ಚಿಕ್ಕಮಗಳೂರು: ಅಲ್‍ಖೈದಾ-ಕಾಂಗ್ರೆಸ್ ಒಂದೇ ಕಡೆ ಬ್ಯಾಟಿಂಗ್ ಮಾಡುತ್ತಿದ್ದಾರೆ. ಹೋಲಿಕೆ ಮಾಡುವುದಾದರೆ ಕಾಂಗ್ರೆಸ್-ಅಲ್‍ಖೈದಾ ಮಧ್ಯೆ ಹೋಲಿಕೆ ಮಾಡಬೇಕು. ಸೂತ್ರದಾರಿ ಅಲ್‍ಖೈದಾನೋ, ಪಾತ್ರದಾರಿ ಕಾಂಗ್ರೆಸ್ಸೋ ಗೊತ್ತಿಲ್ಲ ಅದು ಗೊತ್ತಾಗಬೇಕಿದೆ ಎಂದು ಅಲ್‍ಖೈದಾ ವಿಡಿಯೋ ಕುರಿತು ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ತಿರುಗೇಟು ನೀಡಿದರು.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸಿಗರು ಸೋಲಿನ ಹತಾಶೆಯಿಂದ ಬುದ್ಧಿ ಭ್ರಮಣೆಯಾದಂತೆ ಮಾತನಾಡುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ 399ರಲ್ಲಿ ಸ್ಪರ್ಧೆ ಮಾಡಿ 387ರಲ್ಲಿ ಠೇವಣಿ ಹೋದರೆ ಹತಾಶೆ ಕಾಡುತ್ತದೆ, ಪಂಜಾಬ್ ನಲ್ಲೂ ಸರ್ಕಾರ ಕಳೆದುಕೊಂಡು ಹತಾಶರಾಗಿ ಬುದ್ದಿ ಭ್ರಮಣೆಯಾದಂತೆ ಮಾತನಾಡುತ್ತಿದ್ದಾರೆ ಎಂದರು.
ಆರ್ ಎಸ್ಎಸ್ ದೇಶಭಕ್ತ ಹಾಗೂ ದೇಶ ಕಾಯುವ ಸಂಘಟನೆ. ಅಲ್‍ಖೈದಾ ಬಾಂಬಿನ ಮೇಲೆ ವಿಶ್ವಾಸವಿಟ್ಟಿರುವ ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆ. ಇವೆರಡರ ನಡುವೆ ಹೋಲಿಕೆ ಬುದ್ಧಿ ಇಲ್ಲದವರು ಮಾತ್ರ ಮಾಡುತ್ತಾರೆ. ಕಾಂಗ್ರೆಸ್ಸಿಗರು ಅಲ್‍ಖೈದಾ ಮೇಲೆ ಕರುಣೆ ತೋರುತ್ತಿದ್ದಾರೆ. ರಾಷ್ಟ್ರಭಕ್ತ ಸಂಘಟನೆ ಜೊತೆ ಹೋಲಿಕೆ ಮಾಡುತ್ತಾ ಕಾಂಗ್ರೆಸ್ ಅಲ್‍ಖೈದಾಗೆ ವಕಾಲತ್ತು ವಹಿಸುತ್ತಿದೆ ಎಂದು ಸಿ.ಟಿ ರವಿ ಹೇಳಿದರು.
ಇದನ್ನೂ ಓದಿ:4 ದಿನದ ಹಿಂದೆ ನಾಪತ್ತೆಯಾಗಿದ್ದ ಯುವತಿಯ ಶವ ಅಸಾರಾಂ ಆಶ್ರಮದೊಳಗಿನ ಕಾರಿನಲ್ಲಿ ಪತ್ತೆ
ಚುನಾವಣಾ ಮಂತ್ರ: ರಾಜ್ಯ ಸಚಿವ ಸಂಪುಟ ಪುನಾರಚನೆ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಿ.ಟಿ ರವಿ, “ಮಂತ್ರಿಯಾಗುವವರೇ ಇಷ್ಟೊಂದು ತಲೆಕೆಡಿಸಿಕೊಂಡಿಲ್ಲ. ಅವರೇ ಚುನಾವಣೆ ಮನಸ್ಥಿತಿಗೆ ಬಂದು ಬಿಟ್ಟಿದ್ದಾರೆ. ನೀವ್ಯಾಕೆ ಇಷ್ಟೊಂದು ತಲೆಕೆಡಿಸಿಕೊಂಡಿದ್ದೀರಾ? ಎಂದು ಪ್ರಶ್ನಿಸಿದರು.