Advertisement
ಚಳ್ಳಕೆರೆ ಹೊರವಲಯದ ಸಿದ್ದಾಪುರ ಬಳಿ ಭಾರತ್ ಜೋಡೋ’ ಯಾತ್ರೆಯ 12ನೇ ದಿನದ ಪಾದಯಾತ್ರೆ ಮುಗಿದ ಬಳಿಕ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಪಾದಯಾತ್ರೆಯುದ್ದಕ್ಕೂ ರೈತರು, ಮಹಿಳೆಯರು, ಕಾರ್ಮಿಕರು, ವೃದ್ಧರು ಸೇರಿ ಸಾಕಷ್ಟು ಜನರ ಜತೆ ಮಾತನಾಡುತ್ತಾ ಬಂದಿದ್ದೇನೆ. ಯಾರೂ ಖುಷಿಯಾಗಿಲ್ಲ. ರೈತರು ಎರಡು ಬಂಡೆಗಳ ನಡುವೆ ಸಿಲುಕಿದಂತಾಗಿದ್ದಾರೆ. ಒಂದು ಕಡೆ ಗೊಬ್ಬರ, ಕೃಷಿ ಪರಿಕರಗಳ ಖರೀದಿ ಗೆ ಜಿಎಸ್‌ಟಿ ವಿ ಧಿಸಿದ್ದಾರೆ. ರೈತರು ಬೆಳೆದ ಬೆಲೆಗೆ ಸರಿಯಾದ ಬೆಲೆಯೂ ಸಿಗುತ್ತಿಲ್ಲ.
ಕೇರಳ ಮಾಜಿ ಮುಖ್ಯಮಂತ್ರಿ ಉಮನ್ ಚಾಂಡಿ ಅವರ ಪುತ್ರ ಚಾಂಡಿ ಉಮನ್ ಭಾರತ್ ಜೋಡೋ ಯಾತ್ರೆಯಲ್ಲಿ ಬರಿಗಾಲಿನಲ್ಲಿ ನಡೆಯುವ ಮೂಲಕ ಗಮನ ಸೆಳೆದರು. ಕನ್ಯಾಕುಮಾರಿಯಿಂದ ಬರಿಗಾಲಿನಲ್ಲಿ ನಡೆಯುತ್ತಿದ್ದೇನೆ. ಈ ಯಾತ್ರೆ ಮೂಲಕ ದೇಶದ ಸಮಗ್ರತೆ ಹಾಗೂ ಐಕ್ಯತೆಯ ಸಂದೇಶ ಸಾರಲಾಗುತ್ತಿದೆ. ಸಹೋದರತ್ವ, ಸಮಾನತೆ ಸಾರುವ ಕೆಲಸ ಮಾಡಲಾಗುತ್ತಿದೆ ಎಂದರು.
Related Articles
ಚಿತ್ರದುರ್ಗ: ಭಾರತ್ ಜೋಡೋ’ ಯಾತ್ರೆಯಲ್ಲಿ ಮಕ್ಕಳನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಮಕ್ಕಳ ಹಕ್ಕುಗಳ ರಕ್ಷಣ ಆಯೋಗ ದೂರು ದಾಖಲಿಸಿದ್ದು, ಇದಕ್ಕೆ ಕಾಂಗ್ರೆಸ್ ಪಕ್ಷದಿಂದ 50 ಪುಟಗಳ ಉತ್ತರ ನೀಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
Advertisement
ಕಾಲಿನ ಬರವಣಿಗೆಗೆ ರಾಹುಲ್ ಅಚ್ಚರಿಮಂಗಳವಾರ ಮಧ್ಯಾಹ್ನ ರಾಹುಲ್ ಗಾಂಧಿ ಅವರೊಂದಿಗೆ ನಡೆದ ಸಂವಾದದಲ್ಲಿ ಭಾಗವಹಿಸಿದ್ದ ಶಿಕ್ಷಕಿ ಮಹಾಲಕ್ಷ್ಮೀ ಅವರು ಕಾಲಿನ ಬೆರಳುಗಳ ಸಹಾಯದಿಂದ ಬರವಣಿಗೆ ಮಾಡಿದ್ದನ್ನು ಕಂಡು ರಾಹುಲ್ ಗಾಂ ಧಿ ತಮ್ಮ ಭಾಷಣದಲ್ಲಿ ಅಚ್ಚರಿ ವ್ಯಕ್ತಪಡಿಸಿದರು. ಎರಡೂ ಕೈ ಇಲ್ಲದ ಮಹಿಳೆಯನ್ನು ನಾನು ಭೇಟಿಯಾದಾಗ ಇವರು ಬಟ್ಟೆ ಹೇಗೆ ಧರಿಸುತ್ತಾರೆ, ಶೂಗಳನ್ನು ಹೇಗೆ ಹಾಕಿಕೊಳ್ಳುತ್ತಾರೆ, ಜೀವನ ನಿರ್ವಹಣೆ ಹೇಗೆ ಎಂಬ ಆಲೋಚನೆ ಬಂದಿತ್ತು. ಮರುಕ್ಷಣ ಅವರೊಬ್ಬ ಶಿಕ್ಷಕಿ ಎಂಬ ವಿಚಾರ ತಿಳಿಯಿತು, ಆಗ ಅವರು ಹೇಗೆ ಪರೀಕ್ಷೆ ಬರೆದರು, ಯಾರಾದರೂ ಸಹಾಯ ಮಾಡಿದರಾ ಎಂದು ಪ್ರಶ್ನಿಸಿದೆ. ತಕ್ಷಣ ಕಾಲಿನ ಬೆರಳುಗಳಲ್ಲಿ ಪೆನ್ನು ಹಿಡಿದು ಸುಂದರವಾದ ಅಕ್ಷರಗಳನ್ನು ಬರೆದರು. ಕಾಲಿನಿಂದ ಬರೆಯಲು ಬಹಳ ಕಷ್ಟವಾಗಬಹುದು ಅಲ್ವಾ, ಈ ಕಾರಣಕ್ಕೆ ಪರೀಕ್ಷೆಯಲ್ಲಿ ಹೆಚ್ಚು ಸಮಯ ಕೊಟ್ಟಿರಬಹುದಾ, ಅಂಕಗಳನ್ನು ಹೆಚ್ಚು ಕೊಟ್ಟಿರಬಹುದಾ ಎಂದರೆ ಅಂಥದ್ದೇನೂ ಇಲ್ಲ. ನಮಗೆ ಇದ್ಯಾವುದು ಬೇಕಿಲ್ಲ. ನನ್ನಲ್ಲಿ ಸಾಮರ್ಥ್ಯ ಇದೆ ಎಂದು ಉತ್ತರಿಸಿದರು.