Advertisement
ಮಧ್ಯಪ್ರದೇಶದ 144 ವಿಧಾನಸಭಾ ಕ್ಷೇತ್ರ, ಛತ್ತೀಸ್‌ಗಢದ 30 ಮತ್ತು ತೆಲಂಗಾಣದಲ್ಲಿ 55 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕಾಂಗ್ರೆಸ್ ಘೋಷಿಸಿದೆ.
Related Articles
Advertisement
ಛತ್ತೀಸ್‌ಗಢ: 90 ವಿಧಾನ ಸಭೆ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 30 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಛತ್ತೀಸ್‌ಗಢದ ಉಪಮುಖ್ಯಮಂತ್ರಿ ಟಿಎಸ್ ಸಿಂಗ್ ದೇವ್ ಅವರು ತನ್ನ ಬಲಿಷ್ಠ ಕ್ಷೇತ್ರವಾದ ಅಂಬಿಕಾಪುರದಿಂದಲೇ ಈ ಬಾರಿಯೂ ಸ್ಪರ್ಧಿಸಲಿದ್ದಾರೆ. ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಪಟಾನ್‌ನಿಂದ ಸ್ಪರ್ಧಿಸಲಿದ್ದಾರೆ. ವಿಶೇಷವೆಂದರೆ 30 ಅಭ್ಯರ್ಥಿಗಳ ಪೈಕಿ 14 ಮಂದಿ ಎಸ್‌ಟಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ.ಇದಲ್ಲದೆ ಮೊದಲ ಪಟ್ಟಿಯಲ್ಲಿ ಮೂವರು ಮಹಿಳೆಯರಿಗೆ ಟಿಕೆಟ್ ನೀಡಲಾಗಿದೆ.
ಚುನಾವಣೆ ಯಾವಾಗ?: ಛತ್ತೀಸ್‌ಗಢದಲ್ಲಿ ನವೆಂಬರ್ 7 ಮತ್ತು ನವೆಂಬರ್ 17 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಡಿಸೆಂಬರ್ 3 ರಂದು ಫಲಿತಾಂಶ ಪ್ರಕಟವಾಗಲಿದೆ.
ತೆಲಂಗಾಣ: 119 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಮೊದಲ 55 ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ. ಮುಖ್ಯವಾಗಿ ಕೊಡಂಗಲ್ ಕ್ಷೇತ್ರದಿಂದ ಅನುಮುಲಾ ರೇವಂತ್ ರೆಡ್ಡಿ, ಹುಜೂರ್‌ನಗರದಿಂದ ಉತ್ತಮ್‌ಕುಮಾರ್ ರೆಡ್ಡಿ ಅವರಿಗೆ ʼಕೈʼ ಟಿಕೆಟ್ ನೀಡಿದೆ. ಇತರೆ ಪ್ರಮುಖ ಹೆಸರುಗಳೆಂದರೆ, ಮುಳುಗು ಕ್ಷೇತ್ರದಿಂದ ದಾಸರಿ ದಾಸರಿ ಸೀತಕ್ಕ ಅವರಿಗೆ ಟಿಕೆಟ್ ನೀಡಿದ್ದು, ಮೇದಕ್‌ನಿಂದ ಮೈನಂಪಳ್ಳಿ ರೋಹಿತ್ ರಾವ್ ಮತ್ತು ಮಲ್ಕಾಜ್‌ಗಿರಿಯಿಂದ ಮೈನಂಪಳ್ಳಿ ಹನುಮಂತರಾವ್ ಸ್ಪರ್ಧಿಸಲಿದ್ದಾರೆ.
ಚುನಾವಣೆ ಯಾವಾಗ?: ತೆಲಂಗಾಣದಲ್ಲಿ ನವೆಂಬರ್ 30 ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 3 ರಂದು ಫಲಿತಾಂಶ ಪ್ರಕಟವಾಗಲಿದೆ.