ಬಾಗಲಕೋಟೆ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಮೂರು ಕರಾಳ ಕೃಷಿ ಕಾನೂನು ಹಿಂಪಡೆದು ಅಡುಗೆ ಅನಿಲ, ಡೀಸೆಲ್ ಹಾಗೂ ಪೆಟ್ರೋಲ್‌ಬೆಲೆಗಳನ್ನು ಕೂಡಲೇ ಹಿಂಪಡೆಯುವುದುಮತ್ತು ರಾಷ್ಟ್ರೀಯ ಭದ್ರತೆಯ ಉಲ್ಲಂಘನೆಯ ವಿರುದ್ಧ ಜಂಟಿ ಸಂಸದೀಯ ಸಮಿತಿ ರಚಿಸಿ ತನಿಖೆ ನಡೆಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಒತ್ತಾಯಿಸಿದರು.
ನವನಗರದ ಎಪಿಎಂಸಿ ವೃತ್ತದಿಂದಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಜಿಲ್ಲಾ ಕಾಂಗ್ರೆಸ್ ಹಾಗೂ ಬಾಗಲಕೋಟೆ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದಪ್ರತಿಭಟನಾ ಮೆರವಣಿಗೆಯಲ್ಲಿ ಅವರು ಮಾತನಾಡಿದರು.
ದಿನೇ ದಿನೇ ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಬೆಲೆಯನ್ನು ಏರಿಕೆಮಾಡುತ್ತಿರುವುದನ್ನು ಖಂಡಿಸಿದರು.ದಿನಬಳಕೆಯ ಎಲ್ಲ ಧಾನ್ಯಗಳು, ತರಕಾರಿಬೆಲೆಗಳು ಗಗನಕೇರಿ ಜನಸಾಮಾನ್ಯರಮೇಲೆ ಬರೆ ಎಳೆದಂತಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಚಿವ ಎಚ್.ವೈ. ಮೇಟಿಮಾತನಾಡಿ, ಎಪಿಎಂಸಿ ಹಾಗೂಭೂಹಿಡುವಳಿ ಕಾಯ್ದೆ ತಿದ್ದುಪಡಿತಂದು ರೈತರ ಬದುಕಿನೊಂದಿಗೆ ಕೇಂದ್ರಹಾಗೂ ರಾಜ್ಯ ಸರ್ಕಾರಗಳು ಕಷ್ಟಪಟ್ಟುತಿಂಗಳುಗಟ್ಟಲೇ ಬೆಳೆದ ಉತ್ಪಾದನೆಯನ್ನುಕಾರ್ಪೋರೇಟ್ ಹಾಗೂ ದೊಡ್ಡವ್ಯಾಪಾರಿಗಳಿಗೆ ಅವರು ಕೇಳಿದ ಬೆಲೆಗೆಕೊಡುವ ಅನಿವಾರ್ಯತೆಗೆ ಈ ಕಾನೂನು ನೂಕುತ್ತಿದೆ. ಭೂಹಿಡುವಳಿ ಕಾನೂನಿನತಿದ್ದುಪಡಿಯಿಂದ ಸಣ್ಣ ಮತ್ತು ಅತೀ ಸಣ್ಣ ರೈತರು ತಮ್ಮ ಭೂಮಿಯನ್ನುಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಹಾಗೂ ಮಾಧ್ಯಮ ವಕ್ತಾರ ನಾಗರಾಜ ಹದ್ಲಿ,ಎಸ್‌ಸಿ ಘಟಕದ ಜಿಲ್ಲಾಧ್ಯಕ್ಷ ರಾಜುಮನ್ನಿಕೇರಿ, ಕಿಸಾನ್ ಘಟಕದ ಜಿಲ್ಲಾಕಾರ್ಯಾಧ್ಯಕ್ಷ ಗಿರೀಶ ಅಂಕಲಗಿ, ಯುವಘಟಕದ ಜಿಲ್ಲಾಧ್ಯಕ್ಷ ರಾಹುಲ್ ಕಲೂತಿ,ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಮಂಜುನಾಥವಾಸನದ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಎನ್.ರಾಂಪುರ, ಹಾಜೀಸಾಬ ದಂಡಿನ, ಜಿಲ್ಲಾಪಂಚಾಯತಿ ಮಾಜಿ ಅಧ್ಯಕ್ಷ ಬಸವಂತಪ್ಪ ಮೇಟಿ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮುರುಗೇಶ ಕಡ್ಲಿಮಟ್ಟಿ, ಅಥಣಿ ಮಾಸ್ತರ,ಮುಖಂಡರಾದ ಪ್ರೇಮನಾಥ ಗರಸಂಗಿ,ವೈ.ವೈ.ತಿಮ್ಮಾಪುರ, ಅಡಿವೆಪ್ಪ ಚಂದಾವರಿ,ಡಾ| ಅಮಾತೆಪ್ಪನವರ, ಬಿ.ಬಿ.ಬಾಳಕ್ಕನರ, ಶಂಭುಲಿಂಗಪ್ಪ ಅಕ್ಕಿಮರಡಿ,ವೀರಣ್ಣ ಹುಂಡೇಕಾರ, ವೀರಣ್ಣ ಅಥಣಿ,ನಿಂಗನಗೌಡ ಪಾಟೀಲ, ನಾರಾಯಣದೇಸಾಯಿ, ಸಂಜೀವ ವಾಡ್ಕರ್, ವಿಜಯಕಮತಗಿ, ಮಲ್ಲು ಶಿರೂರ, ಉಮೇಶ ಮೇಟಿ,ಮಲ್ಲಿಕಾರ್ಜುನ ಮೇಟಿ, ಮುತ್ತಪ್ಪ ಹುಗ್ಗಿ, ಗಣಪತಾಸಾ ದಾನಿ, ಕೌಶೀಫ್ ಬಾಗಲವಾಡ,ಬಾಬು ಇಟಗಿ, ಮಂಜುನಾಥ ಮುಚಖಂಡಿ ಪಾಲ್ಗೊಂಡಿದ್ದರು.