾರ್ಥಿಗಳ ಮೇಲೆ ಬೆಲೆ ಏರಿಕೆಯ ಸರ್ಜಿಕಲ್ ಸ್ಟ್ರೈಕ್! ವಿದ್ಯಾರ್ಥಿಗಳು ಬಳಸುವ ಪರಿಕರಗಳಾದ ಅಟ್ಲಾಸ್, ಪೆನ್ಸಿಲ್ ಶಾರ್ಪ್‌ನರ್, ಮ್ಯಾಪ್, ಮುಂತಾದವುಗಳ ಮೇಲೆ 18% ತೆರಿಗೆ ವಿಧಿಸಿ, ವಿದ್ಯಾರ್ಥಿಗಳಿಂದಲೂ ಸುಲಿಗೆ ಮಾಡಿ ಸರ್ಕಾರ ನಡೆಸುವ ದುರ್ಗತಿ ಬಂದಿದೆಯೇ ಬಿಜೆಪಿಗೆ? ಬಿಜೆಪಿಗೆ ಶಿಕ್ಷಣದ ಬಗ್ಗೆ ಏಕಿಷ್ಟು ಅಸಹನೆ ಎಂದು ಕಾಂಗ್ರೆಸ್ ‘ಕೂ’ ಮಾಡಿದೆ.

Koo App

ವಿದ್ಯಾರ್ಥಿಗಳ ಮೇಲೆ ಬೆಲೆ ಏರಿಕೆಯ ಸರ್ಜಿಕಲ್ ಸ್ಟ್ರೈಕ್! ವಿದ್ಯಾರ್ಥಿಗಳು ಬಳಸುವ ಪರಿಕರಗಳಾದ ಅಟ್ಲಾಸ್, ಪೆನ್ಸಿಲ್ ಶಾರ್ಪ್‌ನರ್, ಮ್ಯಾಪ್, ಮುಂತಾದವುಗಳ ಮೇಲೆ 18% ತೆರಿಗೆ ವಿಧಿಸಿ, ವಿದ್ಯಾರ್ಥಿಗಳಿಂದಲೂ ಸುಲಿಗೆ ಮಾಡಿ ಸರ್ಕಾರ ನಡೆಸುವ ದುರ್ಗತಿ ಬಂದಿದೆಯೇ ಬಿಜೆಪಿಗೆ? ಬಿಜೆಪಿಗೆ ಶಿಕ್ಷಣದ ಬಗ್ಗೆ ಏಕಿಷ್ಟು ಅಸಹನೆ? #ದುಬಾರಿದುನಿಯಾ

ಕರ್ನಾಟಕ ಕಾಂಗ್ರೆಸ್ (@inckarnataka) 18 July 2022

Advertisement

Udayavani is now on Telegram. Click here to join our channel and stay updated with the latest news.

Next