ಬೆಳಗಾವಿ: ಭೂ ಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿ ಸಚಿವ ಬೈರತಿ ಬಸವರಾಜ ರಾಜೀನಾಮೆ ಹಾಗೂ ವಿಷಯದ ಚರ್ಚೆಗೆ ಅವಕಾಶಕ್ಕೆ ಒತ್ತಾಯಿಸಿ ಕಾಂಗ್ರೆಸ್ ಸದಸ್ಯರು, ಸೋಮವಾರ ಪರಿಷತ್ತು ಬಾವಿಗಿಳಿದು ಧರಣಿ ಮುಂದುವರಿಸಿದರು.
ಇದರಿಂದ ಆಕ್ರೋಶಗೊಂಡ ಸಭಾಪತಿ ಬಸವರಾಜ ಹೊರಟ್ಟಿ ಅವರು, ಇದೇ ವರ್ತನೆ ಮುಂದುವರಿಸಿದರೆ ಸದನದಿಂದ ಹೊರ ಕಳುಹಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ಘಟನೆ ನಡೆಯಿತು.
ಸೋಮವಾರ ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆಯೇ ಕಾಂಗ್ರೆಸ್ ಸದಸ್ಯರು ಧರಣಿ ಮುಂದುವರಿಸಿದರು. ಸಭಾಪತಿಯವರ ಮನವಿ ಮಾಡಿದರೂ ಧರಣಿ ಮುಂದುವರೆಸಿದರು, ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಮಾತನಾಡಿ, ಸದನವನ್ನು 10 ನಿಮಿಷ ಮುಂದೂಡಿ ಚರ್ಚಿಸಿ ಎಂದು ಸಲಹೆ ನೀಡಿದರು. ಇದಕ್ಕೆ ಒಪ್ಪಿ ಸಭಾಪತಿಯವರು ಸದನ ಮುಂದೂಡಿ, ಸಭೆ ನಡೆಸಿದರು.
ಇದನ್ನೂ ಓದಿ:ಹೆಚ್ಚುತ್ತಿರುವ ಸೋಂಕಿನ ಪ್ರಕರಣ : ಎಲ್ಲ ಹೊರರೋಗಿಗಳಿಗೆ ಕೋವಿಡ್ ಪರೀಕ್ಷೆ ಕಡ್ಡಾಯ : BBMP
ಅನಂತರ ಸದನ ಆರಂಭವಾದ ನಂತರವೂ ಕಾಂಗ್ರೆಸ್ ಸದಸ್ಯರು ಧರಣಿ ಮುಂದುವರಿಸಿ, ಚರ್ಚೆಗೆ ಪಟ್ಟು ಹಿಡಿದರು, ನಿಯಮ 68ರಡಿ ಚರ್ಚೆಗೆ ಅವಕಾಶ ಕೇಳಿದ್ದೀರಿ, ನಿಯಮದಂತೆ ಪರಿಶೀಲಿಸಿ ಸದನಕ್ಕೆ ತಿಳಿಸುವೆ ಎಂದು ಸಭಾಪತಿಯವರು ಹೇಳಿದರು ಸದಸ್ಯರು ಕೇಳಲಿಲ್ಲ.
ಕಾಂಗ್ರೆಸ್ ಸದಸ್ಯರ ಧರಣಿ, ಘೋಷಣೆ ನಡುವೆಯೇ ಸಭಾಪತಿಯವರು ಪ್ರಶ್ನೋತ್ತರ ವೇಳೆ ಕೈಗೆತ್ತಿಕೊಂಡರು.