Advertisement

ಕಾಂಗ್ರೆಸ್ ನವರು ವೋಟ್ ಬ್ಯಾಂಕ್ ಗಾಗಿ ಹೋರಾಟ ಮಾಡುತ್ತಿದ್ದಾರೆ: ಗೋವಿಂದ ಕಾರಜೋಳ

10:17 AM Jan 08, 2022 | Team Udayavani |

ಬೆಂಗಳೂರು: ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಯಾವುದೇ ಕೆಲಸ ಮಾಡಲಿಲ್ಲ. ಯೋಜನೆ ಅನುಷ್ಠಾನ ಮಾಡಲು ಯಾವ ಕೆಲಸವನ್ನೂ ಮಾಡಲಿಲ್ಲ. ಅಧಿಕಾರದಲ್ಲಿದ್ದಾಗ ನಿರ್ಲಕ್ಷ್ಯ ಮಾಡಿದ್ದಾರೆ. ಈಗ ಅಧಿಕಾರದಲ್ಲಿಲ್ಲ, ಅದಕ್ಕೆ ಹೋರಾಟ ಮಾಡುತ್ತಿದ್ದಾರೆ. ಚುನಾವಣಾ ಸಂದರ್ಭದಲ್ಲಿ ವೋಟ್ ಬ್ಯಾಂಕ್ ಗಾಗಿ ಹೋರಾಟ ಮಾಡುತ್ತಿದ್ದಾರೆ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ್ ಕಾರಜೋಳ ಕಿಡಿಕಾರಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಾದಯಾತ್ರೆಗೆ ನಮ್ಮ ವಿರೋಧವಿಲ್ಲ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ಹಕ್ಕಿದೆ. ಆದರೆ ಸಮಯ ಸಂದರ್ಭ ನೋಡಿ ಹೋರಾಟ ಮಾಡಬೇಕಾಗುತ್ತದೆ. 25 ಸಾವಿರ ಜನರನ್ನು ಕರೆದು ಹೋರಾಟ ಮಾಡುತ್ತೇವೆ ಎನ್ನುತ್ತಿದ್ದಾರೆ, ಕಾಂಗ್ರೆಸ್ ನವರು ಸ್ವಲ್ಪ ಅಲೋಚನೆ ಮಾಡಬೇಕು. ಕೋವಿಡ್ ಹೆಚ್ಚಳವಾಗ್ತಿರುವ ಸಮಯದಲ್ಲಿ ಮಾರ್ಗಸೂಚಿ ಉಲ್ಲಂಘನೆ ಮಾಡಿ ಹೋರಾಟ ಮಾಡುವುದು ಎಷ್ಟು ಸರಿ ಎಂದರು.

ಅಣ್ಣಾಮಲೈ ವಿರೋಧ ಮಾಡುತ್ತಿದ್ದಾರೆ ಸಿದ್ದರಾಮಯ್ಯನವರು ಪ್ರತಿಬಾರಿ ಆರೋಪ ಮಾಡುತ್ತಿದ್ದಾರೆ, ಅಣ್ಣಾಮಲೈ ಚುನಾಯುತ ಪ್ರತಿನಿಧಿಯಲ್ಲ. ಪಕ್ಷದ ಅಧ್ಯಕ್ಷರು ಅಷ್ಟೇ ಅವರು ಸರ್ಕಾರದ ಭಾಗಿಯಲ್ಲ. ಸರ್ಕಾರದಲ್ಲಿರುವುದು ಕಾಂಗ್ರೆಸ್ ನವರು. ಅವರು ಪಕ್ಷದ ಶಾಸಕರಿಗೆ ಹೇಳಲಿ, ವಿನಾಕರಣೆ ಹಂಚಿಕೆಯಾದ ನೀರಿನ ಬಗ್ಗೆ ಖ್ಯಾತೆ ತೆಗೆಯಬೇಡಿ ಅಂತ ಹೇಳಲಿ. ಅದರ ಮೂಲಕ ರಾಜ್ಯದ ಜನರಿಗೆ ಉಪಕಾರವಾಗಲಿ ಎಂದು ಕಾರಜೋಳ ಹೇಳಿದರು.

ನಾವು ಏನೂ ಮಾಡಿಲ್ಲೆವೆಂದು ಹೇಳುವುದು ಸರಿಯಲ್ಲ, ನಾವು ಕಾನೂನು ತಂಡದ ಜೊತೆ ಸಂಪರ್ಕದಲ್ಲಿದ್ದು ಕಾನೂನು ಹೋರಾಟ ಮಾಡುತ್ತಿದ್ದೇವೆ. ಕೇಂದ್ರ ಜಲಶಕ್ತಿ ಮಂತ್ರಿ ಜೊತೆ ಚರ್ಚೆ ಮಾಡಿ ಕ್ಲಿಯರ್ ಮಾಡಿಸಲು ಪ್ರಯತ್ನ ಮಾಡ್ತಿದ್ದೇವೆ. ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ಗೆ ಹೋಗಿದೆ. ನಾವು ಸುಪ್ರೀಂ ಕೋರ್ಟ್ ನಲ್ಲಿ ಸಮರ್ಥವಾಗಿ ಎದುರಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡ್ತಿದ್ದೇವೆ ಎಂದರು.

ಇದನ್ನೂ ಓದಿ:ವೀಕೆಂಡ್‌ ಕರ್ಫ್ಯೂ ಉದ್ದೇಶಪೂರ್ವಕ ನಿರ್ಧಾರವಲ್ಲವೇ: ಡಿ.ಕೆ ಶಿವಕುಮಾರ್ ಪ್ರಶ್ನೆ

Advertisement

ವೀಕೆಂಡ್ ಕರ್ಪ್ಯೂ ಗೆ ಸಾರ್ವಜನಿಕರ ವಿರೋಧ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಜನರು ಸಹಕರಿಸಬೇಕಿದೆ. ಇಡೀ ವಿಶ್ವದದಲ್ಲಿ ಕೋವಿಡ್ ನಿಂದ ಸಾವು ನೋವು ಸಂಭವಿಸಿದೆ. ರಾಜ್ಯದಲ್ಲೂ ಸಮಸ್ಯೆಯಾಗಿತ್ತು. ಮತ್ತೆ ಆ ಸಮಸ್ಯೆ ಆಗಬಾರೆದೆಂದು ಮುನ್ನೆಚ್ಚರಿಕೆ ಕ್ರಮವಾಗಿ ಯಾವ ಕ್ರಮ ತಗೆದುಕೊಳ್ಳಬೇಕೋ ಅದನ್ನು ನಾವು ತಗೆದುಕೊಂಡಿದ್ದೇವೆ. ಜನರ ರಕ್ಷಣೆ ಮಾಡುವುದು, ಕೋವಿಡ್ ನಿಯಂತ್ರಣ ಮಾಡುವುದು ಸರ್ಕಾರದ ಜವಾಬ್ದಾರಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next