Advertisement

ಸಿಎಂ ಹಾಗೂ ಬಿಜೆಪಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

07:39 PM Jul 05, 2021 | Team Udayavani |

ಬೆಂಗಳೂರು : ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ನಿರಂತರವಾಗಿ ಭೂ ಹಗರಣಗಳು ಬೆಳಕಿಗೆ ಬಂದು ತನಿಖೆಗೆ ನ್ಯಾಯಾಲಯ ಆದೇಶಿಸಿದರೂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡದೆ ಭ್ರಷ್ಟಾಚಾರದಲ್ಲೆ ಯಡಿಯೂರಪ್ಪ ಮುಳುಗುತ್ತಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದಾರ.

Advertisement

ಇಂದು (ಜು.05) ನಗರ ಕಾಂಗ್ರೆಸ್ ಪ್ರಚಾರ ಸಮಿತಿಯಿಂದ ಈ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಲಾಯಿತು. ‘ಬಿಜೆಪಿ ಸರ್ಕಾರದ ಮಂತ್ರಿಗಳ ಆಪ್ತ ಸಹಾಯಕರು ಹಗಲು ದರೋಡೆಗೆ ಇಳಿದಿದ್ದಾರೆ, ಮುಖ್ಯಮಂತ್ರಿ ಪುತ್ರ ವಿಜಯೇಂದ್ರ  ನೀಡಿರುವ ದೂರಿನ ಪ್ರಕಾರ ಸಚಿವ ಶ್ರೀರಾಮುಲು ಆಪ್ತ ಸಹಾಯಕ ರಾಜಣ್ಣ ಲಂಚ ಪಡೆದು ಸಾರ್ವಜನಿಕರಿಗೆ ವಂಚಿಸುತ್ತಿದ್ದ ಎಂದು ಬಹಿರಂಗವಾಗಿದೆ. ಕಂದಾಯ ಸಚಿವರ ಹೆಸರಿನಲ್ಲಿ ಅವರ ಆಪ್ತ ಸಹಾಯಕ ಲಂಚ ಪಡೆದಿರುವುದು ಬಹಿರಂಗವಾಗಿದೆ, ಇಷ್ಟಾದರೂ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಪ್ರಯತ್ನವನ್ನು ನರೇಂದ್ರಮೋದಿ ನಡೆಸುತ್ತಿಲ್ಲ ಭ್ರಷ್ಟಾಚಾರದ ವಿರುದ್ಧ ಎಂದು ಹೇಳುವ ನರೇಂದ್ರ ಮೋದಿ ರಾಜ್ಯದಲ್ಲಿ ಹಗಲು ದರೋಡೆ ನಡೆಸಿ ನಿರಂತರವಾಗಿ ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಜೆಪಿಯ ಸಚಿವರ ಹಾಗೂ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮವನ್ನು ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು.

ಭ್ರಷ್ಟಾಚಾರದಲ್ಲಿ ದಾಖಲೆ ಮಾಡಿರುವ ಏಕೈಕ ಸರ್ಕಾರವೆಂದರೆ ಅದು ದೇಶದಲ್ಲಿ ಯಡಿಯೂರಪ್ಪನ ಸರ್ಕಾರವಾಗಿದೆ, ನನ್ನ  ಹೆಸರಿನಲ್ಲಿ  ವಂಚಿಸಲಾಗಿದೆ ಎಂದು  ದೂರು ನೀಡಲಾಗಿದೆ ಎಂಬುದರ ಬಗ್ಗೆ  ವಿಜಯೇಂದ್ರ ರವರೇ ತಮ್ಮ ಅಧಿಕೃತ ಟ್ವಿಟರ್ ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಪೋಲಿಸರು ಶ್ರೀರಾಮುಲು ಅಪ್ಪನನ್ನು  ಬಂಧಿಸಿದ್ದೇವೆ ಎಂದು ತಿಳಿಸುತ್ತಾರೆ ಆದರೆ ಬಂಧಿಸಿದ ವ್ಯಕ್ತಿಯನ್ನು ಯಾವ ಆಧಾರದ ಮೇಲೆ ಬಿಡುಗಡೆ ಮಾಡಿದರು ಎಂಬ ಮಾಹಿತಿಯನ್ನು ಪೊಲೀಸರು ಇದುವರೆಗೂ ನೀಡಿಲ್ಲ,  ಹಾಗಾದರೆ ಪೋಲಿಸ್ ಇಲಾಖೆ ಯಾರ  ಕೈ ಕೆಳಗೆ ಕಾರ್ಯನಿರ್ವಹಿಸುತ್ತಿದೆ ಆಗಾದರೆ  ಕಾನೂನಿಗೆ ಗೌರವವಿಲ್ಲವೇ ? ಎಂದು ಪ್ರಶ್ನಿಸಿದರು.

ಭ್ರಷ್ಟಾಚಾರದ ಬಗ್ಗೆ ಎಸಿಪಿ ಬಳಿ ದೂರು ನೀಡಬೇಕು ಅಥವಾ  ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿ ತನಿಖೆ ನಡೆಸಬೇಕು. ಸಿಸಿಬಿಗೆ ದೂರು  ನೀಡಿ ಈ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ ಕೂಡಲೇ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಭ್ರಷ್ಟಾಚಾರದ ಪ್ರಕರಣದ ಬಗ್ಗೆ ರಾಜ್ಯದ ಜನತೆಗೆ ಸತ್ಯಾಂಶವನ್ನು ತಿಳಿಸಬೇಕು ಈ ಪ್ರಕರಣದಲ್ಲಿ ಆಗಿರುವ ಲೋಪದ ಬಗ್ಗೆ ತಿಳಿಸಬೇಕೆಂದು ಆಗ್ರಹಿಸಿದರು.

ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಎಸ್. ಮನೋಹರ್,  ಜಿ.ಜನಾರ್ಧನ್,  ಎ.ಆನಂದ್,  ಈ.ಶೇಖರ್, .ಉಮೇಶ್, ಮಹೇಶ್, ಚಂದ್ರಶೇಖರ್,ಸೂರಜ್ ಸೂಪ್ರಜು ಹಾಗೂ ಪಕ್ಷದ ಮುಖಂಡರುಗಳು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next