Advertisement

ಕಾಂಗ್ರೆಸ್ ಪಕ್ಷ ನಿರಂತರವಾಗಿ ದೇಶದ್ರೋಹಕ್ಕೆ ಪ್ರೋತ್ಸಾಹ ನೀಡುತ್ತಿದೆ; ಶೋಭಾ ಕರಂದ್ಲಾಜೆ

08:29 AM Jun 13, 2021 | Team Udayavani |

ಉಡುಪಿ: ಕಾಂಗ್ರೆಸ್ ಯಾವಾಗಲೂ ರಾಷ್ಟ್ರ ವಿರೋಧಿ ಎನ್ನುವುದು ಪದೇ ಪದೇ ಸಾಬೀತಾಗುತ್ತಿದೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ.

Advertisement

ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ಕಾಶ್ಮೀರದಲ್ಲಿ ಆರ್ಟಿಕಲ್ 370 ಅನ್ನು ಮರುಸ್ಥಾಪಿಸುತ್ತೇವೆ ಎಂದು ದಿಗ್ವಿಜಯ ಸಿಂಗ್ ಹೇಳಿರುವುದು ನಿಜಕ್ಕೂ ಆಘಾತಕಾರಿ. ಕಾಶ್ಮೀರದಲ್ಲಿ ಎಲ್ಲರೂ ಸಮಾನವಾಗಿ ಬದುಕುವ ಹಕ್ಕನ್ನು ಸ್ಥಾಪಿಸಿರುವ ಕೇಂದ್ರ ಸರಕಾರದ ನಿರ್ಧಾರವನ್ನು ರದ್ದು ಮಾಡ್ತೇವೆ ಎನ್ನುವ ಹೇಳಿಕೆ ನಿಜಕ್ಕೂ ಬಾಲಿಶ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಫೀಲ್ಡಿಂಗ್ ವೇಳೆ ಸಹ ಆಟಗಾರನಿಗೆ ಢಿಕ್ಕಿ ಹೊಡೆದ ಫಾಫ್ ಡು ಪ್ಲೆಸಿಸ್; ಆಸ್ಪತ್ರೆಗೆ ದೌಡು

ಕಾಂಗ್ರೆಸ್ ನಿರಂತರವಾಗಿ ದೇಶದ್ರೋಹಕ್ಕೆ ಪ್ರೋತ್ಸಾಹ ನೀಡುತ್ತಿದೆ. ದಿಗ್ವಿಜಯ ಸಿಂಗ್ ಅವರ ಮೇಲೆ ಕೇಂದ್ರ ಸರಕಾರ ದೇಶದ್ರೋಹದ ಅಡಿಯಲ್ಲಿ ಕೇಸು ದಾಖಲಿಸಬೇಕು, ಮಾತ್ರವಲ್ಲದೆ ಕಾಂಗ್ರೆಸ್  ಅವರನ್ನು ಪಕ್ಷದಿಂದ ಉಚ್ಛಾಟಿಸಬೇಕು. ಕಾಂಗ್ರೆಸ್ ಪಕ್ಷ ಅವರ ನಿಲುವನ್ನು ಈ ವಿಚಾರದಲ್ಲಿ ಸ್ಪಷ್ಟಪಡಿಸಲಿ ಎಂದರು.

ದೇಶದಲ್ಲಿ ಮತ್ತು ರಾಜ್ಯದಲ್ಲಿ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿರುವ ಕಾಂಗ್ರೆಸ್ ಮಾನಸಿಕ ಸ್ಥಿಮಿತವನ್ನು ಕಳೆದುಕೊಳ್ಳುತ್ತಿದೆ ಇದೆ ವೇಳೆ ಕಿಡಿಕಾರಿದರು.

Advertisement

ಇದನ್ನೂ ಓದಿ:  ನಿಮ್ಮ ಗ್ರಹಬಲ: ಈ ರಾಶಿಯವರಿಗಿಂದು ಬೇಡಿಕೆ ಈಡೇರಿಸುವ ತಾಕಲಾಟದಿಂದ ಕಿರಿಕಿರಿ ತಂದೀತು!

Advertisement

Udayavani is now on Telegram. Click here to join our channel and stay updated with the latest news.

Next