ಥಾಣೆ : ಅತ್ಯಂತ ಆಘಾತಕಾರಿ ಘಟನೆಯೊಂದರಲ್ಲಿ ಭಿವಂಡಿಯ ಕಾಂಗ್ರೆಸ್ ಕಾರ್ಪೊರೇಟರ್ ಮನೋಜ್ ಮ್ಹಾತ್ರೆ ಎಂಬವರನ್ನು ಮಂಗಳವಾರ ತಡ ರಾತ್ರಿ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ.
ಮನೋಜ್ ಮ್ಹಾತ್ರೆ ಅವರ ಮೇಲೆ ಹಂತಕರು ಮೊದಲು ಭಿವಂಡಿ ನಿಜಾಮ್‌ಪುರ ಮುನಿಸಿಪಲ್ ಕಾರ್ಪೊರೇಶನ್ ನಲ್ಲಿ ಗುಂಡೆಸೆದರು; ಆ ಬಳಿಕ ಆತನನ್ನು ಅಟ್ಟಾಡಿ ಹತ್ತು ಬಾರಿ ಹರಿತವಾದ ಆಯುಧದಿಂದ ಮಾರಣಾಂತಿಕವಾಗಿ ಕೊಚ್ಚಿ ಹಲ್ಲೆಗೈದರು ಎಂದು ತಿಳಿದುಬಂದಿದೆ.
ಭಿವಂಡಿ ತಾಲೂಕಿನ ಕಲ್ವಾ ನಿವಾಸಿಯಾಗಿರುವ ಮ್ಹಾತ್ರೆ ಅವರ ಮೇಲಿನ ವೈಯಕ್ತಿಕ ದ್ವೇಷದಿಂದ ಈ ಮಾರಣಾಂತಿಕ ಹಲ್ಲೆ ನಡೆದಿದೆ. ಮ್ಹಾತ್ರೆ ಅವರನ್ನು ಓಸ್ವಾಲ್ ವಾಡಿ ಗೆ ಸ್ಥಳಾಂತರಿಸಲಾಯಿತು ಎಂದು ಭಿವಂಡಿ ಎರಡನೇ ವಲಯದ ಡಿಸಿಪಿ ಮನೋಜ್ ಪಾಟೀಲ್ ತಿಳಿಸಿದರು.
ಬೇಸ್‌ಮೆಂಟ್‌ನಲ್ಲಿನ ಪಾರ್ಕಿಂಗ್‌ನಲ್ಲಿ ತಮ್ಮ ಕಾರನ್ನು ನಿಲ್ಲಿಸಿ ಮ್ಹಾತ್ರೆ ಅವರು ತಮ್ಮ ಮನೆಯತ್ತ ಹೋಗುತ್ತಿದ್ದಾಗ ಅವರ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದರು.
ಮ್ಹಾತ್ರೆ ಮೇಲೆ ದಾಳಿ ನಡೆಸಿದ ಬಳಿಕ ಹಂತಕರು ಅನಂತರ ನಂಬರ್ ಪ್ಲೇಟ್ ಇಲ್ಲದ ಕಾರಿನಲ್ಲಿ ಪರಾರಿಯಾದರು. ಭಿವಂಡಿ, ಮುಂಬಯಿಯಿಂದ 20 ಕಿ.ಮೀ. ದೂರದಲ್ಲಿದೆ.
ಮಾರಣಾಂತಿಕ ಹಲ್ಲೆಗೊಳಗಾದ 52ರ ಹರೆಯದ ಮ್ಹಾತ್ರೆ ಅವರನ್ನು ಥಾಣೆಯ ಜುಪಿಟರ್ ಆಸ್ಪತ್ರೆಗೆ ಒಯ್ಯಲಾಯಿತಾದರೂ ಅಲ್ಲಿನ ವೈದ್ಯರು, ಮಾತ್ರೆ ಅದಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದರು.