Advertisement

HDK ಯಾವ ನೈತಿಕತೆ ಮೇಲೆ ಕೆ.ಮಹದೇವ್ ಪರ ಪ್ರಚಾರಕ್ಕೆ ಬರುತ್ತಿದ್ದಾರೆ: ಕಾಂಗ್ರೆಸ್ ಪ್ರಶ್ನೆ

10:13 PM Apr 05, 2023 | Team Udayavani |

ಪಿರಿಯಾಪಟ್ಟಣ: ಮೈಮುಲ್ ಚುನಾವಣಾ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಅಧಿಕೃತ ಪರ ಪ್ರಚಾರಕ್ಕೆ ಬಂದ ಕುಮಾರಸ್ವಾಮಿ ಯವರ ವಿರುದ್ದ ಕಾರ್ಯಕರ್ತರನ್ನು ಇತ್ತಿಕಟ್ಟಿ ಗಲಾಟೆ ಮಾಡಿಸಿದ ಶಾಸಕ ಕೆ.ಮಹದೇವ್ ಪರ ಚುನಾವಣಾ ಪ್ರಚಾರಕ್ಕೆ ಮತ ಕೇಳಲು ಬರುತ್ತಿರುವ ಇವರಿಗೆ ಯಾವ ನೈತಿಕತೆ ಇದೆ ವಕೀಲ ಹಾಗೂ ಕಾಂಗ್ರೆಸ್ ವಕ್ತಾರ ಬಿ.ವಿ.ಜವರೇಗೌಡ ಪ್ರಶ್ನಿಸಿದರು.

Advertisement

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿಯವರಿಂದ ಕಾಡಿಬೇಡಿ ಜೆಡಿಎಸ್ ಟಿಕೆಟ್ ಪಡೆದು ಶಾಸಕರಾದ ಮಹದೇವ್, ದಿನಕಳೆದಂತೆ ಹಿಚ್ಡಿಕೆ ವಿರೋಧಿಗಳ ಜೊತೆ ಕೈ ಜೋಡಿಸಿ, ಅವರ ವಿರುದ್ಧವೇ ತಿರುಗಿಬಿದ್ದು, ಹೆಚ್ಡಿಕೆ ಮೈಮುಲ್ ಚುನಾವಣಾ ಪ್ರಚಾರಕ್ಕೆ ಬಂದಾಗ ಈದೇ ಕೆ.ಮಹದೇವ್ ಹಾಗೂ ಆಅವರ ಮಗ ಪ್ರಸನ್ನ ಜೆಡಿಎಸ್ ಕಾರ್ಯಕರ್ತರನ್ನು ಎತ್ತಿಕಟ್ಟಿ ಹಿಚ್ಡಿಕೆ ವಿರುದ್ಧ ಗಲಾಟೆ ಮಾಡಿಸಿದ್ದರು. ಅದೇ ರೀತಿ ದೇವೇಗೌಡರನ್ನು ಕಾಂಗ್ರೆಸ್ ಪಕ್ಷ ರಾಜ್ಯಸಭೆಗೆ ಕಳುಹಿಸಲು ಮುಂದಾದಗ ಹಣ ಕೊಡುವವರಿಗೆ ಅವಕಾಶ ಕೊಡದೆ ವಯಸ್ಸಾದ ದೇವೇಗೌಡರಿಗೆ ಯಾಕೆ ಎಂದು ಅಪಹಾಸ್ಯ ಮಾಡಿದ್ದರು ಆದರೆ ಈಗ ಕುಮಾರಸ್ವಾಮಿ ಯಾವ ಪುರುಷಾರ್ಥಕ್ಕೆ ಜೆಡಿಎಸ್ ಅಭ್ಯರ್ಥಿ ಕೆ.ಮಹದೇವ್ ಪರ ಮತಪ್ರಚಾರಕ್ಕೆ ಆಗಮಿಸುತ್ತಿದ್ದಾರೆ. ಅಂದು ಕುಮಾರಸ್ವಾಮಿ ವಿರುದ್ದ ಕಾರ್ಯಕರ್ತರನ್ನು ಎತ್ತಿಕಟ್ಟಿ ಅಗೌರವಿಸಿದವರ ಪರವಾಗಿ ಯಾವ ನೈತಿಕತೆ ಇಟ್ಟುಕೊಂಡು ಮಾಜಿ ಮುಖ್ಯಮಂತ್ರಿ ಮತಕೇಳಲು ಬರುತ್ತಿದ್ಧಾರೆ ಇದಕ್ಕೆ ಬಹಿರಂಗವಾಗಿ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.

ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಟಿ.ಸ್ವಾಮಿ ಮಾತನಾಡಿ ಬಿಜೆಪಿ ಮತ್ತು ಜೆಡಿಎಸ್ ಎರಡು ಹೊಂದಾಣಿಕೆ ರಾಜಕೀಯ ಮಾಡುತ್ತಿವೆ ಎಂಬುದಕ್ಕೆ ಸಂಸದ ಶಾಸಕರು ಮತ್ತು ಉಸ್ತುವಾರಿ ಸಚಿವರು ಒಬ್ಬರನ್ನೊಬ್ಬರು ಹೊಗಳುತ್ತಿರುವುದು ಸಾಕ್ಷಿಯಾಗಿದೆ. ಅಲ್ಲದೆ ಕುರುಬ ಸಮುದಾಯದವರು ಹೆಚ್ಚಾಗಿರುವ ಗ್ರಾಮದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರೆ ನಾನು ಕೂಡ ಬೆಂಬಲ ನೀಡುತ್ತೇನೆ ಎಂದು ಹೇಳಿರುವ ಕೆ.ಮಹದೇವ್ ಹೇಳಿಕೆಗಳು ಇವರಿಗೆ ಪಕ್ಷದ ಮೇಲೆ ಇರುವ ಪ್ರಾಮಾಣಿಕತೆಯನ್ನು ತೊರಿಸುತ್ತದೆ ಎಂದು ತಿಳಿಸಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ವಿ.ಜಿ.ಕೊಪ್ಪಲು ಲೋಕೇಶ್ ಮಾತನಾಡಿದ್ದು ಜೆಡಿಎಸ್ ನಾಯಕತ್ವದ ಬಗ್ಗೆ ಪ್ರಶ್ನಿಸಿದ ಜಿಟಿಸಿ ಮತ್ತು ಕೆ.ಮಹದೇವ್ ಇಬ್ಬರು ಪಕ್ಷಕ್ಕೆ ವಿರೋಧವಾಗಿ ಕೆಲಸ ಮಾಡಿದ್ದು ಇಂತಹವರ ವಿರುದ್ಧ ಶಿಸ್ತುಕ್ರಮಜರುಗಿಸದೆ ಇವರಿಗೆ ಟಿಕೇಟ್ ನೀಡಿ ಪ್ರಚಾರಕ್ಕೆ ಬರುತ್ತಿರುವುದು ಅಜೆಸ್ಟ್‌ಮೆಂಟ್ ಪಾಲಿಟಿಕ್ಸ್ ಎಂಬುದನ್ನು ಪ್ರದರ್ಶಿಸುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಹಮತ್‌ಜಾನ್‌ಬಾಬು, ಪ್ರಧಾನಕಾರ್ಯದರ್ಶಿ ಬಿ.ಜೆ.ಬಸವರಾಜು, ಟೌನ್ ಘಟಕದ ಅಧ್ಯಕ್ಷ ಅಶೋಕ್‌ಕುಮಾರ್‌ಗೌಡ, ಪುರಸಭಾ ಸದಸ್ಯರಾದ ಎಚ್.ಕೆ.ಮಂಜುನಾಥ್, ಹರ್ಷ್‌ದ್‌ಪಾಷ, ಶ್ಯಾಮ್ ಮುಖಂಡರಾದ ಬಿ.ಮುಖೇಶ್‌ಕುಮಾರ್, ನಂಜುಂಡಸ್ವಾಮಿ, ಮೋಹನ್‌ಮಾಸ್ಟರ್, ಪ್ರಕಾಶ್, ಮಹದೇವ್, ಪುಟ್ಟಯ್ಯ, ಸೀಗೂರುವಿಜಯ್‌ಕುಮಾರ್, ಬಾಡಿಮಹೇಶ್, ಸ್ಟೋಡಿಯಾ ಆನಂದ್ ಸೇರಿದಂತೆ ಮತ್ತಿತರರು ಹಾಜರಿದ್ದರು.

Advertisement

ಇದನ್ನೂ ಓದಿ: Koratagere News: ಪ್ರಯಾಣಿಕರನ್ನು ಹತ್ತಿಸುವ ವಿಚಾರಕ್ಕೆ ರಿಕ್ಷಾ ಚಾಲಕರ ನಡುವೆ ಮಾರಾಮಾರಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next