ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಸೀಟು ಹಂಚಿಕೆಯಿಂದ ಕೆಲವು ಕ್ಷೇತ್ರಗಳಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಒಳಸೂತ್ರವೊಂದನ್ನು ಕಂಡುಹಿಡಿಯಲಾಗಿದೆಯಂತೆ.
ಕಾಂಗ್ರೆಸ್ ಗೆದ್ದಿರುವ ಕ್ಷೇತ್ರಗಳನ್ನು ಬಿಟ್ಟು ಕೊಡಲು ಹಾಲಿ ಸಂಸದರು ವಿರೋಧ ವ್ಯಕ್ತಪಡಿಸುತ್ತಿದ್ದರೂ, ಅದೇ ಕ್ಷೇತ್ರ ಬೇಕು ಎಂದು ಜೆಡಿಎಸ್ ಪಟ್ಟು ಹಿಡಿದಿರುವುದರಿಂದ ಆ ಕ್ಷೇತ್ರದ ಹಾಲಿ ಕಾಂಗ್ರೆಸ್ ಸಂಸದರನ್ನೇ ಜೆಡಿಎಸ್ ಅಭ್ಯರ್ಥಿಯನ್ನಾಗಿಸುವ ಯೋಚನೆಯೂ ಇದೆಯಂತೆ!
ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಈ ರೀತಿಯ ಸಾಧ್ಯತೆಯನ್ನು ಪತ್ತೆ ಮಾಡಲಾಗಿದೆ. ಹೇಗೂ ಮುದ್ದ ಹನುಮೇಗೌಡರು ಮೊದಲು ಜೆಡಿಎಸ್‌ನಲ್ಲಿದ್ದವರು. ಅವರನ್ನೇ ಜೆಡಿಎಸ್ ಅಭ್ಯರ್ಥಿಯಾಗಿಸುವ ಬಗ್ಗೆ ಎರಡೂ ಪಕ್ಷಗಳ ನಾಯಕರು ಚಿಂತನೆ ನಡೆಸಿದ್ದಾರಂತೆ.
ತುಮಕೂರು ಕ್ಷೇತ್ರವನ್ನು ಬಿಟ್ಟುಕೊಟ್ಟಂತೆಯೂ ಆಗುತ್ತದೆ. ಕಾಂಗ್ರೆಸ್ ನ ಮುದ್ದ ಹನುಮೇಗೌಡರಿಗೆ ಟಿಕೆಟ್ ತಪ್ಪದಂತೆಯೂ ಆಗಲಿದೆ ಎಂಬ ಲೆಕ್ಕಾಚಾರ ನಾಯಕರದ್ದು!. ಸೀಟು ಹಂಚಿಕೆ ಬಿಕ್ಕಟ್ಟು ಇತ್ಯರ್ಥಕ್ಕೆಇಂತದ್ದೊಂದು “ರೆಮಿಡಿ’ ಪತ್ತೆ ಮಾಡಿದ್ದು, ಮೂಲ ಕಾಂಗ್ರೆಸ್ಸಿಗರೋ, ಜನತಾದಳದಿಂದ ಬಂದ ವಲಸೆ ಕಾಂಗ್ರೆಸ್ಸಿಗರೋ ಎಂಬುದನ್ನು ಪತ್ತೆ ಮಾಡುವುದು ಕಷ್ಟ, ಕಷ್ಟ! ಆದರೆ, ಲೆಕ್ಕಾಚಾರ ತಲೆಕೆಳಗಾಗಿ ಬಿಜೆಪಿ-ಜೆಡಿಎಸ್ ಹೊಂದಾಣಿಕೆಯಾದರೆ? “ರೆಮಿಡಿ’ ಕಾಮಿಡಿಯಾಗುತ್ತದೆ ಎಂಬುದು ನಾಯಕರೊಬ್ಬರ ಉವಾಚ.