Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೊಗರಿ ಬೆಳೆ ಸಂಪೂರ್ಣವಾಗಿ ನೆಟೆ ರೋಗಕ್ಕೆ ತುತ್ತಾಗಿ ಹಾಳಾ ಗಿದೆ. ಈ ಸಂದರ್ಭದಲ್ಲಿ ಸರಕಾರ ರೈತರ ನೆರವಿಗೆ ಬರಬೇಕಿತ್ತು. ಆದರೆ ಇದುವರೆಗೆ ನೆರವಿಗೂ ಬಂದಿಲ್ಲ, ಪರಿಹಾರವನ್ನು ಕೊಡುತ್ತಿಲ್ಲ. ಹೀಗಾಗಿ ಬೆಳಗಾವಿ ಅ ಧಿವೇಶನದಲ್ಲಿ ತೊಗರಿ ಬಗ್ಗೆ ಚರ್ಚಿಸಲಿದ್ದೇನೆ ಎಂದರು.
ಅರ್ಜಿ ಹಾಕಿ ಯಾರೂ ಯಾವುದೇ ಜಾತಿಯಲ್ಲಿ ಜನಿಸುವುದಿಲ್ಲ. ನನ್ನ ತಂದೆ, ತಾಯಿ ಕುರುಬ ಜಾತಿಯವರು. ಹೀಗಾಗಿ ನಾನು ಕುರುಬ. ನನಗೆ ಹಿಂದೂ ಧರ್ಮದ ಮೇಲೆ ನಂಬಿಕೆಯಿದೆ. ಅದನ್ನು ತೋರಿಕೆಗೆ, ಪ್ರಚಾರಕ್ಕೆ ಬಳಸಿಕೊಳ್ಳುವ ಅಗತ್ಯ ನನಗಿಲ್ಲ. ಆದರೆ ಸಿ.ಟಿ. ರವಿ ನನ್ನನ್ನು ಸಿದ್ರಾಮುಲ್ಲಾ ಖಾನ್ ಎಂದು ಹೆಸರಿಸಿದ್ದಾನೆ. ಅದಕ್ಕೆ ನನ್ನ ಪ್ರತಿಕ್ರಿಯೆ ಇಲ್ಲ. ರಾಜಕೀಯದ ಬಗ್ಗೆ ನಾನು ಹೆಚ್ಚುಮಾತನಾಡುವುದಿಲ್ಲ, ಜನ ಎಲ್ಲವನ್ನೂ ಸೂಕ್ಷ¾ವಾಗಿ ಗಮನಿಸುತ್ತಿದ್ದಾರೆ. ಜನರೇ ಅವರಿಗೆ ಉತ್ತರ ನೀಡುತ್ತಾರೆ. ರಾಜಕೀಯದಲ್ಲಿ ಎತ್ತಿ ಕಟ್ಟುವ ಕೆಲಸ ಮಾಡಬೇಡಿ, ಜನಸೇವೆ ಮಾಡುವ ಮನೋಭಾವ ಇದ್ದರೆ ರಾಜಕೀಯದಲ್ಲಿರಿ. ಇಲ್ಲದಿದ್ದರೆ ಜಾಗ ಖಾಲಿ ಮಾಡಿ ಎಂದರು.