Advertisement

ಮಧ್ಯಂತರ ಚುನಾವಣೆ, “ಕೈ” ಪಾಳಯಕ್ಕೆ ಬಿಸಿ ಮುಟ್ಟಿಸಿದ ದೇವೇಗೌಡರ ಚಾಟಿ!

12:48 PM Jun 22, 2019 | Team Udayavani |

ಬೆಂಗಳೂರು: ಮೈತ್ರಿ ಸರ್ಕಾರದ ಭವಿಷ್ಯ ಕಾಂಗ್ರೆಸ್ ನಾಯಕರ ಕೈಯಲ್ಲಿದೆ. ಕಳೆದ ಒಂದು ವರ್ಷದಿಂದ ಎಲ್ಲವನ್ನು ಸಹಿಸಿಕೊಂಡಿದ್ದೇನೆ. ಅಲ್ಲದೇ ಮಧ್ಯಂತರ ಚುನಾವಣೆ ನಡೆಯಲೂಬಹುದು ಎಂಬ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರ ಹೇಳಿಕೆ ಇದೀಗ ಕಾಂಗ್ರೆಸ್ ಪಾಳಯಕ್ಕೆ ಬಿಸಿ ಮುಟ್ಟಿಸಿದೆ.

Advertisement

ದೇವೇಗೌಡರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಕುಮಾರಸ್ವಾಮಿ, ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ದೇವೇಗೌಡರು ಯಾವ ಅರ್ಥದಲ್ಲಿ ಹೇಳಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕು. ಬೇರೆ ಯಾವ ಉದ್ದೇಶದಿಂದಲೂ ಹೇಳಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.

ದೇವೇಗೌಡರು ಹಿರಿಯ ನಾಯಕರು ಮಾತನಾಡಲು ಹೋಗಲ್ಲ: ದಿನೇಶ್ ಗುಂಡೂರಾವ್

ಜೆಡಿಎಸ್ ವರಿಷ್ಠ ದೇವೇಗೌಡರು ಹಿರಿಯ ನಾಯಕರು. ನಾನು ಅವರ ಹೇಳಿಕೆ ಬಗ್ಗೆ ಮಾತನಾಡಲು ಹೋಗಲ್ಲ. ಸರ್ಕಾರಕ್ಕೆ ಕಾಂಗ್ರೆಸ್ ಶಕ್ತಿ ತುಂಬಲು ಕೆಲಸ ಮಾಡುತ್ತಿದೆ. ಕುಮಾರಸ್ವಾಮಿ ಸರ್ಕಾರ ಸ್ಥಿರವಾಗಿರಲು ನಾವು ಸಂಪೂರ್ಣ ಸಹಕಾರ ನೀಡುತ್ತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದ್ದಾರೆ.

ನಮ್ಮ ಸರ್ಕಾರ ಸುಭದ್ರವಾಗಿದೆ: ಡಿಕೆ ಶಿವಕುಮಾರ್

Advertisement

ನಮ್ಮ ಸರ್ಕಾರ ಸುಭದ್ರವಾಗಿದೆ, ಕುಮಾರಸ್ವಾಮಿಯವರಿಗೆ ನಾವೇ ಹೋಗಿ ಐದು ವರ್ಷ ಸಿಎಂ ಆಗಿ ಇರಬೇಕು ಅಂತ ಹೇಳಿದ್ದೇವೆ. ಆದರೆ ಬಿಜೆಪಿಯವರು ನಮ್ಮ ಸರ್ಕಾರ ಬೀಳಿಸಲು ಪ್ರಯತ್ನಿಸುತ್ತಿದ್ದಾರೆ. ಈಗ ಯಾರ ಸಹವಾಸಕ್ಕೂ ಹೋಗಲ್ಲ ಎಂದು ಹೇಳುತ್ತಿದ್ದಾರೆ ಎಂದು ಸಚಿವ ಡಿಕೆ ಶಿವಕುಮಾರ್ ಹೇಳಿದರು.

ಪಕ್ಷದ ವಿಚಾರದ ಬಗ್ಗೆ ದಿನೇಶ್ ಗುಂಡೂರಾವ್ , ಸಿಎಲ್ ಪಿ ನಾಯಕರು ಪ್ರತಿಕ್ರಿಯೆ ನೀಡುತ್ತಾರೆ. ಪಕ್ಷದ ವಿಚಾರದಲ್ಲಿ ಯಾರೂ ಏನೂ ಮಾತನಾಡಬಾರದು ಎಂದು ನನಗೆ ಪಕ್ಷದ ಆದೇಶವಿದೆ. ದೇವೇಗೌಡರಿಗೆ ಯಾವುದೇ ಅಸಮಾಧಾನವಿಲ್ಲ. ಸರ್ಕಾರ ಭದ್ರವಾಗಿದೆ, ನಾವು ತಲೆಕೆಡಿಸಿಕೊಳ್ಳಲ್ಲ, ನೀವೂ ಕೆಡಿಸಿಕೊಳ್ಳಬೇಡಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next