Advertisement

BJP ಯತ್ತ ಕಾಂಗ್ರೆಸ್‌ ನಾಯಕ ಕಮಲ್‌ನಾಥ್‌, ಪುತ್ರ ಚಿತ್ತ?

11:36 PM Feb 09, 2024 | Team Udayavani |

ಭೋಪಾಲ್‌: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಆಘಾತ ನೀಡಲು ಉದ್ದೇಶಿಸಿರುವ ಬಿಜೆಪಿಯು, ಮಾಜಿ ಮುಖ್ಯಮಂತ್ರಿ ಕಮಲ್‌ನಾಥ್‌ ಅವರನ್ನು ತಮ್ಮ ಪಕ್ಷಕ್ಕೆ ಸೆಳೆಯಲು ಭಾರಿ ಕಸರತ್ತು ನಡೆಸುತ್ತಿದೆ ಎನ್ನಲಾಗಿದೆ. ಶೀಘ್ರದಲ್ಲಿಯೇ ತಮ್ಮ ಪುತ್ರ ನಕುಲ್‌ನಾಥ್‌ ಜೊತೆಗೆ ಕಮಲ್‌ನಾಥ್‌ ಬಿಜೆಪಿಗೆ ಸೇರಲಿದ್ದಾರೆ.

Advertisement

ಪಕ್ಷಕ್ಕೆ ಸೇರ್ಪಡೆಗೊಳ್ಳುವ ಕುರಿತಂತೆ ಅವರು ವರದಿಗಳನ್ನು ತಿರಸ್ಕರಿಸಿದ್ದರು. ವಿಧಾನಸಭಾ ಚುನಾವಣೆ ಯಲ್ಲಿ ಸೋಲುಂಡ ಬಳಿಕ ರಾಜ್ಯ ಘಟಕದ ಹುದ್ದೆಯಿಂದ ಕಮಲ್‌ ಅವರನ್ನು ಕಾಂಗ್ರೆಸ್‌ ಪಕ್ಷ ಕೆಳಗಿಳಿಸಿತ್ತು. ಆಗಿನಿಂದಲೂ ಅವರು ಬಿಜೆಪಿ ಸೇರುವ ವದಂತಿಗಳು ಹರಿದಾಡುತ್ತಿದ್ದು, ಮಾರ್ಚ್‌ನಲ್ಲಿ ಕಾಂಗ್ರೆಸ್‌ ತೊರೆದು ಕಮಲ ಪಾಳಯ ಸೇರಲಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next