Advertisement
ಕೆಪಿಸಿಸಿ ಕಚೇರಿಯಿಂದ ರಾಜಭವನಕ್ಕೆ ತೆರಳಿ, ಮುತ್ತಿಗೆ ಹಾಕುತ್ತೇವೆ, ನಾಡಿದ್ದು ಜಿಲ್ಲಾ ಕೇಂದ್ರಗಳಲ್ಲಿ ಧರಣಿ ಮಾಡುತ್ತೇವೆ ಎಂದು ಬುಧವಾರ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತುರ್ತು ಸುದ್ದಿಗೊಷ್ಠಿ ನಡೆಸಿ ತಿಳಿಸಿದ್ದಾರೆ.
ಇಡಿ ರಾಹುಲ್ ಗಾಂಧಿ ವಿಚಾರಣೆ ನಡೆಸುತ್ತಿದೆ.ಒಂದೆರಡು ಗಂಟೆ ವಿಚಾರಣೆ ಮಾಡಿ ಕಳುಹಿಸಬೇಕು. ಆದರೆ 10 ರಿಂದ 14 ಗಂಟೆ ಇಡಿ ವಿಚಾರಣೆ ನಡೆಸುತ್ತಿದ್ದಾರೆ. ಇಡಿ ಮೂಲಕ ನಮ್ಮ ನಾಯಕ ರಾಹುಲ್ ಗಾಂಧಿ ಅವರಿಗೆ ಗೆ ಕಾಟ ಕೊಡುತ್ತಿದ್ದಾರೆ. ಸೋನಿಯಾ ಗಾಂಧಿ ಈ ದೇಶದ ಭವಿಷ್ಯಕ್ಕಾಗಿ ಒಬ್ಬ ಆರ್ಥಿಕ ತಜ್ಞರನ್ನು ಪ್ರಧಾನಿ ಮಾಡಿದರು. ತನಗೆ ಸಿಗಬೇಕಾದ ಪಿಎಂ ಹುದ್ದೆಯನ್ನು ಡಾ. ಮನಮೋಹ ಸಿಂಗ್ ಅವರಿಗೆ ನೀಡಿದರು. ರಾಹುಲ್ ಗಾಂಧಿ ಕೂಡ ಪ್ರಧಾನಿ ಆಗಬೇಕಿತ್ತು ಎಂದು ಕಿಡಿ ಕಾರಿದರು.
Related Articles
Advertisement
ನವದೆಹಲಿಯ ಎಐಸಿಸಿ ಕಚೇರಿಗೆ ಕಾಂಗ್ರೆಸ್ ನಾಯಕರ ಪ್ರವೇಶಕ್ಕೆ ನಿರ್ಬಂಧ, ಪೊಲೀಸರ ಮೂಲಕ ಮಾಡಿಸುತ್ತಿರುವ ದೌರ್ಜನ್ಯ, ನಮ್ಮ ನಾಯಕರಿಗೆ ಕೊಡುತ್ತಿರುವ ಕಿರುಕುಳವನ್ನು ಖಂಡಿಸಿ ಜೂನ್ 16 ರಂದು ಬೆಳಗ್ಗೆ 10 ಗಂಟೆಗೆ ‘ರಾಜಭವನ ಚಲೋ’ ಹಮ್ಮಿಕೊಳ್ಳಲಾಗಿದೆ. ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಈ ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದು ಕಾರ್ಯಕರ್ತ ರಿಗೆ ಕರೆ ನೀಡಲಾಗಿದೆ.
ಕೆಪಿಸಿಸಿ ಕಚೇರಿಗೆ ಡಿಸಿಪಿ ಭೀಮಾಶಂಕರ್ ಗುಳೇದ್ ಆಗಮನ
ಬೆಂಗಳೂರು ಉತ್ತರ ಡಿಸಿಪಿ ಭೀಮಾಶಂಕರ್ ಗುಳೇದ್ ಅವರು ನಾಳಿನ ಪ್ರತಿಭಟನೆ ಬಗ್ಗೆ ತಿಳಿದುಕೊಳ್ಳಲು ಕೆಪಿಸಿಸಿ ಕಚೇರಿಗೆ ಭೇಟಿ ನೀಡಿದರು. ಪ್ರತಿಭಟನೆ ನಡೆಸದಂತೆ ಮನವಿ ಮಾಡಲು ಬಂದಿದ್ದ ಡಿಸಿಪಿ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗೆ ಮನವಿ ಮಾಡಿ ಮನವೊಲಿಸಲು ಪ್ರಯತ್ನಿಸಿದರು.
ಕೊನೆಗೆ, ”ಪ್ರತಿಭಟನೆ ನಡೆಸುತ್ತೇವೆ,ನಮ್ಮನ್ನ ಬೇಕಾದರೆ ಬಂಧಿಸಿ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದು, ಪೋಲಿಸ್ ಅಧಿಕಾರಿಗಳು ವಾಪಸ್ ಹೊರತು ಹೋಗಿದ್ದಾರೆ.