Advertisement

ರೈತರನ್ನು ಬೀದಿಗೆ ತಂದಿದ್ದೇ ಬಿಜೆಪಿ ಸಾಧನೆ

05:33 PM Dec 29, 2020 | Suhan S |

ದಾವಣಗೆರೆ: ಕಾಂಗ್ರೆಸ್‌ನ 135ನೇ ವರ್ಷದ ಸಂಸ್ಥಾಪನಾ ವರ್ಷಾಚರಣೆ ಪ್ರಯುಕ್ತ ಸೋಮವಾರನಗರದಲ್ಲಿ ಬೈಕ್‌ ರ್ಯಾಲಿ ಹಾಗೂ ಸಮರ್ಪಣಾ ಸಮಾವೇಶ ನಡೆಯಿತು.

Advertisement

ಬೆಳಿಗ್ಗೆ ಮಹಾನಗರ ಪಾಲಿಕೆ ಆವರಣದ ಮಹಾತ್ಮ ಗಾಂಧಿ, ಡಾ| ಬಿ.ಆರ್‌.ಅಂಬೇಡ್ಕರ್‌, ಬಾಬು ಜಗಜೀವನ್‌ ರಾಮ್‌ ಪ್ರತಿಮೆ ಮತ್ತು ಹುತಾತ್ಮ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕಕ್ಕೆ ಪುಷ್ಪ ನಮನಸಲ್ಲಿಸಲಾಯಿತು. ನಂತರ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ಬಿ. ಮಂಜಪ್ಪನವರ ನೇತೃತ್ವದಲ್ಲಿ ಮಹಾನಗರಪಾಲಿಕೆ ಆವರಣದಿಂದ ಹೊರಟ ಬೈಕ್‌ ರ್ಯಾಲಿನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಜಿಲ್ಲಾ ಕಾಂಗ್ರೆಸ್‌ ಕಚೇರಿಗೆ ಆಗಮಿಸಿತು.

ಜಿಲ್ಲಾ ಕಾಂಗ್ರೆಸ್‌ ಕಚೇರಿಯ ಎಸ್‌.ಎಸ್‌. ಭವನದಲ್ಲಿ ನಡೆದ ಸಮರ್ಪಣಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ಬಿ. ಮಂಜಪ್ಪ, ರೈತರು ಸ್ವಾವಲಂಬಿ ಜೀವನನಡೆಸಲು ಅನೇಕ ಜನಪರ ಕಾರ್ಯಕ್ರಮಗಳನ್ನು ತಂದಿದ್ದಕಾಂಗ್ರೆಸ್‌ ಪಕ್ಷವನ್ನು ಮೂದಲಿಸಿ ಅಧಿಕಾರಕ್ಕೆ ಬಂದ ಬಿಜೆಪಿ, ರೈತರನ್ನು ಬೀದಿಗೆ ತಂದಿದೆ. ಇದೇ ಆ ಪಕ್ಷದದೊಡ್ಡ ಕೊಡುಗೆ ಎಂದು ಟೀಕಿಸಿದರು. ಕೆಪಿಸಿಸಿ ವಕ್ತಾರ ಡಿ. ಬಸವರಾಜ್‌ ಮಾತನಾಡಿ,

ಬಿಜೆಪಿ ಸರ್ಕಾರದ ಆಡಳಿತದಿಂದ ಜನ ಬೇಸತ್ತಿದ್ದು, ಅರಾಜಕತೆ ಮೂಡಿದೆ. ದೇಶವನ್ನು ಜಾತಿ-ಧರ್ಮದ ವಿಷಯದಲ್ಲಿ ಒಡೆಯಲಾಗುತ್ತಿದೆ. ಬಿಜೆಪಿಗರು ದೇಶದ ಎಲ್ಲಾ ಸರ್ಕಾರಿ ಸಂಸ್ಥೆಗಳನ್ನು ಅಂಬಾನಿ, ಆದಾನಿಯಂತಹ ಉದ್ಯಮಿಗಳಿಗೆ

ಮಾರಾಟ ಮಾಡುತ್ತಿದ್ದಾರೆ. ಅದರ ಬದಲು ಇಡೀ ದೇಶವನ್ನೇ ಅವರಿಗೆ ಮಾರಾಟ ಮಾಡಲಿ ಎಂದುವ್ಯಂಗ್ಯವಾಡಿದರು. ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ದಿನೇಶ್‌ ಕೆ. ಶೆಟ್ಟಿ, ಜಿಲ್ಲಾ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಅನಿತಾಬಾಯಿ ಮಾಲತೇಶ್‌,ಜಿಪಂ ಸದಸ್ಯ ಜಿ.ಸಿ. ನಿಂಗಪ್ಪ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅಯೂಬ್‌ ಪೈಲ್ವಾನ್‌, ಜಿಲ್ಲಾ ಕಾರ್ಯದರ್ಶಿ ಎಸ್‌. ಮಲ್ಲಿಕಾರ್ಜುನ್‌, ಪಾಲಿಕೆ ಸದಸ್ಯ ಚಮನ್‌ ಸಾಬ್‌, ಮಾಜಿ ಸದಸ್ಯ ಕೆ.ಜಿ. ಶಿವಕುಮಾರ್‌, ಅಲಿ ರಹಮತ್‌, ಮೈನುದ್ದೀನ್‌, ಸೇವಾದಳದ ಡೋಲಿ ಚಂದ್ರು, ಅಬ್ದುಲ್‌ ಜಬ್ಟಾರ್‌ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next