Advertisement
ಗ್ರಾಮಪಂಚಾಯತಿ ಚುನಾವಣೆಯಲ್ಲಿ ಗೆದ್ದಿರುವ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಅಭಿನಂದಿಸಲು ಹಮ್ಮಿಕೊಂಡಿದ್ದ ಜನಸೇವಕ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶದ ಅಭಿವೃದ್ಧಿಗೆ ಮಾರಕವಾದ ಕಾಂಗ್ರೆಸ್ ದೇಶದಲ್ಲಿ ಉಳಿಯಬಾರದು. ಪ್ರಪಂಚದಲ್ಲಿ ದೊಡ್ಡ ಪಕ್ಷ ಬಿಜೆಪಿ. ಅಧಿಕ ಎಸ್ ಸಿ – ಎಸ್ ಟಿ ಸಂಸತ್ ಸದಸ್ಯರಿರುವ ಪಕ್ಷ ನಮ್ಮದು.
Related Articles
Advertisement
ಪ್ರತಿ ಹಳ್ಳಿಯಲ್ಲಿ ಯುವಮೋರ್ಚಾ ಬಲಿಷ್ಠವಾಗಬೇಕು. ತಾಪಂ, ಜಿಪಂನಲ್ಲಿ ಶೇ. 80 ರಷ್ಟು ಸ್ಥಾನ ಬಿಜೆಪಿ ಗೆಲ್ಲಲಿದೆ. ಮತದಾರರೇ ಜನಪ್ರತಿನಿಧಿಗಳಿಗೆ ಪ್ರಭುಗಳು. ಜನರಿಗೆ ಯೋಜನೆ ತಲುಪಿಸಬೇಕು. ಇತ್ತೀಚೆಗೆ ನಡೆದ ಎಲ್ಲ ಉಪಚುನಾವಣೆಯಲ್ಲಿ ಬಿಜೆಪಿ ಗೆದ್ದಿದೆ. ಇಲ್ಲಿಯವರೆಗೆ ಬೇರೆಯವರ ಅವಲಂಬನೆಯಿಂದ ಅಧಿಕಾರ ಹಿಡಿದ್ದೇವೆ. ಆದ್ದರಿಂದ ಸ್ವತ ಬಲದಿಂದ ಅಧಿಕಾರಕ್ಕೆ ಬರಬೇಕು ಎಂದರು.
ಸಾಧನೆ ಮಾತನಾಡಬೇಕು. ಮಾತು ಸಾಧನೆಯಾಗಬಾರದು. ನಮ್ಮ ಕೆಲಸ ಗುರುತಿಸಬೇಕು. ಇದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆರ್ ಆರ್ ಎಸ್ ನ ಪ್ರಚಾರಕರು ಸಂಸಾರದ ಬಗ್ಗೆ ಚಿಂತನೆ ಮಾಡದೇ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಮಾತನಾಡಿ, ಗ್ರಾಪಂ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ಆಯ್ಕೆ ಯಾಗಿದ್ದಾರೆ. ಗ್ರಾಮ ಸ್ವರಾಜ್ಯ ಪರಿಕಲ್ಪನೆಯಡಿ ಅಭಿವೃದ್ಧಿ ಕಾರ್ಯ ಮಾಡಬೇಕು. 3500 ಗ್ರಾಪಂ ಬಿಜೆಪಿಯಲ್ಲಿ ಅಧಿಕಾರ ಹಿಡಿದಿದ್ದೇವೆ. ಕನಕಪುರ, ಮಂಡ್ಯ ಹಾಸನದಲ್ಲಿ ಹೆಚ್ಚು ಸ್ಥಾನ ಗೆದ್ದಿದ್ದೇವೆ. ಬಾದಾಮಿಯಲ್ಲಿ 18 ಗ್ರಾಪಂ ಬಿಜೆಪಿ ವಶವಾಗಿದೆ. ಹಾಸನದಲ್ಲಿ ಪರಿವರ್ತನೆಯಾಗಿದೆ. ಮಂಡ್ಯದಲ್ಲಿ 80 ಸ್ಥಾನ ಬಿಜೆಪಿ ಸದಸ್ಯರು ಗೆದ್ದಿದ್ದಾರೆ. ಪರಿವರ್ತನೆಯ ಗಾಳಿ ಬೀಸಿದೆ. ಮುಂದಿನ ಚುನಾವಣೆಯಲ್ಲಿ 150 ಸ್ಥಾನ ಖಚಿತವಾಗಿ ಗೆಲ್ಲಲಿದ್ದೇವೆ ಎಂದರು.
ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮಾತನಾಡಿ, ಬಿಜೆಪಿ ಗ್ರಾಪಂ ನಲ್ಲಿ 50 ಸಾವಿರಕ್ಕೂ ಅಧಿಕ ಸ್ಥಾನ ಗಳಿಸಿದೆ. ಜಿ.ಪಂ ಚುನಾವಣೆ, ಬಿಬಿಎಂಪಿ ಹೆಚ್ಚಿನ ಸ್ಥಾನ ಗೆಲ್ಲಿಸಬೇಕು. ಬಿಜೆಪಿಯ ಮುಖ್ಯ ಉದ್ದೇಶ ಜನಸೇವೆಯಾಗಿದೆ. ಬೇರೆ ಪಕ್ಷಕ್ಕಿಂತ ಬಿಜೆಪಿ ಭಿನ್ನವಾಗಿದೆ. ಬಿಜೆಪಿ ಒಂದು ರಾಜ್ಯ, ದೇಶದಲ್ಲಿ ಮಾತ್ರವಲ್ಲ ವಿಶ್ವದಲ್ಲಿ ಹೆಸರುವಾಸಿಯಾಗಿದೆ. ಗ್ರಾಪಂ ಸದಸ್ಯರಿಗೆ ಅಭಿನಂದನೆ ಎಂದರು.