Advertisement
ಮೈಸೂರಿನ ಲಲಿತಮಹಲ್ ಪ್ಯಾಲೇಸ್ ನಲ್ಲಿ ನಡೆದ ಬಿಜೆಪಿ ಎಸ್ ಸಿ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ ಪಕ್ಷ ದಲಿತರನ್ನು ಓಟ್ ಬ್ಯಾಂಕ್ ಮಾಡಿಕೊಂಡು ಬಂದಿತ್ತು. ದಲಿತರ ಉದ್ಧಾರ ಮಾಡಲು ಕಾಂಗ್ರೆಸ್ ಮುಂದಾಗಲಿಲ್ಲ. ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಕಾಂಗ್ರೆಸ್ಸಿಗರು. ಅಂಬೇಡ್ಕರ್ ಬದುಕಿದ್ದಷ್ಟು ದಿನ ಅವರನ್ನು ಕಾಂಗ್ರೆಸ್ ನಿರಂತರವಾಗಿ ತುಳಿಯುವ ಕೆಲಸ ಮಾಡಿತು.ಅವರ ನಿಧನಾನಂತರ ದಲಿತರ ಓಟ್ ಗಾಗಿ ಅಂಬೇಡ್ಕರ್ ಗುಣಗಾನ ಮಾಡಲಾರಂಭಿಸಿತು ಎಂದು ವಾಗ್ದಾಳಿ ನಡೆಸಿದರು.
Related Articles
Advertisement
ಸ್ಯಾಂಟ್ರೋ ರವಿ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಈಗ ಯಾರು ಎಲ್ಲಿ ಬೇಕಾದರೂ ಯಾರ ಜೊತೆಗೆ ಬೇಕಾದರೂ ಪೋಟೊ ತೆಗೆಸಿಕೊಳ್ತಾರೆ. ಸಾರ್ವಜನಿಕ ಜೀವನದಲ್ಲಿ ಇರುವವರು ಹೋದ ಕಡೆಯೆಲ್ಲ ಸೆಲ್ಪಿಗೆ ಫೋಸ್ ಕೊಟ್ಟಿರ್ತಾರೆ.ಪೋಟೊ ತೆಗೆಸಿಕೊಂಡವರ ಜೊತೆಗೆಲ್ಲ ಸಂಬಂಧ ಕಲ್ಪಿಸುವುದು ಸರಿಯಲ್ಲ.ಸಾರ್ವಜನಿಕರಿಗೆ ಕೋಟ್ಯಂತರ ರೂಪಾಯಿ ಪಂಗನಾಮ ಹಾಕಿದ ಐಎಂಎ ಹಗರಣದ ಎ ಒನ್ ಆರೋಪಿ ಜೊತೆ ಕುಮಾರಸ್ವಾಮಿ ಪೋಟೊ ತೆಗೆಸಿಕೊಂಡಿದ್ದಾರೆ.ಹಾಗಂತ ಕುಮಾರಸ್ವಾಮಿ ಅವರನ್ನು ಐಎಂಎ ಹಗರಣದ ಎ ಟು ಆರೋಪಿ ಎನ್ನಲಾಗುತ್ತಾ ಎಂದು ಪ್ರಶ್ನಿಸಿದರು.
ಹಲವು ಸಚಿವರು ಶಾಸಕರು ತಮಗೆ ಸಂಬಂಧಿಸಿದ ಆಕ್ಷೇಪಾರ್ಹ ಸುದ್ದಿಗಳನ್ನು ಮಾಧ್ಯಮಗಳಲ್ಲಿ ಬಿತ್ತರಿಸದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ವಿಪಕ್ಷ ನಾಯಕರುಗಳು ಕೂಡ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಯಾವ್ಯಾವ ವಿಚಾರಕ್ಕೆ ತಡೆಯಾಜ್ಞೆ ತಂದಿದ್ದಾರೋ ಗೊತ್ತಿಲ್ಲ ಎಂದರು.
ಬಿಜೆಪಿ ಹಳೇ ಮೈಸೂರು ಭಾಗ ಹೊರತು ಪಡಿಸಿ ರಾಜ್ಯದ ಉಳಿದೆಡೆ ಪ್ರಬಲವಾಗಿದೆ. ಹಳೇ ಮೈಸೂರು ಭಾಗದಲ್ಲಿ ಲೋಕಸಭಾ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಬಿಜೆಪಿಗೆ ವಿಧಾನಸಭೆ ಚುನಾವಣೆಯಲ್ಲಿ ಹಿನ್ನಡೆಯಾಗುತ್ತಿದೆ. ಹಳೇ ಮೈಸೂರು ಭಾಗದಲ್ಲಿ 59 ವಿಧಾನಸಭಾ ಕ್ಷೇತ್ರಗಳಿದ್ದು, ಬಿಜೆಪಿ 15-20 ಸ್ಥಾನಗಳಿಗೆ ಸೀಮಿತವಾಗುತ್ತಿದೆ. ಹಾಗಾಗಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಹಳೇ ಮೈಸೂರು ಭಾಗದಲ್ಲಿ 59 ಕ್ಷೇತ್ರಗಳನ್ನೂ ಗೆಲ್ಲಲು ಪ್ರಯತ್ನಿಸುತ್ತೇವೆ. ಅಂತಿಮವಾಗಿ ಮತದಾರರೇ ಮಾಲಕರು, ಅವರು ನಿರ್ಣಯಿಸಿ ತೀರ್ಪು ನೀಡಬೇಕಿದೆ. ನಾವು ಯಾವುದೇ ಪಕ್ಷದ ಪ್ರಾಬಲ್ಯವನ್ನು ಮುರಿಯಲು ಬಂದಿಲ್ಲ, ನಾವು ಬೆಳೆಯಲು ಬಂದಿದ್ದೇವೆ ಎಂದರು.