Advertisement

ಮತ್ತಷ್ಟು ಜೆಡಿಎಸ್‌ ಶಾಸಕರು ಕಾಂಗ್ರೆಸ್‌ನತ್ತ?

07:35 AM Aug 26, 2021 | Team Udayavani |

ಬೆಂಗಳೂರು: ಆಪರೇಷನ್‌ ಕಾಂಗ್ರೆಸ್‌ ಕಾರ್ಯಾಚರಣೆಯಡಿ ಜಿ. ಟಿ. ದೇವೇಗೌಡರ ಬಳಿಕ ಇನ್ನೂ ನಾಲ್ವರು ಜೆಡಿಎಸ್‌ ಶಾಸಕರಿಗೆ ಗಾಳ ಹಾಕಲಾಗಿದೆ.

Advertisement

ಉತ್ತರ ಕರ್ನಾಟಕ, ಮಲೆನಾಡು ಹಾಗೂ ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್‌ ಶಕ್ತಿಯನ್ನು ಕುಗ್ಗಿಸಿ ಕಾಂಗ್ರೆಸ್‌ ಬಲ ಹೆಚ್ಚಿಸಿಕೊಳ್ಳಲು ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಜತೆಗೂಡಿ ಕಾರ್ಯ ತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ.

ಮೊದಲ ಹಂತದಲ್ಲಿ ಶಾಸಕರಾದ ಗುಬ್ಬಿ ವಾಸು, ಕೋಲಾರದ ಶ್ರೀನಿವಾಸ ಗೌಡ, ವಿಧಾನಪರಿಷತ್‌ ಸದಸ್ಯರಾದ ಬೆಮೆಲ್‌ ಕಾಂತರಾಜ್‌ ಹಾಗೂ ವಿ. ಮನೋಹರ್‌ ಅವರನ್ನು ಕಾಂಗ್ರೆಸ್‌ಗೆ ಸೆಳೆಯಲು ಮಾತುಕತೆ ನಡೆಸಲಾಗಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಟಿಕೆಟ್‌ ಭರವಸೆ :

ತುಮಕೂರಿನ ಗುಬ್ಬಿ ಶ್ರೀನಿವಾಸ್‌ ಮಾನಸಿಕವಾಗಿ ಜೆಡಿಎಸ್‌ನಿಂದ ದೂರವಿದ್ದು, ಕಾಂಗ್ರೆಸ್‌ ನಾಯಕರ ಸಂಪರ್ಕದಲ್ಲಿದ್ದಾರೆ. ಬೆಮೆಲ್‌ ಕಾಂತರಾಜ್‌ ಅವರಿಗೆ ತುರುವೇಕರೆ ಕ್ಷೇತ್ರದ ಟಿಕೆಟ್‌ ನೀಡುವ ಬಗ್ಗೆ ಚರ್ಚೆಯಾಗಿದೆ ಎನ್ನಲಾಗಿದೆ. ಕೋಲಾರದ ಶ್ರೀನಿವಾಸ ಗೌಡ ಅವರ ಪುತ್ರನಿಗೆ ಜಿಲ್ಲಾ ಪಂಚಾ ಯತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ನೀಡಿ ಜೆಡಿಎಸ್‌ ವಿಧಾನಪರಿ ಷತ್‌ ಸದಸ್ಯ ವಿ. ಮನೋಹರ್‌ಗೆ ಕೋಲಾರದ ಟಿಕೆಟ್‌ ನೀಡುವ ಭರವಸೆ ನೀಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

Advertisement

ಮತ್ತೂಂದೆಡೆ ಮಾಜಿ ಸಚಿವ ವರ್ತೂರು ಪ್ರಕಾಶ್‌ ಅವರು ಕೂಡ ಕಾಂಗ್ರೆಸ್‌ ಪಕ್ಷವನ್ನು ಸೇರಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಬಿಜೆಪಿ ಸೇರಿರುವ ಐವರು ಮತ್ತೆ ಕಾಂಗ್ರೆಸ್‌ಗೆ? :

ಕಾಂಗ್ರೆಸ್‌ನಿಂದ ಬಿಜೆಪಿಗೆ ಹೋಗಿರುವವರ ಪೈಕಿ ಐವರು ವಿಧಾನಸಭೆ ಚುನಾವಣೆ ವೇಳೆಗೆ  ಕಾಂಗ್ರೆಸ್‌ಗೆ ಮರಳುವ  ನಿರೀಕ್ಷೆಯಿದೆ. ಕಾಂಗ್ರೆಸ್‌ಗೆ ಸಮರ್ಥ ಅಭ್ಯರ್ಥಿಗಳ ಕೊರತೆ ಇರುವ 10ರಿಂದ 15 ಕ್ಷೇತ್ರಗಳಲ್ಲಿ ಹೊಸಮುಖಗಳ  ಹುಡುಕಾಟ ನಡೆಯುತ್ತಿದೆ.  ಜಿ.ಟಿ.ದೇವೇಗೌಡರಿಗೆ ಚಾಮುಂಡೇಶ್ವರಿ ಹಾಗೂ ಅವರ ಪುತ್ರ ಹರೀಶ್‌ ಗೌಡರಿಗೆ ಕೆ.ಆರ್‌. ನಗರ ಕ್ಷೇತ್ರದ ಟಿಕೆಟ್‌ ಭರವಸೆ ನೀಡಲಾಗಿದೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next