ಹುಬ್ಬಳ್ಳಿ: ರಾಷ್ಟ್ರಪತಿ ಪೌರ ಸನ್ಮಾನ ಕಾರ್ಯಕ್ರಮದಲ್ಲಿ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಇಲ್ಲವೆಂದು ಪಾಲಿಕೆ ಕಾಂಗ್ರೆಸ್ ಸದಸ್ಯರು ಕೆಲ ಕಾಲ ನೆಲದ ಮೇಲೆ ಕುಳಿತ ಘಟನೆ ನಡೆಯಿತು. ತಕ್ಷಣ ಎಚ್ಚೆತ್ತ ಅಧಿಕಾರಿಗಳು ಆಸನ ವ್ಯವಸ್ಥೆ ಮಾಡಿದರು.
ವೇದಿಕೆಯಲ್ಲಿ ಪಾಲಿಕೆ ವಿಪಕ್ಷ ನಾಯಕರಿಗೆ ಅವಕಾಶ ನೀಡಿಲ್ಲವೆಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದ್ದರು. ಸೋಮವಾರ ಬೆಳಿಗ್ಗೆ ಮನಸ್ಸು ಬದಲಿಸಿ ಕಾರ್ಯಮದಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದರು.
ಪಾಲಿಕೆ ಕಾಂಗ್ರೆಸ್ ಸದಸ್ಯರು ಕಾರ್ಯಕ್ರಮಕ್ಕೆ ಆಗಮಿಸಿದಾಗ ಪಾಲಿಕೆ ಸದಸ್ಯರಿಗೆಂದು ನಿಗದಿ ಪಡಿಸಿದ್ದ ಆಸನಗಳಲ್ಲಿ ಪಾಲಿಕೆ ಸದಸ್ಯರಲ್ಲದವರು ಆಸೀನರಾಗಿದ್ದರು.
ಇದನ್ನೂ ಓದಿ:ಡೆಮೋಕ್ರಟಿಕ್ ಆಜಾದ್ ಪಾರ್ಟಿ: ನೂತನ ಪಕ್ಷದ ಹೆಸರು ಘೋಷಿಸಿದ ಗುಲಾಂ ನಬಿ ಆಜಾದ್
ಪಾಲಿಕೆ ಸದಸ್ಯರಿಗೆ ಆಸನ ಬಿಟ್ಟುಕೊಡುವಂತೆ ಹೇಳಿದರು ಯಾರು ಆಸನ ಬಿಟ್ಟು ಕೊಡದಾದಾಗ ಪಾಲಿಕೆ ಕಾಂಗ್ರೆಸ್ ಸದಸ್ಯರು ನೆಲದ ಮೇಲೆ ಕುಳಿತರು. ರಾಷ್ಟ್ರಪತಿಯವರು ವೇದಿಕೆಗೆ ಆಗಮಿಸುವ ಕೆಲವೇ ನಿಮಿಷ ಮೊದಲು ಈ ಘಟನೆ ನಡೆಯಿತು.
ಗೊಂದಲದ ಸ್ಥಿತಿ ನಿರ್ಮಾಣ ಗೊಂಡಿತಾದರು, ತಕ್ಷಣಕ್ಕೆ ಅಧಿಕಾರಿಗಳು ಆಸನ ವ್ಯವಸ್ಥೆ ಕಲ್ಪಿಸಿ ಗೊಂದಲ ನಿವಾರಿಸಿದರು.