Advertisement

ತೈಲ ಬೆಲೆ ಇಳಿಸದಿದ್ದರೆ ಉಗ್ರ ಹೋರಾಟ  

09:07 PM Jun 15, 2021 | Team Udayavani |

ಗಜೇಂದ್ರಗಡ: ಜನ ವಿರೋಧಿ ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ದೇಶವನ್ನು ಅಧೋಗತಿಗೆ ತಳ್ಳುತ್ತಿದೆ. ಈ ನಿಟ್ಟಿನಲ್ಲಿ ತೈಲ ಬೆಲೆ ಇಳಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ರೋಣ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವೀರಣ್ಣ ಶೆಟ್ಟರ ಎಚ್ಚರಿಕೆ ನೀಡಿದರು.

Advertisement

ಸೂಡಿ ಗ್ರಾಪಂ ಕಾರ್ಯಾಲಯ ಎದುರು ಪೆಟ್ರೋಲ್‌-ಡೀಸೆಲ್‌ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ ಕಾರ್ಯಕರ್ತರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಬಿಜೆಪಿ ಸರ್ಕಾರ ಜನಪರ ಆಡಳಿತ ನೀಡುತ್ತಿಲ್ಲ. ಬೆಲೆ ಏರಿಕೆಯಿಂದ ಬೆಂದಿರುವ ಬಡವರು, ಕೂಲಿ ಕಾರ್ಮಿಕರು, ರೈತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‌ ಪಕ್ಷ ಬೆಂಬಲಿಸಲು ಸಂಘಟಿತರಾಗಿದ್ದಾರೆ. ಕಾಂಗ್ರೆಸ್‌ ಸಂಘಟನಾ ಶಕ್ತಿಯೇ ಬಿಜಿಪಿ ಸರ್ಕಾರದ ಪಥನಕ್ಕೆ ಅಂಕುಶ ಹಾಕಲಿದೆ ಎಂದರು.

ಈ ವೇಳೆ ಶಿವಕುಮಾರ ಪಟ್ಟಣಶೆಟ್ಟರ, ನಿಂಗಪ್ಪ ಕಾಶಪ್ಪನವರ, ಗ್ರಾಪಂ ಅಧ್ಯಕ್ಷೆ ಹುಲಿಗೆವ್ವ ಕಡಬಿನ, ಉಪಾಧ್ಯಕ್ಷೆ ಗಂಗವ್ವ ಗೊರವರ, ಶರೀಫ್‌ ಡಾಲಾಯತ್‌, ರಾಘವೇಂದ್ರ ಕುಲಕರ್ಣಿ, ಮಹಾಂತೇಶ ಸೂಡಿ, ಹುಸೇನಸಾಬ ಬೆಳ್ಳಟ್ಟಿ, ಮಲ್ಲಯ್ಯ ಮಲಕಸಮುದ್ರಮಠ, ಸಂಗಪ್ಪ ಕುಂಬಾರ, ಭೀರಪ್ಪ ಮಾರನಬಸರಿ, ಪ್ರಕಾಶ ಕುಸಬದ, ಶ್ರೀಕಾಂತ್‌ ಬಾರಕೇರ, ಬಸವರಾಜ ಕಡಬಿನ, ರಮೇಶ ಕಡಬಿನ ಇದ್ದರು. ರಾಜೂರ ಗ್ರಾಮ: ರಾಜೂರ ಗ್ರಾಮದಲ್ಲಿ ತೈಲ ಬೆಲೆ ಏರಿಕೆ ಖಂಡಿಸಿ ಪ್ರತಿಭಟಿಸಲಾಯಿತು. ಗ್ರಾಮದ ಬಸ್‌ ನಿಲ್ದಾಣದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆ ಗಜೇಂದ್ರಗಡ ಹೊರ ವಲಯದ ಪೆಟ್ರೋಲ್‌ ಬಂಕ್‌ ಎದುರು ಸಮಾವೇಶಗೊಂಡಿತು.

ಈ ವೇಳೆ ತಾಪಂ ಉಪಾಧ್ಯಕ್ಷ ಶಶಿಧರ ಹೂಗಾರ, ವಿ.ಬಿ. ಹಪ್ಪಳದ, ಮುತ್ತಣ್ಣ ತಳವಾರ, ಸುರೇಶಗೌಡ ಪಾಟೀಲ, ಲಲಿತಾ ಕೆಂಪನಾಳ, ಕಳಕಪ್ಪ ಚಿಲಝರಿ, ಶರಣಪ್ಪ ಹಾದಿಮನಿ, ಅಲ್ಲಾಸಾಬ ಮುಜಾವರ, ರವಿ ತಳವಾರ, ಯಲ್ಲಪ್ಪ ಕನ್ಯಾಳ, ರಾಜು ನದಾಫ್‌, ಯಲ್ಲಪ್ಪ ತಳವಾರ, ಶೇಖಪ್ಪ ಮಳಗಿ ಇದ್ದರು. ನಿಡಗುಂದಿ: ನಿಡಗುಂದಿ ಗ್ರಾಪಂ ಕಚೇರಿ ಎದುರು ಕಾಂಗ್ರೆಸ್‌ ನಿಂದ ಪ್ರತಿಭಟನೆ ನಡೆಸಲಾಯಿತು. ಗ್ರಾಪಂ ಅಧ್ಯಕ್ಷ ಶಿವಣ್ಣ ಸೂಡಿ, ಎಚ್‌.ಎಸ್‌. ಸೂಂಪೂರ, ಅಶೋಕ್‌ ಬೇವಿನಕಟ್ಟಿ, ಫಕೀರಪ್ಪ ಕೂಕನೂರ, ಅಂದಪ್ಪ ಬಿಚ್ಚಾರ, ಬಾಬು ಮುಲ್ಲಾ, ರಮೇಶ ಶೇಬಗೊಂಡ, ಅಂದಪ್ಪ ಚಲವಾದಿ, ಈರಪ್ಪ ಬಿಚ್ಚಾರ, ನಬೀಸಾಬ ಕೊಟೇಕಲ್‌, ಶಶಿಧರ ಹೊಟ್ಟಿನ, ಶಿವಣ್ಣ ಸೊಬಗಿನ, ಬಸಪ್ಪ ಅಣಗೌಡ್ರ ಇದ್ದರು.

ಲಕ್ಕಲಕಟ್ಟಿ: ಲಕ್ಕಲಕಟ್ಟಿ ಗ್ರಾಪಂ ಕಾರ್ಯಾಲಯ ಎದುರು ಕಾಂಗ್ರೆಸ್‌ ನಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು. ಬಸವರಾಜ ಬೆನಕನವಾರಿ, ಅಶೋಕ ಜಿಗಳೂರ, ನಿಂಗಪ್ಪ ಹಂಡಿ, ಬಸವರಾಜ ಬೂದಿಹಾಳ, ಮುತ್ತಪ್ಪ ಅಕ್ಕರಗಲ್ಲ, ಹನುಮಂತಪ್ಪ ಮಾದರ, ಉಮೇಶ ರಾಠೊಡ, ರಾಮಲಿಂಗಪ್ಪ ಬೆನಕನವಾರಿ, ಅನೀಲ ಕರ್ಣೆ, ಉಮೇಶ ಭಗವತಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next