Advertisement

ಗುಜರಾತ್‌ ಸೋಲಲ್ಲೂ ಅಸಾಧಾರಣ ನಿರ್ವಹಣೆ: ಕೈ ಭವಿಷ್ಯ ಉಜ್ವಲ

03:14 PM Dec 18, 2017 | udayavani editorial |

ಹೊಸದಿಲ್ಲಿ : ಗುಜರಾತ್‌ ಚುನಾವಣೆಯಲ್ಲಿ  ಕಾಂಗ್ರೆಸ್‌ ಪಕ್ಷ ಸೋತಿರಬಹುದು; ಆದರೆ ಅದು  ತೋರಿರುವ ಅಸಾಧಾರಣ ನಿರ್ವಹಣೆಯನ್ನು ಗಮನಿಸಿದರೆ ಮುಂಬರುವ ಕರ್ನಾಟಕ, ಛತ್ತೀಸ್‌ಗಢ ಮತ್ತು ರಾಜಸ್ಥಾನ ಚುನಾವಣೆಗಳಲ್ಲಿ ಮಾತ್ರವಲ್ಲದೆ 2019ರ ಮಹಾ ಚುನಾವಣೆಯಲ್ಲಿ ಇನ್ನೂ ಉತ್ತಮ ನಿರ್ವಹಣೆಯನ್ನು ದಾಖಲಿಸುವ ಸಾಧ್ಯತೆಗಳು ಈಗ ನಿಚ್ಚಳವಾಗಿದೆ. ಅಂತೆಯೇ ದೇಶದ ಅತ್ಯಂತ ಹಳೆಯ ರಾಜಕೀಯ ಪಕ್ಷವೆನಿಸಿರುವ ಕಾಂಗ್ರೆಸ್‌ ಮರಳಿ ತನ್ನ ಗತ ವೈಭವವನ್ನು ಪಡೆಯುವ ಸಾಧ್ಯತೆಗಳನ್ನೂ ತಳ್ಳಿ ಹಾಕುವಂತಿಲ್ಲ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. 

Advertisement

ಈ ಬಾರಿಯ ಗುಜರಾತ್‌ ಚುನಾವಣೆಯಲ್ಲಿ  ಕಾಂಗ್ರೆಸ್‌ ಮತಗಳು ಶೇ.7ರಷ್ಟು ಹೆಚ್ಚಿವೆ. 2012ರಲ್ಲಿ ಶೇ.38 ಇದ್ದ ಮತ ಪ್ರಾಪ್ತಿ ಪ್ರಮಾಣ ಈ ಬಾರಿ ಶೇ.45ಕ್ಕೇರಿದೆ. ಗುಜರಾತ್‌ನಲ್ಲಿ ಆಂಶಿಕವಾಗಿ ಜನರು ಮತ್ತೆ ಕಾಂಗ್ರೆಸ್‌ನತ್ತ ವಾಲಿರುವುದು ಸ್ಪಷ್ಟವಿದೆ.

ಗುಜರಾತ್‌ ಚುನಾವಣೆಯಲ್ಲಿ ರಾಹುಲ್‌ ಗಾಂಧಿ ರೈತರ ಸಮಸ್ಯೆ, ನಿರುದ್ಯೋಗ ಮತ್ತು ಜಿಎಸ್‌ಟಿ ಅನುಷ್ಠಾನದಲ್ಲಿನ ಲೋಪದೋಷಗಳನ್ನು ಜನರ ಗಮನಕ್ಕೆ ತರುವಲ್ಲಿ ಸಫ‌ಲರಾಗುವ ಮೂಲಕ ಮತದಾರರ ಒಲವನ್ನು ಗಮನಾರ್ಹವಾಗಿ ಸಾಧಿಸಿದ್ದಾರೆ.

ಕಾಂಗ್ರೆಸ್‌ ವೋಟ್‌ ಶೇರ್‌ ಹೆಚ್ಚುವಲ್ಲಿ ಹಾರ್ದಿಕ್‌ ಪಟೇಲ್‌, ಅಲ್‌ಪೇಶ್‌ ಠಾಕೂಕ್‌ ಮತ್ತು ಜಿಗ್ನೇಶ್‌ ಮೇವಾನಿ ಅವರ ಕಾಣಿಕೆಯೂ ಇದೆ. 

Advertisement

Udayavani is now on Telegram. Click here to join our channel and stay updated with the latest news.

Next