Advertisement

ಕಾಂಗ್ರೆಸ್‌ ದತ್ತಾಂಶ ವಿಶ್ಲೇಷಣಾ ವಿಭಾಗ ರದ್ದುಗೊಳಿಸಲು ಚಿಂತನೆ

01:30 AM Jul 09, 2019 | Team Udayavani |

ಹೊಸದಿಲ್ಲಿ:ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್‌ ಟಿಕೆಟ್ ಹಂಚಿಕೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ಪಕ್ಷದ ‘ದತ್ತಾಂಶ ವಿಶ್ಲೇಷಣಾ ವಿಭಾಗ’ವನ್ನು (ಡಿಎಡಿ) ರದ್ದುಗೊಳಿಸಲು ಕಾಂಗ್ರೆಸ್‌ ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ. ಈ ವಿಭಾಗ ನೀಡಿದ್ದ ದತ್ತಾಂಶದ ಆಧಾರದ ಮೇರೆಗೆ ಚುನಾವಣಾ ಟಿಕೆಟ್ ಅನ್ನು ಯಾರಿಗೆ ನೀಡಬೇಕು ಎಂಬುದನ್ನು ತೀರ್ಮಾನಿಸಲಾಗಿತ್ತು.

Advertisement

ಚುನಾವಣೆ ವೇಳೆ ಕಾಂಗ್ರೆಸ್‌ನ ಮೊಬೈಲ್ ಅಪ್ಲಿಕೇಷನ್‌ ಆಗಿದ್ದ ‘ಶಕ್ತಿ’ಯನ್ನೂ ಇದೇ ವಿಭಾಗ ನಿರ್ವಹಣೆ ಮಾಡುತ್ತಿತ್ತು. ಲೋಕಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್‌ನಿಂದ ಕಣಕ್ಕಿಳಿಸಲ್ಪಟ್ಟಿದ್ದ ಅಭ್ಯರ್ಥಿಗಳ ಬಗ್ಗೆ ಮತದಾರರು ಅನಿಸಿಕೆಗಳನ್ನು ಹಂಚಿಕೊಳ್ಳಬಹುದಿತ್ತು. ಆದರೆ, ಇದನ್ನು ಸಮರ್ಪಕವಾಗಿ ನಿಭಾಯಿಸಿಲ್ಲ ಎಂಬ ಆರೋಪವೂ ಈ ವಿಭಾಗದ ಮೇಲಿದೆ. ಹಾಗಾಗಿ, ಈ ವಿಭಾಗವನ್ನು ರದ್ದುಗೊಳಿಸಲು ಸಿದ್ಧತೆ ಸಾಗಿದೆ ಎಂದು ಹೇಳಲಾಗಿದೆ. ಆದರೆ, ಮಾಧ್ಯಮಗಳ ಈ ವರದಿಗಳನ್ನು ವಿಭಾಗದ ಮುಖ್ಯಸ್ಥ ಪ್ರವೀಣ್‌ ಚಕ್ರವರ್ತಿ ತಳ್ಳಿಹಾಕಿದ್ದಾರೆ.

‘ಕೈ’ನಲ್ಲಿ ಯುವ ನಾಯಕತ್ವದ ಸದ್ದು: ಕಾಂಗ್ರೆಸ್ಸಿಗೆ ರಾಜಸ್ಥಾನದ ಉಪಮುಖ್ಯಮಂತ್ರಿ ಸಚಿನ್‌ ಪೈಲಟ್ ಹಾಗೂ ಪಕ್ಷದ ಮತ್ತೂಬ್ಬ ಯುವ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಅವರು ಅಧ್ಯಕ್ಷರಾಗ ಲಿದ್ದಾರೆಯೇ? ಇಂಥದ್ದೊಂದು ಗುಸುಗುಸು ಕಾಂಗ್ರೆಸ್ಸಿನ ಪಡಸಾಲೆಯಲ್ಲಿ ಚಾಲ್ತಿಗೆ ಬಂದಿದೆ. ಪಕ್ಷದ ಅಧ್ಯಕ್ಷಗಿರಿಗೆ ರಾಹುಲ್ ಗಾಂಧಿ ರಾಜೀನಾಮೆ ನೀಡಿದ ನಂತರ, ಅವರ ಉತ್ತರಾಧಿಕಾರಿಯಾಗಿ ಯುವಕರೇ ಪಕ್ಷದ ಚುಕ್ಕಾಣಿ ಹಿಡಿದರೆ ಚೆನ್ನ ಎಂಬ ಆಕಾಂಕ್ಷೆಯನ್ನು ದೇಶಾದ್ಯಂತ ಪಕ್ಷದ ಕಾರ್ಯಕರ್ತರು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next