Advertisement

ಪೊಳ್ಳು ಭರವಸೆಗಳ ಸರ್ಕಾರ; ರಾಹುಲ್‌ ಗಾಂಧಿ

06:00 AM Aug 13, 2017 | Team Udayavani |

ರಾಯಚೂರು: ಹಸಿ ಸುಳ್ಳು ಮತ್ತು ಪೊಳ್ಳು ಭರವಸೆಗಳ ಮೂಲಕ ಕೇಂದ್ರದಲ್ಲಿರುವ ನರೇಂದ್ರ ಮೋದಿ ಅವರ ಸರ್ಕಾರ ದೇಶದ ಜನರನ್ನು ವಂಚಿಸುತ್ತಿದೆ ಎಂದು ಕಾಂಗ್ರೆಸ್‌ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್‌ ಗಾಂಧಿ ದೂರಿದ್ದಾರೆ.

Advertisement

ಇಲ್ಲಿನ ಕೃಷಿ ವಿವಿ ಆವರಣದಲ್ಲಿ ಜಿಲ್ಲಾ ಪ್ರದೇಶ ಕಾಂಗ್ರೆಸ್‌ ಸಮಿತಿ ಶನಿವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ ಮತ್ತು ಕಾರ್ಯಕರ್ತರ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ನಾವು ದೊಡ್ಡ ಭರವಸೆ ನೀಡುವುದಿಲ್ಲ. ಬದಲಾಗಿ ಕೆಲಸ ಮಾಡಿ ತೋರಿಸುತ್ತೇವೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆ ವೇಳೆ ನೀಡಿದ್ದ ಭರವಸೆಗಳಲ್ಲಿ ಒಂದನ್ನೂ ಈಡೇರಿಸಿಲ್ಲ. ಅವರಿಗೆ ದೇಶದ
ಬಡವರು, ಶ್ರಮಿಕರು ಮತ್ತು ರೈತರಿಗಿಂತ ಶ್ರೀಮಂತರ ಹಿತವೇ ಮುಖ್ಯ ಎಂದು ನೇರವಾಗಿ ವಾಗ್ಧಾಳಿ ನಡೆಸಿದರು ನಾವು ರೈತಪರ ಎಂದು ಅಧಿಕಾರಕ್ಕೆ ಬಂದ ಮೋದಿ ಸರ್ಕಾರ ರೈತರಿಗೆ ಮಾಡಿದ್ದೇನು?

ದೇಶದಲ್ಲಿ ಸಹಸ್ರಾರು ರೈತರು ಆತ್ಮಹತ್ಯೆ ಮಾಡಿಕೊಂಡರೂ ನೆರವಿಗೆ ಬಂದಿಲ್ಲ. ರೈತರ ಸಾಲ ಮನ್ನಾ ಮಾಡುವುದು ಆರ್ಥಿಕ ಹೊರೆ ಎಂದು ವಿತ್ತ ಸಚಿವ ಅರುಣ್‌  ಜೇಟ್ಲಿ ಸಮರ್ಥನೆ ನೀಡುತ್ತಿದ್ದಾರೆ. ಆದರೆ, ಉದ್ಯಮಿಗಳ ಸಾಲ ಮನ್ನಾ ಮಾಡುವುದು ದೇಶದ ಆರ್ಥಿಕತೆಗೆ ಪೂರಕವೇ ಎಂದು ರಾಹುಲ್‌ ಗಾಂಧಿ ಪ್ರಶ್ನಿಸಿದರು.

ಎರಡೇ ದಿನಗಳಲ್ಲಿ ಸಾಲ ಮನ್ನಾ: ಈ ಮಧ್ಯೆ, ರಾಜ್ಯದಲ್ಲಿ ಆಳ್ವಿಕೆ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು
ಪಂಜಾಬ್‌ನಲ್ಲಿನ ಅಮರೀಂದರ್‌ ಸಿಂಗ್‌ ನೇತೃತ್ವದ ಸರ್ಕಾರಗಳನ್ನು ಶ್ಲಾಘಿಸಿದ ಅವರು, ನಾವು ಹೇಳಿದ ಹಾಗೆಯೇ ರೈತರ ಸಾಲ ಮನ್ನಾ ಮಾಡಿದ್ದೇವೆ ಎಂದರು.

Advertisement

ರಾಜ್ಯದಲ್ಲಿ ರೈತರ ಸಾಲ ಮನ್ನಾ ಮಾಡಲು ಆಗುತ್ತದೆಯೇ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಕೇಳಿದ್ದೆ. ಅವರು ಎರಡೇ ದಿನದಲ್ಲಿ ರೈತರ 8000 ಕೋಟಿಗೂ ಹೆಚ್ಚು ಸಾಲ ಮನ್ನಾ ಮಾಡಿ ಕಾಂಗ್ರೆಸ್‌ ಸರ್ಕಾರ ರೈತಪರ ಎಂಬುದನ್ನು ಸಾಬೀತು ಮಾಡಿ ತೋರಿಸಿದ್ದಾರೆ ಎಂದು ರಾಹುಲ್‌ ಗಾಂಧಿ ಹೇಳಿದರು.

ಉದ್ಯೋಗ ಎಲ್ಲಿದೆ? ಆಧಿಕಾರಕ್ಕೆ ಬಂದರೆ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ತಿಳಿಸಿದ್ದ ಮೋದಿ, ಈವರೆಗೆ ಕೇವಲ ಒಂದು ಲಕ್ಷ ಉದ್ಯೋಗ ಸೃಷ್ಟಿಸಿದ್ದಾರೆ. ಮೇಕ್‌ ಇನ್‌ ಇಂಡಿಯಾ ಹೆಸರಲ್ಲಿ ಯಾವೊಂದು ಕಾರ್ಖಾನೆ ಸ್ಥಾಪಿಸಿಲ್ಲ. ನೋಟು ಅಮಾನ್ಯದಂಥ ಮಹತ್ವದ ವಿಚಾರವನ್ನು ಅಪಹಾಸ್ಯದ ರೀತಿಯಲ್ಲಿ ಹೇಳಿ ಬಡಜನರ ಬದುಕಿನ ಮೇಲೆ ಪೆಟ್ಟು ನೀಡಿದರು.

ಕಾಂಗ್ರೆಸ್‌ ಸರ್ಕಾರ ಕೊನೆ ಸಾಲಿನಲ್ಲಿರುವವರಿಗೆ ಮೊದಲ ಆದ್ಯತೆ ನೀಡಿದರೆ, ಬಿಜೆಪಿ ಸರ್ಕಾರ ಮೊದಲನೇ ಸಾಲಿನವರನ್ನೇ ಸತ್ಕರಿಸುತ್ತದೆ ಎಂದು ಟೀಕಿಸಿದರು.

371(ಜೆ) ಜಾರಿಗೆ ಆಡ್ವಾಣಿ ಅಡ್ಡಿ: ಹೈದರಾಬಾದ್‌ ಕರ್ನಾಟಕ ಭಾಗಕ್ಕೆ ಸಂವಿಧಾನದ 371(ಜೆ) ಕಲಂ ಜಾರಿಗೊಳಿಸುವ ವಿಚಾರ ದಶಕಗಳ ಹೋರಾಟವಾಗಿತ್ತು. ಈ ಕುರಿತು ರಾಜ್ಯದ ಕಾಂಗ್ರೆಸ್‌ ನಾಯಕರು ಸಾಕಷ್ಟು ಬಾರಿ ಒತ್ತಾಯಿಸಿದ್ದರು. ಆದರೆ, ಎನ್‌ಡಿಎ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದ ಎಲ್‌.ಕೆ. ಆಡ್ವಾಣಿ ಕಾಯ್ದೆ ಜಾರಿ ಅಸಾಧ್ಯ ಎಂದು ತಿರಸ್ಕರಿಸಿದ್ದರು. 2004ರಲ್ಲಿ ಅಧಿಕಾರಕ್ಕೆ ಬಂದ ನಮ್ಮ ಸರ್ಕಾರ ವಿಶೇಷ ಸ್ಥಾನಮಾನ ನೀಡುವ ಮೂಲಕ ಹಿಂದುಳಿದವರ ಪರ ನಾವಿದ್ದೇವೆ ಎಂಬುದನ್ನು ತೋರಿಸಿಕೊಟ್ಟಿದ್ದೇವೆ ಎಂದರು.

ರಾಜ್ಯದಲ್ಲಿ ಅಭಿವೃದಿಟಛಿಗೆ ಬಿಜೆಪಿ ಸರ್ಕಾರ ಐದು ವರ್ಷದಲ್ಲಿ ಖರ್ಚು ಮಾಡದಷ್ಟು ಹಣವನ್ನು ಕಾಂಗ್ರೆಸ್‌ ಸರ್ಕಾರ ಮೂರು ತಿಂಗಳಲ್ಲೇ ಮಾಡಿ ತೋರಿಸಿತ್ತು. ಮುಂದಿನ ಅವ ಧಿಗೂ ನಮ್ಮದೇ ಸರ್ಕಾರ ಅ ಧಿಕಾರಕ್ಕೆ ಬರುವ ವಿಶ್ವಾಸವಿದ್ದು,
ಈಗಿನದಕ್ಕಿಂತ ದುಪ್ಪಟ್ಟು ಪ್ರಗತಿ ಸಾಧಿ ಸುವ ಭರವಸೆ ನೀಡುತ್ತೇನೆ ಎಂದರು.

ಸಿಎಂ ಸಿದ್ದರಾಮಯ್ಯ, ಲೋಕಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಇಂಧನ ಸಚಿವ ಡಿ.ಕೆ. ಶಿವಕುಮಾರ್‌, ಕೆ.ಎಚ್‌. ಮುನಿಯಪ್ಪ ಕೆಪಿಸಿಸಿ ಅಧ್ಯಕ್ಷ ಡಾ| ಜಿ. ಪರಮೇಶ್ವ , ಎಐಸಿಸಿ ಪ್ರಧಾನ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಟಾಳ್ಕರ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್‌.ಆರ್‌.ಪಾಟೀಲ, ಶಿಕ್ಷಣ ಸಚಿವ ತನ್ವೀರ್‌ ಸೇs…, ಸಂಸದ ಬಿ.ವಿ. ನಾಯಕ, ಎಂಎಲ್‌ಸಿ ಬೋಸರಾಜ್‌ ಸೇರಿ ಇತರರಿದ್ದರು.

ನಾವು ದೊಡ್ಡ ದೊಡ್ಡ ಭರವಸೆಗಳನ್ನು ಕೊಡುವುದಿಲ್ಲ. ಆದರೆ, ಉತ್ತಮವಾಗಿ ಕೆಲಸ ಮಾಡಿ ತೋರಿಸಿ ಜನರಿಗೆ
ಹೇಳುತ್ತೇವೆ. ಮೋದಿ ಸರ್ಕಾರ ಬಂದಾಗ ರೈತರಿಗೆ ಪೂರ್ಣವಾದ ಸಹಕಾರ ಕೊಡುವ ಬಗ್ಗೆ ಮಾತನಾಡಿದ್ದರು. ದುರದೃಷ್ಟವಶಾತ್‌ ಇಂದು ದೇಶಾದ್ಯಂತ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.

– ರಾಹುಲ್‌ಗಾಂಧಿ,
ಎಐಸಿಸಿ ಉಪಾಧ್ಯಕ್ಷ

ಅಮಿತ್‌ ಶಾ ಅವರ ಪಾಡಿಗೆ ಅವರು ಬಂದು ಹೋಗುತ್ತಾರೆ. ಅದಕ್ಕಷ್ಟು ಮಹತ್ವ ಕೊಡಬೇಕಿಲ್ಲ. ರಾಜ್ಯಕ್ಕೆ ಅಮಿತ್‌
ಶಾ ಬರಲಿ ಅಥವಾ ಪ್ರಧಾನಿ ನರೇಂದ್ರ ಮೋದಿಯವರೇ ಬರಲಿ ರಾಜ್ಯದ ಮೇಲೆ ಯಾವುದೇ ಪರಿಣಾಮ ಬೀರದು. ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿ ಅಧಿಕಾರಕ್ಕೆ ಬರೋಲ್ಲ.

– ಸಿದ್ದರಾಮಯ್ಯ, ಸಿಎಂ

ರಾಹುಲ್‌ ಅವರು ಕಲ್ಲೇಟಿಗೆ ಹೆದರುವುದಿಲ್ಲ. ಜೀವದ ಹಂಗು ತೊರೆದು ದೇಶಕ್ಕಾಗಿ ಶ್ರಮಿಸುತ್ತಿದ್ದಾರೆ. ಮುಂಬರುವ
ಲೋಕಸಭೆ ಚುನಾ ವಣೆಯಲ್ಲಿ ಕಾಂಗ್ರೆಸ್‌ ಅಧಿ ಕಾರಕ್ಕೆ ತಂದು ರಾಹುಲ್‌ ಗಾಂಧಿ  ಅವರನ್ನು ಪ್ರಧಾನಿ ಮಾಡುವುದೇ
ನಮ್ಮೆಲ್ಲರ ಗುರಿಯಾಗ ಬೇಕು.

– ಮಲ್ಲಿಕಾರ್ಜುನ ಖರ್ಗೆ,
ಲೋಕಸಭೆ ಪ್ರತಿಪಕ್ಷ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next