Advertisement
ತಾಲೂಕಿನ ಹಿರೇಬಾಗೇವಾಡಿ ಗ್ರಾಮದ ಫಡಿಬಸವೇಶ್ವರ ಮಂದಿರ ಹತ್ತಿರ ಮೈದಾನದಲ್ಲಿ ಸೋಮವಾರ ನಡೆದ ರೈತ ಮೋರ್ಚಾ ಸಭೆಯಲ್ಲಿ ಅವರು ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಯಡಿಯೂರಪ್ಪ ಹಗಲಿರುಳು ಶ್ರಮಿಸುತ್ತಿದ್ದಾರೆ. ಅವರನ್ನು ಯಾವ ದುಷ್ಟ ಶಕ್ತಿಯೂ ತಡೆಯಲು ಸಾಧ್ಯವಿಲ್ಲ. ಲಿಂಗಾಯತರನ್ನು ಒಡೆಯುವ ಕೆಲಸ ಕಾಂಗ್ರೆಸ್ ಮಾಡಿದೆ ಎಂದು ವಾಗ್ಧಾಳಿ ನಡೆಸಿದರು.
Related Articles
Advertisement
ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಮಾತನಾಡಿ, ದೇಶ ಸ್ವಾತಂತ್ರ್ಯ ಆಗಿ 75 ವರ್ಷವಾದರೂ 500 ವರ್ಷಗಳಿಂದ ರಾಮ ಮಂದಿರ ಕಟ್ಟಲು ಸಾಧ್ಯ ಆಗಿಲ್ಲ. ನಮ್ಮ ಪ್ರಧಾನಿ ಮೋದಿಜಿ ರಾಮ ಮಂದಿರ ಕಟ್ಟಿದರು. ಜಮ್ಮು ಕಾಶ್ಮೀರ 370 ಕಲಂ ರದ್ದು ಮಾಡಿದರು ಎಂದರು.
ಶಾಸಕಿ ಲಕ್ಷ್ಮೀ ಹೆಬ್ಟಾಳಕರ ಕನಕಪುರಕ್ಕೆ ಸಂಬಂಧಿಸಿದವರು. ನಮ್ಮ ಭಾಗಕ್ಕೆ ಸೇರಿದವರಲ್ಲ. ರಾಜಹಂಸಗಡ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಗೆ ಯಡಿಯೂರಪ್ಪ ಅವರು 10 ಕೋಟಿ ರೂಪಾಯಿ ನೀಡಿದ್ದರು. ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಚರ್ಚೆ ಮಾಡಲು ಗ್ರಾಮೀಣ ಶಾಸಕರು ಬರಲಿ ಎಂದು ಸವಾಲು ಹಾಕಿದ ಸಂಜಯ, ಹೆಬ್ಬಾಳಕರ ಕಬ್ಬಿನ ಬಿಲ್‌ನಲ್ಲಿ ಹಣ ಲೂಟಿ ಮಾಡಿ ಅದರಲ್ಲಿ ಸ್ವಲ್ಪ ಮರಳಿ ಈಗ ಕೊಡುತ್ತಿದ್ದಾರೆ. ಈ ಬಾರಿ ಶಾಸಕಿ ಎಷ್ಟು ಹಂಚುತ್ತಿದ್ದಾರೋ ನಾವೂ ಅದಕ್ಕಿಂತ ಹೆಚ್ಚು ಹಂಚುತ್ತೇವೆ. ಬಡವರು ಚುನಾವಣೆಗೆ ನಿಲ್ಲದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಅದನ್ನು ನಾನು ಮುರಿದು ಹಾಕುತ್ತೇನೆ. ಚುನಾವಣೆಯಲ್ಲಿ ಯಾರೇ ನಿಲ್ಲಲಿ ಮೋದಿಜಿ, ಯಡಿಯೂರಪ್ಪ, ಬೊಮ್ಮಾಯಿ ಅವರ ಮುಖ ನೋಡಿ ಮತ ನೀಡಿ ಎಂದರು.
ಬೆಳಗಾವಿ ಗ್ರಾಮೀಣ ಬಿಜೆಪಿ ಮಂಡಲ ಅಧ್ಯಕ್ಷ ಧನಂಜಯ ಜಾಧವ ಮಾತನಾಡಿ, ಲಕ್ಷ್ಮೀ ಹೆಬ್ಬಾಳಕರ ಅವರು ತಮ್ಮ ಸಕ್ಕರೆ ಕಾರ್ಖಾನೆಯಲ್ಲಿ ತೂಕ(ಕಾಟಾದಲ್ಲಿ 60 ಕೋಟಿ ರೂ. ಹೊಡೆದಿದ್ದಾರೆ. ಅದೇ ಹಣದಲ್ಲಿ ಜನರಿಗೆ ಗಿಫ್ಟ್ ಹಂಚುತ್ತಿದ್ದಾರೆ. ಗ್ರಾಮೀಣ ಶಾಸಕರು ಗಿಫ್ಟ್ ನೀಡದೇ ಚುನಾವಣೆ ಎದುರಿಸಿ ತೋರಿಸಲಿ ಎಂದು ಸವಾಲು ಹಾಕಿದರು.
ಜಿಪಂ ಮಾಜಿ ಸದಸ್ಯ ಶಂಕರಗೌಡ ಪಾಟೀಲ, ಪತ್ನಿ ಅಶ್ವಿನಿ ಪಾಟೀಲ ಬಿಜೆಪಿ ಸೇರ್ಪಡೆಯಾದರು. ಬಳಿಕ ಅವರು ಮಾತನಾಡಿ, ಪ್ರಧಾನಿ ಮೋದಿಜಿ, ಯಡಿಯೂರಪ್ಪ, ಬೊಮ್ಮಾಯಿ ಅವರ ಕಾರ್ಯವೈಖರಿ ಮೆಚ್ಚಿ ಬಿಜೆಪಿ ಸೇರಿದ್ದೇವೆ ಎಂದು ಹೇಳಿದರು. ಮಾಜಿ ಶಾಸಕ ವಿಶ್ವನಾಥ ಪಾಟೀಲ, ಮಾಜಿ ಸಚಿವ ಶಶಿಕಾಂತ ಪಾಟೀಲ, ಮುಖಂಡರಾದ ವಿನಯ ಕದಂ, ಚೇತನ್ ಅಂಗಡಿ, ಗೂಳಪ್ಪ ಹೊಸಮನಿ ಇತರರು ಇದ್ದರು.