Advertisement

ಕೇಂದ್ರದ 20 ಲಕ್ಷ ಕೋಟಿ ಪ್ಯಾಕೇಜ್ ಎಲ್ಲಿ ಹೋಯ್ತು : ಬಿಜೆಪಿ ವಿರುದ್ಧ ಕೈ ನಾಯಕರ ಆಕ್ರೋಶ

02:52 PM May 28, 2021 | Team Udayavani |

ಬೆಂಗಳೂರು :  ಲಾಕ್ಡೌನ್ ನಿಂದ ಜನ ಉದ್ಯೋಗ ಕಳೆದುಕೊಂಡಿದ್ದಾರೆ, ಕೋಟ್ಯಂತರ ಮಂದಿ ಆದಾಯವನ್ನ ಕಳೆದುಕೊಂಡಿದ್ದಾರೆ, ಲಾಕ್ಡೌನ್ ಮಾಡಿ ಐದು ವಾರ ಕಳೆದಿದೆ, ಆದರೆ ಇವರೆಲ್ಲ ಸಂಕಷ್ಟಕ್ಕೊಳಗಾಗಿದ್ದಾರೆ, ಸರ್ಕಾರ ಕಣ್ಣೊರೆಸುವ ಪ್ಯಾಕೇಜ್ ಘೋಷಿಸಿದೆ, ಕಳೆದ ವರ್ಷವೂ ಪ್ಯಾಕೇಜ್ ಘೋಷಿಸಿತ್ತು, ಆಗ ಘೋಷಿಸಿದ ಪ್ಯಾಕೇಜ್ ಸರಿಯಾಗಿ ತಲುಪಿಲ್ಲ ಎಂದು ಕೆಪಿಸಿಸಿಯಲ್ಲಿ ನಡೆದ ಕೈ ನಾಯಕರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಕೃಷ್ಣಭೈರೇಗೌಡ ಹೇಳಿಕೆ ನೀಡಿದ್ದಾರೆ.

Advertisement

ತೋಟಗಾರಿಕೆಗೆ 127 ಕೋಟಿ ಘೋಷಿಸಿತ್ತು. ಪಾವತಿಯಾಗಿದ್ದು ಕೇವಲ 50 ಕೋಟಿ ಮಾತ್ರ. ಹೂ ಬೆಳೆಗಾರರಿಗೆ 31 ಕೋಟಿ ಘೋಷಣೆ ಮಾಡಲಾಗಿತ್ತು. ಆದ್ರೆ ಪಾವತಿಯಾಗಿದ್ದು ಕೇವಲ 15 ಕೋಟಿ ಮಾತ್ರ. 2.3 ಲಕ್ಷ ಸವಿತಾ ಸಮಾಜದವರಿಗೆ 5 ಸಾವಿರ ಘೋಷಣೆ ಮಾಡಲಾಗಿತ್ತು. ಆದರೆ ಕೇವಲ 55466 ಜನರಿಗೆ ಮಾತ್ರ ತಲುಪಿತ್ತು. 7.45 ಲಕ್ಷ ಚಾಲಕರಿಗೆ 5 ಸಾವಿರ ಘೋಷಣೆ ಕೊಟ್ಟಿದ್ದು 2 ಲಕ್ಷ 14 ಸಾವಿರ ಜನರಿಗೆ ಮಾತ್ರ ಎಂದು ಹೇಳಿದ್ದಾರೆ.

ಈ ವರ್ಷವೂ 1250 ಕೋಟಿ ಪ್ಯಾಕೇಜ್ ಘೋಷಿಸಿದೆ. ರಾಜ್ಯದಲ್ಲಿ ಅರ್ಧದಷ್ಟು ರೈತರಿದ್ದಾರೆ 3.5 ಲಕ್ಷ ರೈತರು ರಾಜ್ಯದಲ್ಲಿದ್ದಾರೆ. ಆದರೆ 89 ಸಾವಿರ ರೈತರಿಗೆ ಮಾತ್ರ ನೆರವು ಘೋಷಿಸಿದ್ದಾರೆ. ಉಳಿದ ರೈತರಿಗೆ ನಷ್ಟವಾಗಿಲ್ಲವೇ? 15 ರಿಂದ 20 ಲಕ್ಷ ಆಟೋ, ಕ್ಯಾಬ್ ಚಾಲಕರಿದ್ದಾರೆ. ಇಷ್ಟೂ ಜನ ತಮ್ಮ ಆದಾಯ ಕಳೆದುಕೊಂಡಿದ್ದಾರೆ. ಆದರೆ 2.1 ಲಕ್ಷ ರೈತರಿಗೆ ಮಾತ್ರ ಸರ್ಕಾರ ನೆರವು ಘೋಷಿಸಿದೆ. 50 ಲಕ್ಷ ಅಸಂಘಟಿತ ಕಾರ್ಮಿಕರಿದ್ದಾರೆ.

ಕುಂಬಾರ,ಅಕ್ಕಸಾಲಿ,ಗಾಣಿಗ ಸೇರಿ ಕುಲಕುಸುಬಿನವರಿದ್ದಾರೆ. ಇವರಲ್ಲಿ 3 ಲಕ್ಷ ಜನರಿಗೆ ಮಾತ್ರ ಪರಿಹಾರ ನೀಡಲು ಹೊರಟಿದೆ. 10 ಲಕ್ಷ ಕುಟುಂಬ ಬೀದಿಬದಿ ವ್ಯಾಪಾರ ನಂಬಿದ್ದಾರೆ. ಸರ್ಕಾರ 2.2 ಲಕ್ಷ ಮಂದಿಗೆ ಮಾತ್ರ ಪರಿಹಾರ ನೀಡಲಾಗಿದೆ. ತಲಾ 2 ಸಾವಿರ ಪರಿಹಾರ ಘೋಷಿಸಿದೆ. ಉಳಿದ ಬೀದಿಬದಿ ವ್ಯಾಪಾರಿಗಳು ಎಲ್ಲಿಗೆ ಹೋಗಬೇಕು ಎಂದು ಸರ್ಕಾರಕ್ಕೆ ಮಾಜಿ ಸಚಿವ ಕೃಷ್ಣಬೈರೇಗೌಡ ಪ್ರಶ್ನೆ ಮಾಡಿದ್ದಾರೆ.

ತಮಿಳುನಾಡು 2.07 ಕೋಟಿ ಬಡವರಿಗೆ 8368 ಕೋಟಿ ಪರಿಹಾರ ನೀಡಲಾಗಿದೆ. 2.7 ಕೋಟಿ ಪಡಿತರ ದಾರರಿಗೆ 4 ಸಾವಿರ ಕೊಟ್ಟಿದೆ ಕೇರಳ 20 ಸಾವಿರ ಪ್ಯಾಕೇಜ್ ಘೋಷಿಸಿದೆ. ಕರ್ನಾಟಕ ಕೇರಳಕ್ಕಿಂತ ಎರಡಪಟ್ಟು ಆರ್ಥಿಕ ಸಾಮರ್ಥ್ಯ ಹೊಂದಿದೆ. ಈಗಾಗಲೇ ಎರಡು ಪ್ಯಾಕೇಜ್ ಕೇರಳ ಕೊಟ್ಟಿದೆ. ಆಂಧ್ರ ಸರ್ಕಾರ ಚಾಲಕರಿಗೆ 10,೦೦೦ ಕೊಟ್ಟಿದೆ. ವಿವಿಧ ಕಾರ್ಮಿಕರಿಗೆ 5000 ಘೋಷಿಸಿದೆ. ಸ್ವಯಂ ಉದ್ಯೋಗಿ ಮಹಿಳೆಯರಿಗೆ 15 ಸಾವಿರ ನೀಡಿದೆ. ಆಮ್ಲಜನಕದಿಂದ ಸಾವನ್ನಪ್ಪಿದವರಿಗೆ 10 ಲಕ್ಷ ನೀಡಿದೆ. ಆದರೆ ನಮ್ಮ ಸರ್ಕಾರ 2 ಲಕ್ಷ ಹಣ ನೀಡಿದೆ. ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ ಸತ್ತವರಿಗೆ ಇವರಿಗೆ ಏನಾದ್ರೂ ಮರ್ಯಾದೆ ಇದ್ಯಾ? ಎಂದು ಸರ್ಕಾರದ ವಿರುದ್ಧ ಕೃಷ್ಣಬೈರೇಗೌಡ ವಾಗ್ದಾಳಿ ನಡೆಸಿದ್ದಾರೆ

Advertisement

ಇದೇ ವೇಳೆ ಮಾತನಾಡಿದ ಶಾಸಕ ರಿಜ್ವಾನ್ ಅರ್ಷದ್, ಕೇಂದ್ರ 20 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿದ್ದರು. ಆದರೆ ಆ ಪ್ಯಾಕೇಜ್ ಎಲ್ಲಿ ಹೋಯ್ತು‌ ಗೊತ್ತಿಲ್ಲ. ಯಾವ ದಾಖಲೆಗಳೂ ಇದರ ಬಗ್ಗೆ ಸಿಕ್ಕಿಲ್ಲ. ಪೀಣ್ಯದಲ್ಲೇ 30 ಸಾವಿರ ಕೈಗಾರಿಕೆ ಕ್ಲೋಸ್ ಆಗಿವೆ. ನಿಮ್ಮ ಪರಿಹಾರ ಎಲ್ಲಿ ಸಿಗಲಿಲ್ವೇ. ರಾತ್ರೋರಾತ್ರಿ 20 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿದ್ರೆ ಅದು ಎಲ್ಲಿ ಹೋಯ್ತು ಅದರ ಶ್ವೇತ ಪತ್ರ ಹೊರಡಿಸಿ ಎಂದು ಕೇಂದ್ರ ಸರ್ಕಾರಕ್ಕೆ ರಿಜ್ವಾನ್ ಅರ್ಷದ್ ಒತ್ತಾಯ ಮಾಡಿದ್ದಾರೆ.

ಸಭೆಯಲ್ಲಿ ಮಾಜಿ ಸಚಿವ ಪ್ರಿಯಾಂಕ‌ ಖರ್ಗೆ ಹೇಳಿಕೆ ನೀಡಿದ್ದು, ಆತ್ಮನಿರ್ಭರ್ ಭಾರತ್ ಪ್ಯಾಕೇಜ್ ಯಾರಿಗೂ ತಲುಪಿಲ್ಲ. ಹೀಗಾಗಿ ಕೇಂದ್ರದಲ್ಲಿ ಸಭೆಯನ್ನ ಕರೆದಿದ್ದರು. ನೀವು ನೆಗೆಟೀವ್ ಮಾತನಾಡಬೇಡಿ ಎಂದು ಸೂಚಿಸಿದ್ದಾರೆ. ಆಕ್ಸಿಜನ್ ಕೊರತೆ, ವೆಂಟಿಲೇಟರ್ ಕೊರತೆ ವ್ಯಾಕ್ಸಿನ್ ಕೊರತೆ, ಪಿಎಂ ಕೇರ್ ಹಣದ ಬಗ್ಗೆ ಮಾತನಾಡಬಾರದು. ಹೀಗಂತ ಅಧಿಕಾರಿಗಳಿಗೆ ಸೂಚನೆ ಹೊರಡಿಸಿದ್ದಾರೆ. ಬಿಜೆಪಿ ಅಧಿಕಾರದಲ್ಲಿರುವ ಕಡೆ ಮಾತನಾಡಬಾರದಂತೆ. ಉಳಿದ ಕಡೆ ಹೇಳಿಕೆ ಕೊಡಲು ಸೂಚನೆ ನೀಡಿದ್ದಾರೆ. ಗಂಗಾನದಿಯಲ್ಲಿ ಸಾವಿರಾರು ಶವ ಬಂದ್ರೂ ಕೇಳುವಂತಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಪ್ರಿಯಾಂಕ ಖರ್ಗೆ ಆಕ್ರೋಶ ಹೊರ ಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next