Advertisement
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಗ್ನಿಪಥ್ ಯೋಜನೆ, ರಾಜ್ಯದ ಪಠ್ಯದಲ್ಲಿನ ಲೋಪದೋಷ ಹಾಗೂ ಐಟಿ, ಬಿಟಿ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದನ್ನು ಖಂಡಿಸಿ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.
Related Articles
Advertisement
ನಂತರ ತಾಲೂಕು ಕಚೇರಿಗೆ ತೆರಳಿ ಶಿರಸ್ತೇದಾರ್ ಕುಮಾರ್ ಮೂಲಕ ರಾಷ್ಟ್ರಪತಿಗೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರದ ಕಾಂಗ್ರೆಸ್ ಉಸ್ತು ವಾರಿ ಅಜ್ಜಹಳ್ಳಿ ರಾಮಕೃಷ್ಣ, ಕಾಂಗ್ರೆಸ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಜೆ.ದೇವರಾಜು, ಎಸ್. ಪಿ. ಸುಂದರ್ ರಾಜ್, ಟಿಎಪಿಸಿಎಂಎಸ್ ಅಧ್ಯಕ್ಷ ಕೆ.ಎಸ್. ದ್ಯಾಪೇಗೌಡ, ಪುರಸಭೆ ಸದಸ್ಯರಾದ ಎಂ. ಎನ್.ಶಿವಸ್ವಾಮಿ, ರಾಜಶೇಖರ್, ತಾಪಂ ಮಾಜಿ ಅಧ್ಯಕ್ಷರಾದ ಆರ್.ಎನ್.ವಿಶ್ವಾಸ್, ವಿ.ಪಿ. ನಾ ಗೇಶ್, ಪುಟ್ಟಸ್ವಾಮಿ, ಚಿಕ್ಕಲಿಂಗಣ್ಣ, ತಾಲೂಕು ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಹುಸ್ಕೂರು ಎಚ್. ಕೆ.ಕೃಷ್ಣಮೂರ್ತಿ, ಮುಖಂಡರಾದ ಎಂ. ಬಸವರಾಜು, ಲಿಂಗರಾಜು, ಪ್ರಕಾಶ್, ರಾಮಣ್ಣ, ವೇದ ಮೂರ್ತಿ, ಬಿ.ಮಹದೇವು ಉಪಸ್ಥಿತರಿದ್ದರು.
ಯೋಧರಿಗೆ ಅವಮಾನ : ದೇಶದ ಗಡಿ ಕಾಯುವ ಸೈನಿಕರ ಹಿತ ಕಾಪಾಡುವ ಬದಲು ಅವರನ್ನು ಕೇವಲ ನಾಲ್ಕು ವರ್ಷ ಬಳಸಿಕೊಂಡು ಅವಮಾನಿಸಲು ಹೊರಟಿದೆ. ವರ್ಷಕ್ಕೆ 2 ಕೋಟಿ ಉದ್ಯೋಗ ಸೇರಿದಂತೆ ಹಲವು ಸುಳ್ಳು ಭರವಸೆಗಳೊಂದಿಗೆ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ಅವರು, ದೇಶದಲ್ಲಿನ ಉದ್ಯೋಗಾವಕಾಶಗಳನ್ನು ಹಂತ-ಹಂತವಾಗಿ ನಾಶ ಮಾಡುತ್ತಿದ್ದಾರೆಂದು ಕೆಪಿಸಿಸಿ ಉಪಾಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ದೂರಿದರು.