Advertisement

ಕಾಂಗ್ರೆಸ್ ಭಯೋತ್ಪಾದಕರನ್ನು ಬೆಂಬಲಿಸುವ ಪಕ್ಷ: ಸಿ.ಟಿ.ರವಿ ವಾಗ್ದಾಳಿ

01:03 PM Oct 26, 2021 | Team Udayavani |

ಹಾವೇರಿ: ಮಹಾತ್ಮಾ ಗಾಂಧಿ ಕಾಲದ ಕಾಂಗ್ರೆಸ್ ಹಿಂದೆ ಸರಿದು ದಶಕ ಕಳೆದಿವೆ. ಈಗಿರುವ ಕಾಂಗ್ರೆಸ್, ಆಗಿನ ಕಾಂಗ್ರೆಸ್ ಗೆ ಸಂಬಂಧವೇ ಇಲ್ಲ. ಈಗಿರುವ ಕಾಂಗ್ರೆಸ್ ತುಕಡೆ ಗ್ಯಾಂಗ್ ಗಳ ನೇತಾರರನ್ನು ನಾಯಕರನ್ನಾಗಿ ಮಾಡಿದೆ. ಭಯೋತ್ಪಾದಕ ಬೆಂಬಲಿಸುವ ಪಕ್ಷ ಕಾಂಗ್ರೆಸ್ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ವಾಗ್ದಾಳಿ ನಡೆಸಿದರು.

Advertisement

ಹಾನಗಲ್ಲ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಹೈಬ್ರೀಡ್ ರಾಜಕಾರಣಿಗಳನ್ನು ನಾವು ನೋಡಿದ್ದೇವೆ. ಕಾಂಗ್ರೆಸ್ ಗೆ ಅಸಹನೆ ಕಾಡುತ್ತಿದೆ. ತನ್ನನ್ನು ಬಿಟ್ಟು ಅಧಿಕಾರದಲ್ಲಿ ಯಾರೂ ಇರಬಾರದು ಎಂಬ ಅಸಹನೆ ಅವರದು. ನಾವು ಯಾವತ್ತೂ ದೇಶಕ್ಕೆ ಹಾನಿಯಾಗುವ ವಿಚಾರವನ್ನು ಬೆಂಬಲಿಸಲಿಲ್ಲ. ಭಯೋತ್ಪಾದಕರನ್ನು ಬೆಂಬಲಿಸಲಿಲ್ಲ. ನೈತಿಕ ಬೆಂಬಲದ ಹೆಸರಿನಲ್ಲಿ ದೇಶ ವಿರೋಧಿಗಳನ್ನು ಬೆಂಬಲಿಸುವ ಕೆಲಸ ಮಾಡಿಲ್ಲ. ದೇಶದೊಳಗಿದ್ದು ದೇಶ ಕುಗ್ಗಿಸುವ, ಚೀನಾ, ಪಾಕಿಸ್ತಾನ ಮನೋಭಾವ ಬೆಂಬಲಿಸುವ ಕೆಲಸ ಮಾಡಿಲ್ಲ. ಆದರೀಗ ಕಾಂಗ್ರೆಸ್ ಗೆ ಅಸಹನೆ ಕಾಡುತ್ತಿದೆ. ಹೊರಗಿನವರು ಯಾರೂ ಪ್ರಧಾನಿಯಾಗಿರಬಾರದು ಎಂಬ ಅಸಹನೆ ಅವರದ್ದು. ಚಹಾ ಮಾರುವ ಹುಡುಗ ಪ್ರಧಾನಿ ಯಾಗಿದ್ದು ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಹಿಂದುಳಿದ ನಾಯಕ ಎಂದು ಬಿಂಬಿಸುವುದಲ್ಲಿ ಮೋದಿಯವರಂತ ಹಿಂದುಳಿದ ನಾಯಕ ಬೇಕಾ? ಆದರೆ ಅವರು ಎಂದು ಜಾತಿ ರಾಜಕಾರಣ ಮಾಡಲಿಲ್ಲ ಎಂದರು.

ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ಯಾವ ನೈತಿಕತೆ ಕಾಂಗ್ರೆಸ್ ಗೆ ಇಲ್ಲ. ತನ್ನ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ಕೂಡ ಅವರಿಗೆ ಉಳಿದಿಲ್ಲ. ಕಾಂಗ್ರೆಸ್ ಅಧಿಕಾರ ಇರುವುದೇ ಒಂದು ಕುಟುಂಬದ ಕೈಯಲ್ಲಿ. ನಾನೇ ಪಕ್ಷದ ಅಧ್ಯಕ್ಷ ಎಂದು ಹೇಳುವ ಅಹಸ್ಯ ನಡೆದಿದೆ. ಪಕ್ಷದ ಒಳಗೆ ಪ್ರಜಾಪ್ರಭುತ್ವ ಇಲ್ಲದ ಪಕ್ಷಕ್ಕೆ ಜನತಂತ್ರದ ಯಾವ ನೈತಿಕತೆಯೂ ಇಲ್ಲದಂತಾಗಿದೆ ಎಂದರು.

ಇದನ್ನೂ ಓದಿ:ಸೇನಾಪಡೆಯ ವಾಹನ ಗುರಿಯಾಗಿಸಿ ಬಂಡಿಪೋರಾದಲ್ಲಿ ಬಾಂಬ್ ಸ್ಪೋಟ: ಆರು ಮಂದಿಗೆ ಗಾಯ

ನಾವು ನಮ್ಮ ಸರ್ಕಾರದ ಯೋಜನೆ, ಕಾರ್ಯ ಅವರ ಮುಂದೆ ಇಡುತ್ತಿದ್ದೇವೆ. ಮೋದಿ, ವಾಜಪೇಯಿ ಕಾಲದಲ್ಲಿಯೇ ಅತಿಹೆಚ್ಚು ಬಡವರ ಪರ ಕಾರ್ಯಗಳನ್ನು ಜಾರಿ ಮಾಡಿದ್ದಾರೆ. ಜನಪರ ಕಾಳಜಿ ಕಾರ್ಯಗಳನ್ನು ಹೊಂದಿರುವ ಸರ್ಕಾರ ಬಿಜೆಪಿ ಸರ್ಕಾರ ಎಂದರು.

Advertisement

ಕಿಸಾನ್ ಸನ್ಮಾನ್ ತಂದಿದ್ದು ಕಾಂಗ್ರೆಸ್ ಅಲ್ಲ. ಫಸಲ್ ಬಿಮಾ ಯೋಜನೆ ಕಾಂಗ್ರೆಸ್ ತಂದಿಲ್ಲ. ಅತಿ ಹೆಚ್ಚು ಬೆಂಬಲ ಬೆಲೆ ನೀಡಿರುವುದು ಮೋದಿ ಸರ್ಕಾರ. ಇದನ್ನು ನಾವು ಹೇಳುತ್ತಿಲ್ಲ ಅಂಕಿ ಅಂಶಗಳೇ ಹೇಳುತ್ತವೆ ಎಂದರು. ದುರ್ದೈವ ಸಂಗತಿ ಎಂದರೆ ಯಾವುದು ರೈತ ಪರ, ಜನಪರ ಇರುವ ಕಾರ್ಯಗಳನ್ನು ಜನ ವಿರೋಧಿ ಎಂದು ಬಿಂಬಿಸಲಾಗುತ್ತಿದೆ. ತಾವು ಒಳ್ಳೆಯ ಕಾರ್ಯ ಮಾಡಲಿಲ್ಲ. ನಮಗೂ ಮಾಡಲು ಬಿಡುತ್ತಿಲ್ಲ. ಕೃಷಿ ಮಸೂದೆ ತಿದ್ದುಪಡಿಯಲ್ಲಿ ಯಾವ ಅಂಶ ತಪ್ಪಾಗಿದೆ ಹೇಳಲಿ ನೋಡೋಣ ಎಂದು ಸಿ.ಟಿ.ರವಿ ಸವಾಲೆಸೆದರು.

ಬಿಜೆಪಿ ಪರ ಇರುವ ವಾತಾವರಣ ನಿರ್ಮಾಣ ಮಾಡಿ ನಾವು ಗೆಲ್ಲುತ್ತೇವೆ. ಜಲಜೀವನ ಯೋಜನೆಯಡಿ ಹಳ್ಳಿ ಹಳ್ಳಿಗೂ ಮನೆ ಮನೆಗೂ ನೀರು ಕೊಡುವ ಕಾರ್ಯ ನಾವು ಮಾಡಿದ್ದೇವೆ. ಯಾವಾಗ ಸರಕುಗಳ ಖಾಲಿ ಆಗುತ್ತವೆಯೋ ಆಗ ಜಾತಿ ಸೇರಿ ಎಲ್ಲ ಆರೋಪ ಕಾಂಗ್ರೆಸ್ ನಿಂದ ಶುರುವಾಗುತ್ತದೆ ಎಂದರು.

ಇದನ್ನೂ ಓದಿ:ಚುನಾವಣೆಯಲ್ಲಿ ಸಚಿವರಿಗೆ ಎರಡು ಜಿ.ಪಂ. ಉಸ್ತುವಾರಿ ಸಮರ್ಥ ನಿಭಾವಣೆ: ಶಶಿಕಲಾ ಜೊಲ್ಲೆ

ಜಾತಿವಾದಿ, ಮಜಾವಾದಿ, ಸಮಾಜವಾದಿ, ಡಿಎನ್ಎ ಮೂಲಕ ನಾಯಕತ್ವ ಬರುವುದಿಲ್ಲ.‌ ಕೆಲವರು ಡಿಎನ್ಎ ಮೂಲಕ ನಾಯಕತ್ವ ತೆಗೆದುಕೊಳ್ಳಲು ಮುಂದಾಗುತ್ತಿದ್ದಾರೆ. ಅವರು ಹೈಬ್ರೀಡ್ ನಾಯಕರು ಎಂದರು.

ಗೆಲುವಿನ ವಿಶ್ವಾಸ: ಎರಡೂ ಮತ ಕ್ಷೇತ್ರದಲ್ಲಿ ಒಳ್ಳೆಯ ಗೆಲುವು ಪಡೆಯಲಿದೆ ಎಂಬ ವಿಶ್ವಾಸವಿದೆ. ಸಿ.ಎಂ.‌ಉದಾಸಿ ಅವರು 599 ಕೋಟಿ ರೂ.ಗಳಲ್ಲಿ ಬಾಳಂಬೀಡ, ಚಿಕ್ಕಾಂಸಿ ಏತ ನೀರಾವರಿ ಸೇರಿ ಅನೇಕ ರೈತರಿಗೆ ಅನುಕೂಲವಾಗುವ ಕಾರ್ಯ ಮಾಡಿದ್ದಾರೆ. ಸಜ್ಜನರ ಅವರ ನೆರಳಾಗಿ, ರಾಜಕೀಯ ಬೆಂಗಾವಲಾಗಿ ಉದಾಸಿ ಅವರು ನಿಂತಿದ್ದರು ಎಂದರು.

ದಾರಿ ತಪ್ಪಿಸುವ ರಾಜಕಾರಣ: ಕಾಂಗ್ರೆಸ್ ಈ ಕ್ಷೇತ್ರದಲ್ಲಿ ಅಭಿವೃದ್ಧಿ ರಾಜಕಾರಣ ಚರ್ಚೆ ಮಾಡುತ್ತಿಲ್ಲ. ಸಮಾಜ ಒಡೆಯುವ, ಜನರಿಗೆ ದಿಕ್ಕು ತಪ್ಪಿಸುವ ರಾಜಕಾರಣ ಮಾಡುತ್ತಿದೆ. ಅಭಿವೃದ್ಧಿ ಮುಖ್ಯವಾಗಿದ್ದರೆ ಚರ್ಚೆ ಮಾಡಲಿ. ಈ ಹಿಂದೆ ಅವರ ಶಾಸಕರು, ಸಚಿವರು ಇದ್ದ ಕಾಲದ ಅಭಿವೃದ್ಧಿಯಾಗಿದ್ದರೆ ಚರ್ಚೆ ಮಾಡಲಿ. ಕಾಂಗ್ರೆಸ್ ನವರು ಜಾತಿ ಹೆಸರಿನಲ್ಲಿ ಸೋಗು ಹಾಕುವವರು ಎಂದು ವ್ಯಂಗ್ಯವಾಡಿದರು.

ಕಂಬಳಿ ಹಾಕಿದ್ರಾ, ಕುರಿ, ದನ ಕಾಯೋದು ನಾವೆಲ್ಲರೂ ಬಾಲ್ಯದಲ್ಲಿ ಮಾಡಿದ ಸಂಗತಿ. ನಾನೂ ದನ ಕಾಯ್ದಿದ್ದೇನೆ. ಆದರೆ ಈಗ ದನ ಕಾಯಲು ಸ್ಪರ್ಧೆ ನಡೆದಿಲ್ಲ. ವಿಧಾನಸಭೆಗೆ ಹೋಗುವ ಸ್ಪರ್ಧೆ ನಡೆದಿದೆ. ಜನರಿಗೆ ಒಳ್ಳೆಯ ಆಡಳಿತ ನೀಡುವ ವ್ಯಕ್ತಿ ಆಯ್ಕೆ ನಡೆದಿದೆ ಎಂದು ಸಿದ್ದರಾಮ್ಯನವರ ಹೇಳಿಕೆಗೆ ಸಿ ಟಿ ರವಿ ತಿರಗೇಟು ನೀಡಿದರು.

ಚೀಲದಲ್ಲಿ ಹಣ ತಂದು ಹಂಚುವ ಎಕ್ಸಪರ್ಟ್ ಗಳು ಕಾಂಗ್ರೆಸ್ ನಲ್ಲಿದ್ದಾರೆ. ಅದರಲ್ಲಿ ಪದವಿ, ಪಿಎಚ್.ಡಿ ಮಾಡಿದವರು ಅವರಲ್ಲಿದ್ದಾರೆ. ನಮ್ಮದು ಜಾತಿ ರಾಜಕಾರಣವಲ್ಲ‌. ನೀತಿ ರಾಜಕಾರಣ. ನಾವು ಜಾತಿ ಆಧಾರದ ಮೇಲೆ ಯಾವ ಯೋಜನೆ ತಂದಿಲ್ಲ. ಬಡವರ ಪರ ಯೋಜನೆ ತಂದಿದ್ದೇವೆ. ಆದರೆ ಅದು ಕಾಂಗ್ರೆಸ್ ನವರಿಗೆ ಕೋಮುವಾದ ಕಂಡಂತೆ ಕಾಣುತ್ತದೆ ಎಂದರು.

ಆರ್ ಎಸ್ಎಸ್ ಸೂರ್ಯ ಇದ್ದಂತೆ ಇದಕ್ಕೆ ಉಗಿದರೆ ಅದು ವಾಪಸ್ ಅವರ ಮುಖಕ್ಕೆ ಬಿಳುತ್ತದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಸಿ.ಟಿ.ರವಿ, ಆರ್ ಎಸ್ ಎಸ್ ಬಗ್ಗೆ ಮಾತನಾಡುವವರಿಗೆ ಮೊದಲು ನೈತಿಕತೆ ಬೇಕು. ಕುಮಾರಸ್ವಾಮಿ ಹಾಗೂ ಜಮೀರ್ ಅಹ್ಮದ್ ಅವರ ಸ್ನೇಹದ ನೈಜ್ ಸಂಬಂಧದ ಬಗ್ಗೆ ಯಾರಾದರೂ ಒಬ್ಬರು ಬಾಯಿ ಬಿಟ್ಟರೆ ಬಹಳ ದೊಡ್ಡ ಮಾನಗೇಡಿ ಆಗುತ್ತೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next