Advertisement

ಕಾಂಗ್ರೆಸ್‌ ವರದಿ ಸುಳ್ಳಿನ ಕಂತೆ: ಎನ್‌.ರವಿಕುಮಾರ್‌

11:37 PM Oct 14, 2019 | Lakshmi GovindaRaju |

ಬೆಂಗಳೂರು: ಕಾಂಗ್ರೆಸ್‌ನ ಪದಾಧಿಕಾರಿಗಳು ರಾಜ್ಯದ ಪ್ರವಾಹವನ್ನು ಅಧ್ಯಯನ ಮಾಡದೇ ಕಚೇರಿಯಲ್ಲೇ ಕುರಿತು ಬರೆದ ಸುಳ್ಳಿನ ಕಂತೆಯನ್ನು ವರದಿ ರೂಪದಲ್ಲಿ ಬಿಡುಗಡೆ ಮಾಡಿದ್ದಾರೆಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ್‌ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್‌ ಬಿಡುಗಡೆ ಮಾಡಿರುವ ವರದಿಯಲ್ಲಿ ಸಾವಿರ ಗ್ರಾಮಗಳ ಪುನರ್‌ ನಿರ್ಮಾಣ ಮಾಡಬೇಕು ಎಂದಿದ್ದಾರೆ.

Advertisement

ಆ ಒಂದು ಸಾವಿರ ಗ್ರಾಮಗಳ ಪಟ್ಟಿ ನೀಡಿ ಎಂದು ಸವಾಲು ಹಾಕಿದರು. ಕಾಂಗ್ರೆಸ್‌ ಪಕ್ಷವು ಅತ್ಯಂತ ಉತ್ಪ್ರೇಕ್ಷೆಯುಳ್ಳ ಹಾಗೂ ಬೋಗಸ್‌ ವರದಿ ಬಿಡುಗಡೆ ಮಾಡಿದೆ. ಪ್ರವಾಹದಿಂದ 35 ಸಾವಿರ ಕಿಲೋ ಮೀಟರ್‌ ರಸ್ತೆ ಹಾಳಾಗಿದೆ ಎಂದಿದ್ದಾರೆ. ವಾಸ್ತವವಾಗಿ 5 ಕಿ.ಮೀ. ರಸ್ತೆ ನಾಶವಾಗಿರಬಹುದು. 30 ಲಕ್ಷ ಎಕರೆ ಬೆಳೆ ಹಾನಿ ಎಂದಿದ್ದಾರೆ. 24 ಲಕ್ಷ ಎಕರೆ ಬೆಳೆ ಹಾನಿಯಾಗಿರಬಹುದು. ಮೂರು ಲಕ್ಷ ಮನೆಗಳು, 3 ಸಾವಿರ ಹಳ್ಳಿಗಳು ಭಾಗಶಃ ನೀರಿನಿಂದ ತುಂಬಿವೆ ಎಂದು ಸುಳ್ಳಿನ ಕಂತೆಯನ್ನೇ ಬಿಡುಗಡೆ ಮಾಡಿದ್ದಾರೆ.

ಇದಕ್ಕೆ ಸ್ಪಷ್ಟೀಕರಣ ನೀಡಬೇಕೆಂದು ಆಗ್ರಹಿಸಿದರು. ಕಾಂಗ್ರೆಸ್‌ ನಾಯಕರಾದ ಧ್ರುವ ನಾರಾಯಣ್, ಆರ್‌.ವಿ.ದೇಶಪಾಂಡೆ, ಮಹದೇವಪ್ಪ ಅವರ ವರದಿಗಳನ್ನು ನಂಬಲು ಸಾಧ್ಯವಿಲ್ಲ. ಬರೀ ಆರೋಪ ಮತ್ತು ಚಿತ್ರಗಳಿವೆ. ಸಾವಿರ ಗ್ರಾಮಗಳು ನೆಲ ಸಮವಾಗಿವೆ ಎಂದು ಕಾಂಗ್ರೆಸ್‌ ನಾಯಕರು ವರದಿಯಲ್ಲಿ ಹೇಳಿದ್ದಾರೆ. ಆ ಗ್ರಾಮಗಳ ಪಟ್ಟಿ ನೀಡಲಿ ಎಂದು ಸವಾಲೆಸೆದರು.

Advertisement

Udayavani is now on Telegram. Click here to join our channel and stay updated with the latest news.

Next