Advertisement
ನಗರದ ಬಿಜೆಪಿ ಕಾರ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ಮಹಿಳಾ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೇಂದ್ರ ದಿಂದ 400 ಕೋಟಿ ರೂ. ವೆಚ್ಚದಲ್ಲಿ ಪ್ರತಿ ತಿಂಗಳು 57 ಲಕ್ಷ ಮೆಟ್ರಕ್ ಟನ್ ಗೋಧಿ, 1.65 ಲಕ್ಷ ಟನ್ ಅಕ್ಕಿ ಬರುತ್ತಿದೆ. 1 ಕೆಜಿ ಅಕ್ಕಿ 31 ರೂ. ಹಾಗೂ 1 ಕೆಜಿ ಗೋಧಿಗೆ 21 ರೂ.ನಂತೆ ಖರೀದಿ ಮಾಡಿ ರಾಜ್ಯಕ್ಕೆ ಕಳುಹಿಸುತ್ತಿದೆ . ಇದರಲ್ಲಿ ರಾಜ್ಯ ಸರ್ಕಾ ರದ ಪಾಲು ಒಂದು ಕೆಜಿ ಅಕ್ಕಿ ಯದು 3 ರೂ., ಗೋಧಿಯ 2 ರೂ. ಮಾತ್ರ. ಈ ಅಕ್ಕಿ-ಗೋಧಿಯನ್ನು ರಾಜ್ಯದ ಬಡವರಿಗೆ ವಿತರಣೆ ಮಾಡಿ ಅನ್ನಭಾಗ್ಯ ಯೋಜನೆ ನನ್ನದು ಎಂದು ಬೀಗು ತ್ತಿದೆ. ಕೇಂದ್ರ ದಿಂದ ಅಕ್ಕಿ ಯನ್ನು ಕಾಂಗ್ರೆಸ್ ಪುಡಾರಿಗಳು ಪಾಲಿಶ್ ಮಾಡಿ ಬೇರೆ ರಾಜ್ಯಗಳಿಗೆ ಮಾರಾಟ ಮಾಡುತ್ತಿದ್ದಾರೆ. ಇದನ್ನು ಜನತೆ ಅರ್ಥ ಮಾಡಿಕೊಳ್ಳಬೇಕು ಎಂದರು.
Related Articles
Advertisement
ಕೊಪ್ಪಳ ಸಂಸದ ಕರಡಿ ಸಂಗಣ್ಣ, ಗಂಗಾವತಿ ಶಾಸಕ ಪರಣ್ಣಮನವಳ್ಳಿ, ಯಲಬುರ್ಗಾ ಶಾಸಕ ಹಾಲಪ್ಪಚಾರ್, ಬಿಜೆಪಿ ಮಹಿಳಾ ಮೋರ್ಚಾ ಉಪಾ ಧಕ್ಷೆ ರಾಣಿ ಸಂಯುಕ್ತ, ಮಾಜಿ ಶಾಸಕ ಎಚ್.ಆರ್.ಗವಿಯಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ, ತಾಲೂಕು ಅಧ್ಯಕ್ಷ ಅನಂತಪದ್ಮನಾಭ, ಹಿರಿಯ ಮುಖಂಡ ಅಶೋಕ್ ಜೀರೆ, ಕವಿ ರಾಜ್ ಅರಸ್, ಚಂದ್ರಕಾಂತ್ ಕಾಮತ್, ಶಂಕರ್ ಮೇಟಿ ಇನ್ನಿತರರಿದ್ದರು.