Advertisement

MLA HY Mati: ಜನಸೇವೆಗೆ ಹೆಸರಾದ ಮೇಟಿ ಸಾಹೇಬ್ರು

11:13 AM Nov 01, 2023 | Team Udayavani |

ಹಳ್ಳಿಯಿಂದ ದಿಲ್ಲಿಯವರೆಗೆ ಅಧಿಕಾರ ಸಿಕ್ಕರೂ ಒಂದಿಷ್ಟೂ ಅಹಂಕಾರ ಎಂಬುದಿಲ್ಲ.. ಅಧಿಕಾರ ಇರಲಿ-ಬಿಡಲಿ ಜನರೊಂದಿಗೆ ಸದಾ ಒಡನಾಟ.. ಅಭಿವೃದ್ಧಿ ವಿಷಯದಲ್ಲಿ ರಾಜಿ ಇಲ್ಲ.. ಸರ್ವಧರ್ಮದವರನ್ನು ಪ್ರೀತಿಸುವುದು ಇವರ ಗುಣ.. ಮಾನವೀಯತೆಯೇ ಇವರ ಭೂಷಣ..

Advertisement

ಇದು ಜಿಲ್ಲೆಯ ಹಿರಿಯ ಮುತ್ಸದ್ಧಿ, ಅಚ್ಚುಮೆಚ್ಚಿದ ರಾಜಕಾರಣಿ, ಮಾಜಿ ಸಚಿವ, ಬಾಗಲಕೋಟೆ  ಮತಕ್ಷೇತ್ರದ ಶಾಸಕ ಎಚ್‌.ವೈ.ಮೇಟಿ ಅವರ ಬದುಕಿನ ಚಿತ್ರಣ. ನಾನು ಪರಿಣಿತನಲ್ಲ ಎನ್ನುತ್ತಲೇ ಎಲ್ಲ ಕ್ಷೇತ್ರಗಳ ಆಳಗಲ ಅರಿತಿರುವ ಚಾಣಾಕ್ಷ ರಾಜಕಾರಣಿ ಇವರು. ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಶಿಕ್ಷಣ ಪಡೆಯುಂತಾಗಬೇಕು ಎನ್ನುವ ಮಹದಾಸೆ ಇಟ್ಟುಕೊಂಡು ತಮ್ಮ ಕ್ಷೇತ್ರದಲ್ಲಿ ಬಡಬಗ್ಗರ ಮಕ್ಕಳಿಗಾಗಿ ಸರ್ಕಾರಿ ಶಾಲೆ, ಕಾಲೇಜು ಮಂಜೂರು ಮಾಡಿಸಿದ ಕೀರ್ತಿ ಅವರದು.

ವಿಶಿಷ್ಟ ರಾಜಕಾರಣಿ: ಅರ್ಧ ಶತಮಾನದಿಂದ ರಾಜಕೀಯದಲ್ಲಿರುವ ಅವರು ನಾಡಿನ ಅನೇಕ ಹಿರಿಯ ರಾಜಕಾರಣಿಗಳೊಂದಿಗೆ ಒಡನಾಟ ಹೊಂದಿದವರು. ಸ್ವಲ್ಪವೂ ಹಮ್ಮು-ಬಿಮ್ಮು ಇಲ್ಲದ ವ್ಯಕ್ತಿತ್ವ. ಬಾಗಲಕೋಟೆ ನಗರ ಮಾತ್ರವಲ್ಲ ಕಮತಗಿ, ಅಮೀನಗಡ ಪಟ್ಟಣ ಸೇರಿದಂತೆ ಬಾಗಲಕೋಟೆ ತಾಲೂಕಿನ 84 ಹಳ್ಳಿಗಳು, ಹುನಗುಂದ ತಾಲೂಕಿನ 21 ಹಳ್ಳಿಗಳ ಅಭಿವೃದ್ಧಿಗೆ ಕಂಕಣಬದ್ಧರಾದವರು.

ಕ್ಷೇತ್ರದ ಅಭಿವೃದ್ಧಿಗೆ ಕಂಕಣಬದ್ಧ : ಮತಕ್ಷೇತ್ರಕ್ಕೆ ಈ ಅವಧಿಯಲ್ಲಿ ಏನನ್ನಾದರೂ ಕೊಡುಗೆ ನೀಡಬೇಕೆಂಬ ಮಹದಾಸೆ ಇಟ್ಟುಕೊಂಡಿದ್ದಾರೆ. ಬಾಗಲಕೋಟ ಜಿಲ್ಲೆಯ ಬಹು ವರ್ಷಗಳ ಬೇಡಿಕೆ 2014ರಲ್ಲಿ ಘೋಷಣೆಯಾಗಿರುವ ಸರ್ಕಾರಿ ಮೆಡಿಕಲ್‌ ಕಾಲೇಜು ಸ್ಥಾಪನೆಗೆ ಕಾರ್ಯಪ್ರವೃತ್ತರಾಗಿದ್ದಾರೆ. ಸಿಎಂ ಸಿದ್ದರಾಮಯ್ಯನವರ ಮೇಲೆ ಒತ್ತಡ ಹಾಕಿದ್ದು, ಮುಂದಿನ ಬಜೆಟ್‌ನಲ್ಲಿ ಸರ್ಕಾರ ಅನುದಾನ ನೀಡುವ ವಿಶ್ವಾಸ ವ್ಯಕ್ತವಾಗಿದೆ. ಪ್ರಥಮ ಹಂತದಲ್ಲಿ ಪುನರ್‌ ವಸತಿ ಕೇಂದ್ರಗಳ ಅಭಿವೃದ್ಧಿಗೆ ಸಂಕಲ್ಪ ಮಾಡಿದ್ದು, ಸರ್ಕಾರಕ್ಕೆ 210 ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಸಿದ್ದಾರೆ. ಇನ್ನು ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆ, ಪಂಚಾಯತ್‌ ರಾಜ್ಯ ಇಂಜಿನಿಯರಿಂಗ್‌ ವಿಭಾಗ, ಲೋಕೋಪಯೋಗಿ ಇಲಾಖೆ ಅಡಿ ತಕ್ಷಣಕ್ಕೆ 115 ಕೋಟಿ ರೂ. ಅನುದಾನ ಮೂಲಕ ಗ್ರಾಮೀಣ ರಸ್ತೆಗಳ ಸುಧಾರಣೆಗೆ ಸರ್ಕಾರಕ್ಕೆ ವಿಸ್ತೃತ ವರದಿ ಸಲ್ಲಿಸಿದ್ದಾರೆ.

Advertisement

ಅಧಿಕಾರ ಇದ್ದಾಗ ಅಭಿವೃದ್ಧಿ ಮಾಡ್ಬೇಕು : ಎಚ್‌.ವೈ.ಮೇಟಿ ಅವರು ಎಷ್ಟೇ ದೊಡ್ಡ ಸ್ಥಾನಕ್ಕೆ ಏರಿದ್ದರೂ ಎಂದಿಗೂ ಗರ್ವದಿಂದ ಇದ್ದವರಲ್ಲ. ಸಹಕಾರಿ ಕ್ಷೇತ್ರದಲ್ಲಿ ತಮ್ಮದೇ ಕೊಡುಗೆ ನೀಡಿದ್ದಾರೆ. ತಾವು ಶಾಸಕರಾಗಿದ್ದ ಅವಧಿಯಲ್ಲಿ ಬಾಗಲಕೋಟೆ ಕ್ಷೇತ್ರಕ್ಕೆ 2013 ರಿಂದ 2018 ರವರೆಗೆ ಮೂರು ಸಾವಿರ ಕೋಟಿ ರೂ. ಅನುದಾನ ಹರಿಸಿದ್ದರು. ಕೆಬಿಜೆಎನ್‌ಎಲ್‌ದಿಂದ ಕ್ಷೇತ್ರದ ಸುಮಾರು 34 ಹಳ್ಳಿಗಳಲ್ಲಿ 25 ಕೋಟಿ ರೂ. ಅನುದಾನದಲ್ಲಿ ಸಿಸಿ ರಸ್ತೆ, ಎಸ್‌ಸಿ, ಎಸ್‌ಟಿ ರೈತರ ಹೊಲಗಳಿಗೆ ಕೊಳವೆ ಬಾವಿ, ಸಮುದಾಯ ಭವನ ಹೀಗೆ ಹಲವು ಕಾರ್ಯ ಮಾಡಿಸಿದ್ದಾರೆ. ಲೋಕೋಪಯೋಗಿ ಇಲಾಖೆಯಿಂದ 10 ಕೋಟಿ ರೂ. ವೆಚ್ಚದಲ್ಲಿ ನೀರಲಕೇರಿ-ಶಿರೂರ ರಸ್ತೆ, 5 ಕೋಟಿ ರೂ. ವೆಚ್ಚದಲ್ಲಿ ಚವಡಿಹಾಳ- ಕಡಿವಾಲ ರಸ್ತೆ, 5ಕೋಟಿ ರೂ. ಮೊತ್ತದ ಕಡ್ಲಿಮಟ್ಟಿ-ಕಮತಗಿ ರಸ್ತೆ ಸೇರಿದಂತೆ ಜಿಲ್ಲಾ ಮುಖ್ಯ ರಸ್ತೆ ಹಾಗೂ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿ ಮಾಡಲು ಶ್ರಮಿಸಿದ್ದಾರೆ. ಅಲ್ಲದೆ ಬಾಂದಾರ ಬ್ಯಾರೇಜ್‌ ನಿರ್ಮಿಸಿದ್ದಾರೆ. ಇದು ಕ್ಷೇತ್ರದ ಇತಿಹಾಸದಲ್ಲಿಯೇ ಬಹು ದೊಡ್ಡ ಬದಲಾವಣೆಗೆ ಕಾರಣವಾಗಿದೆ.

ಸಂತ್ರಸ್ತರಿಗೆ ಮಾನವೀಯ ಸೇವೆ : ಮುಳುಗಡೆ ನಗರಿ ಜಿಲ್ಲಾ ಕೇಂದ್ರ ಬಾಗಲಕೋಟೆ ನೂರೆಂಟು ಸಮಸ್ಯೆಗಳಿಂದ ಬಳಲುತ್ತಿತ್ತು. ಸಂತ್ರಸ್ತರಿಗೆ ನವನಗರದಲ್ಲಿ ಮೂಲ ಸೌಕರ್ಯ ಒದಗಿಸುವುದು ಅಷ್ಟೆ ಅಲ್ಲ ಹಳೇ ಬಾಗಲಕೋಟೆ ನಗರಕ್ಕೆ ಹೊಸ ಸ್ಪರ್ಶ ನೀಡುವ ಅಗತ್ಯವಿತ್ತು. ಇದನ್ನು ಮನಗಂಡ ಶಾಸಕ ಎಚ್‌.ವೈ.ಮೇಟಿ ಅವರು 2013-14ನೇ ಸಾಲಿನಿಂದ 2017-18ನೇ ಸಾಲಿನವರೆಗೆ ನೂರಾರು ಕೋಟಿ ರೂ.ಗಳನ್ನು ನಗರಸಭೆಗೆ ಕೊಡಿಸಿದ್ದಾರೆ. ಎಸ್‌ಎಫ್‌ಸಿ ಯೋಜನೆಯಡಿ 43,659 ಲಕ್ಷ ರೂ., ಎಸ್‌ಎಫ್‌ಸಿ ಅಡಿ ಕುಡಿಯುವ ನೀರಿಗಾಗಿ 215 ಲಕ್ಷ ರೂ., 13ನೇ ಹಣಕಾಸು ಯೋಜನೆಯಡಿ ರಸ್ತೆ ಮತ್ತು ಸೇತುವೆ ಕಾಮಗಾರಿಗೆ 372 ಲಕ್ಷ ರೂ., 13ನೇ ಹಣಕಾಸು ಯೋಜನೆಯಡಿ(ಜನರಲ್‌ ಪರಫಾರ್‌ಮನ್ಸ್‌ ಗ್ರ್ಯಾಂಟ್) 155 ಲಕ್ಷ ರೂ. ಸೇರಿದಂತೆ ನಗರೋತ್ಥಾನ 3 ಅಡಿಯಲ್ಲಿ 35 ಕೋಟಿ ರೂ.ತಂದು ಸಮಗ್ರ ಅಭಿವೃದ್ಧಿ ಕೈಗೊಂಡಿದ್ದಾರೆ. ವಿದ್ಯಾಗಿರಿಯಲ್ಲಿ ಆದರ್ಶ ಜನ-ಮಾದರಿ ರಸ್ತೆ ನಿರ್ಮಿಸಿ ತಾವೊಬ್ಬ ವಿಭಿನ್ನ ಕಾಯಕಯೋಗಿ ಎಂಬುದನ್ನು ತೋರಿಸಿದ್ದಾರೆ.

ಮುಳುಗಡೆಯಾದ ಬಳಿಕ ಹೊಸ ನಗರ ನವನಗರ ನಿರ್ಮಾಣಗೊಂಡು ವರ್ಷಗಳೇ ಗತಿಸಿದ್ದರೂ ಮೂಲ ಸೌಕರ್ಯ ಗಗನಕುಸಮವಾಗಿತ್ತು. 134 ಕೋಟಿ ರೂ. ವಿಶೇಷ ಅನುದಾನ ತಂದು ನಗರಸಭೆಗೆ ಹಸ್ತಾಂತರ ಮಾಡಿದರು. ಮುಂದೆ ಐದು ವರ್ಷದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳು ನಡೆದು ನವನಗರ ಯೂನಿಟ್‌-1 ಚಿತ್ರಣವೇ ರಾಜ್ಯದಲ್ಲಿ ಮಿಂಚುವಂತೆ ಮಾಡಿತು. ಯೂನಿಟ್‌-2 ಹೈಟೆಕ್‌ ಆಗಿ ನಿರ್ಮಾಣ ಇವರಿಂದಲೇ ಎನ್ನುವುದು ಗಮನಾರ್ಹ ಸಂಗತಿ. ಮೂಲ ಸಂತ್ರಸ್ತರಿಗೆ, ಬಾಡಿಗೆದಾರರಿಗೆ ಬೇಡಿಕೆ ತಕ್ಕಂತ ದೊಡ್ಡ ನಿವೇಶನ ನೀಡಿದರು. ವಿಶೇಷವಾಗಿ ಮದುವೆಯಾಗದೆ ಇರುವ ಹೆಣ್ಣು ಮಕ್ಕಳಿಗೆ ನಿವೇಶನ ನೀಡುವ ನಿರ್ಧಾರ ಮಾಡಿ ಸಂತ್ರಸ್ತರಿಗೆ ಅಪಾರ ಕೊಡುಗೆ ನೀಡಿದರು. ಮೇಟಿಯವರು ತಮ್ಮ ಕಾರ್ಯಶೈಲಿಯಲ್ಲಿ ಜಾತಿ, ಮತ, ಪಂಥ ನೋಡಿದವರಲ್ಲ ಎಂಬುದು ಇವರ ನಡೆ-ನುಡಿಗಳಲ್ಲೊಂದು.

ಮೇಟಿ ಸಾಹೇಬರನ್ನು ನಾನು ಚಿಕ್ಕಂದಿನಿಂದಲೂ ನೋಡುತ್ತಿರುವೆ. ಮನೆಯ ಮಗನಂತೆ ನನ್ನನ್ನು ಪ್ರೀತಿಸಿ, ಬೆಳೆಸಿದ್ದಾರೆ. ನಾನಿಂದು ಸಮಾಜದಲ್ಲಿ ಒಂದಿಷ್ಟು ಗುರುತಿಸಿಕೊಳ್ಳಲು ಮೇಟಿ ಸಾಹೇಬರ, ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಹೇಬರೇ ಕಾರಣ. ಮೇಟಿ ಅವರು ಅಧಿಕಾರ ಇರಲಿ, ಬಿಡಲಿ ಸದಾ ಜನರೊಂದಿಗೆ ಇರಲು ಬಯಸುವ ಹಿರಿಯ ಮನಸ್ಸುಳ್ಳವರು. ಸಮಾಜದಲ್ಲಿ ಹುಳಿ ಹಿಂಡಿ- ಹಳಿ ತಪ್ಪಿಸುವ ವ್ಯವಸ್ಥೆಗೆ ಮನಸ್ಸಲ್ಲೇ ಬೇಸರ-ಆಕ್ರೋಶ ವ್ಯಕ್ತಪಡಿಸುವವರು. ಎಲ್ಲ ವರ್ಗದ ಜನರೂ ಸೌಹಾರ್ದತೆಯಿಂದ ಇರಬೇಕು, ಎಲ್ಲರಿಗೂ ಸರ್ಕಾರಿ ಸೌಲಭ್ಯಗಳು ದೊರೆಯಬೇಕು. ಪ್ರಭಾವ ಇದ್ದವರು ಮಾತ್ರ ಸೌಲಭ್ಯ ಪಡೆಯುವಂತಾಗಬಾರದು ಎಂಬುದು ಅವರ ನಿಲುವು.

ಹೊಳಬಸು . ಶೆಟ್ಟರ, ಕಾಂಗ್ರೆಸ್‌ ಮುಖಂಡರು, ಬಾಗಲಕೋಟೆಗುಳೇದಗುಡ್ಡ.

Advertisement

Udayavani is now on Telegram. Click here to join our channel and stay updated with the latest news.

Next