ತುಮಕೂರು: ಕೇಂದ್ರ-ರಾಜ್ಯ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಹಾಗೂ ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ವಿರೋಧಿಸಿ ಶುಕ್ರವಾರ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಉಗ್ರ ಹೋರಾಟ: ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ವೇಳೆ ಮಾತನಾಡಿದ ಜಿಪಂಸದಸ್ಯ ಕೆಂಚಮಾರಯ್ಯ, ಕೇಂದ್ರ-ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ, ಕಳೆದ 65 ವರ್ಷಗಳಲ್ಲಿ ಕಾಂಗ್ರೆಸ್ ರೂಪಿಸಿದ್ದ ಲಾಭದಾಯಕ ಸರ್ಕಾರಿ ಸ್ವಾಮ್ಯದ ಕಂಪನಿಗಳನ್ನು ತಮ್ಮ ಇಷ್ಟಕ್ಕೆಬಂದಂತೆ ಮಾರಾಟ ಮಾಡಿ, ದೇಶವನ್ನು ಅಧೋಗತಿಗೆ ತಳ್ಳುತ್ತಿದ್ದಾರೆ. ಅಲ್ಲದೆ ಮೀಸಲಾತಿಯನ್ನೇ ಅಪ್ರಸ್ತುತ ಮಾಡಲು ಹೊರಟಿದೆ. ಇದು ಖಂಡಿನೀಯ. ಇದನ್ನುವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಿದ್ದಾರೆ ಎಂದು ಎಚ್ಚರಿಸಿದರು.
ಮತ್ತಷ್ಟು ಹೋರಾಟ: ಅಭಿವೃದ್ಧಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಅಭಿವೃದ್ಧಿಕಾರ್ಯಗಳಿಗೆಒತ್ತು ನೀಡದೆ, ಜನರನ್ನು ಭಾವನಾತ್ಮಕ ವಿಚಾರಗಳ ಮೂಲಕ ಬೇರೆಡೆಗೆ ಸೆಳೆದು, ಜನವಿರೋಧಿ ಕಾನೂನು ಜಾರಿಗೆ ತರುತ್ತಿದೆ. ಬಿಜೆಪಿ ಇದುವರೆಗೂನೀಡಿದ ಯಾವುದೇ ಭರವಸೆ ಈಡೇರಿಲ್ಲ. ಇದನ್ನುರಾಜ್ಯದ ಮನೆ ಮನೆಗೂ ತಲುಪಿಸುವ ಕೆಲಸವನ್ನುಕಾಂಗ್ರೆಸ್ ಪಕ್ಷ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಮತ್ತಷ್ಟು ಹೋರಾಟ ರೂಪಿಸಲಿದೆ ಎಂದು ನುಡಿದರು.
ಅನಿವಾರ್ಯ: ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ಮುಖಂಡ ಡಾ.ಇಂಮಿ¤ಯಾಜ್ ಅಹಮದ್, ಕೇಂದ್ರ ಸರ್ಕಾರದ ಅವೈಜ್ಞಾನಿಕ ಜಿಎಸ್‌ಟಿಮತ್ತುನೋಟುಅಮಾನ್ಯಿàಕರಣದಿಂದಾಗಿ ದೇಶದ ಸುಮಾರು10ಲಕ್ಷಕ್ಕೂಅಧಿಕಕೈಗಾರಿಕೆಗಳುಮುಚ್ಚಿ ಹೋಗಿ, 10 ಕೋಟಿಗೂ ಹೆಚ್ಚು ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಬಿಎಚ್‌ಇಎಲ್, ಎಚ್‌ಎಎಲ್ ಮತ್ತಿತರರ ಸರ್ಕಾರದಕಂಪನಿಗಳನ್ನು ಮಾರಾಟ ಮಾಡಿ, ಖಾಸಗಿಯವರಿಗೆ ಲಾಭ ಮಾಡಿಕೊಡಲಾಗುತ್ತಿದೆ. ಈ ವ್ಯವಸ್ಥೆ ವಿರುದ್ಧ ಹೋರಾಟ ಅನಿವಾರ್ಯವೆಂದರು.
ಕಾಂಗ್ರೆಸ್ ಮುಖಂಡರಾದ ರೇವಣ್ಣ ಸಿದ್ದಯ್ಯ, ಗೀತಾರುದ್ರೇಶ್, ಗೀತಮ್ಮ, ಸುಜಾತಾ, ಬ್ಲಾಕ್‌ಕಾಂಗ್ರೆಸ್ ಅಧ್ಯಕ್ಷರಾದ ಮೆಹಬೂಬ್ ಪಾಷಾ,ವಿಜಯಕುಮಾರ್, ನರಸಿಂಹಮೂರ್ತಿ, ಪಾಲಿಕೆಸದಸ್ಯ ಮಹೇಶ್, ಓಬಿಸಿ ಸೆಲ್‌ನ ಪುಟ್ಟರಾಜು, ಜಾರ್ಜ್, ಶ್ರೀನಿವಾಸ್, ಗೀತಮ್ಮ ಮತ್ತಿತರರಿದ್ದರು.ಈ ಸಂಬಂಧ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.