Advertisement

60 ವರ್ಷ ದೇಶ ಆಳಿ ಅಧೋಗತಿಗೆ ತಂದ ಕಾಂಗ್ರೆಸ್‌

03:28 PM Apr 14, 2021 | Team Udayavani |

ಬೈಲಹೊಂಗಲ: ಭಾರತವನ್ನು ಬಲಿಷ್ಟ ರಾಷ್ಟ್ರವನ್ನಾಗಿ ರೂಪಿಸಲು ಪ್ರಜ್ಞಾವಂತಮತದಾರರು ಲೋಕಸಭೆ ಉಪಚುನಾಣೆಯಲ್ಲಿಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಅವರಿಗೆಆಶೀರ್ವದಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕೈ ಬಲ ಪಡಿಸಬೇಕು ಎಂದು ವಿಧಾನಪರಿಷತ್‌ ಸದಸ್ಯೆ ತೇಜಸ್ವಿನಿಗೌಡ ರಮೇಶ ಹೇಳಿದರು.

Advertisement

ಪಟ್ಟಣದ ನ್ಯಾಯಾಲಯ ಆವರಣದಲ್ಲಿ ರಾಜ್ಯ ಬಿಜೆಪಿ ಕಾನೂನು ಪ್ರಕೋಷ್ಠದಿಂದ ಸೋಮವಾರ ನಡೆದ ಚುನಾವಣೆ ಪ್ರಚಾರದಲ್ಲಿ ಅವರು ಮಾತನಾಡಿ, 60 ವರ್ಷ ದೇಶವನ್ನಾಳಿದ ಕಾಂಗ್ರೆಸ್‌ ಪಕ್ಷ ದೇಶವನ್ನು ಅಧೋಗತಿಗೆ ತಂದುಅನ್ಯ ರಾಷ್ಟ್ರಗಳೆದರು ಸಾಲಗಾರರನ್ನಾಗಿಸಿಭಾರತಕ್ಕೆ ಮಸಿ ಬಳಿದಿದ್ದರು. ಆದರೆ ಈಗಿನ ಪ್ರಧಾನಿ ಇಡೀ ವಿಶ್ವವೇ ಬೇರರಾಗುವ ರೀತಿಯಲ್ಲಿ ದೇಶವನ್ನು ಮುನ್ನಡೆಸುತ್ತಿದ್ದಾರೆ.

ಇದನ್ನು ಅರಗಿಸಿಕೊಳ್ಳಲಾಗದ ಕಾಂಗ್ರೆಸ್‌ನವರು ವಿನಾಕಾರಣ ಕೇಂದ್ರ, ರಾಜ್ಯ ಸರ್ಕಾರ ವಿರುದ್ಧಗೂಬೆ ಕೂರಿಸುತ್ತಿದ್ದಾರೆ. ಸತತ ನಾಲ್ಕು ಬಾರಿ ಚುನಾಯಿತರಾಗಿ ರೈಲ್ವೆ ಸಚಿವರಾಗಿದ್ದ ಸುರೇಶಅಂಗಡಿ ಅವರು ಹಲವು ಯೋಜನೆ ಜಾರಿಗೆತಂದಿದ್ದಾರೆ. ಅವರ ಕನಸು ನನಸು ಮಾಡುವನಿಟ್ಟಿನಲ್ಲಿ ಮಂಗಲಾ ಅವರು ಕಾರ್ಯೋನ್ಮಕರಾಗಿಕೆಲಸ ಮಾಡಲು ಚುನಾವಣೆಯಲ್ಲಿ ಪ್ರಚಂಡಬಹುಮತದಿಂದ ಗೆಲ್ಲಿಸಬೇಕು. ಈ ನಿಟ್ಟಿನಲ್ಲಿಬಿಜೆಪಿ ಕಾನೂನು ಘಟಕ ಕೆಲಸ ಮಾಡಬೇಕು ಎಂದರು.

ಬೆಳಗಾವಿ ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ, ಬಿಜೆಪಿ ಕಾನೂನು ಪ್ರಕೋಷ್ಠರಾಜ್ಯ ಸಂಚಾಲಕ ಎಸ್‌.ಎಸ್‌. ಮಿತ್ತಲಕೋಡಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ಶಿವಾನಂದ ಆನಿಗೋಳ ಅಧ್ಯಕ್ಷತೆ ವಹಿಸಿದ್ದರು.ಸದಸ್ಯರಾದ ದೇವರಾಜ ಬಸ್ತವಾಡೆ,ಬಿ.ಟಿ.ದಯಾನಂದ, ಜಿಲ್ಲಾ ಸಂಚಾಲಕ ವಿನೋದಪಾಟೀಲ, ವಕೀಲರಾದ ಅಶೋಕ ಮೂಗಿ, ಶಶಿಧರ ದೇವಶೆಟ್ಟಿ, ರಾಜೇಂದ್ರ ದರೆಗೌಡ, ಮಂಜುನಾಥ ಸೋಮಣ್ಣವರ, ಪೂರ್ಣಿಮಾ,ವಕೀಲರಾದ ದುಂಡೇಶ ಗರದಗ, ಡಿ.ಎಸ್‌.ಸಂಗೊಳ್ಳಿ, ವಿ.ಸಿ.ಪೂಜೇರ, ಬಿ.ಎಂ.ಮೂಲಿಮನಿ,ಈರಣ್ಣಾ ಮೇಟಿ, ಬಸವರಾಜ ಧೋತರದ,ಜಗದೀಶ ಚಿಕ್ಕೊಪ್ಪ, ಜಯಶ್ರೀ ಬೂದಿಹಾಳ,ಗಿರಿಜಾ ಆಲದಕಟ್ಟಿ, ಅಶ್ವಿ‌ನಿ ಪಿರಗೋಜಿ ಇದ್ದರು.ಸಂತೋಷ ಭಾಂವಿ ಸ್ವಾಗತಿಸಿದರು. ಐ.ಎಫ್‌. ತಡಸಲ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next