ನವದೆಹಲಿ:ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ, ಮಾಜಿ ಸಂಸದೆ ಕರುಣಾ ಶುಕ್ಲಾ ಅವರು ಕೋವಿಡ್ 19 ಸೋಂಕಿನಿಂದ ಮಂಗಳವಾರ(ಏಪ್ರಿಲ್ 27) ಮುಂಜಾನೆ ರಾಯ್ ಪುರ್ ನ ರಾಮಕೃಷ್ಣಾ ಕೇರ್ ಆಸ್ಪತ್ರೆಯಲ್ಲಿ ನಿಧನರಾಗಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಕೋವಿಡ್ ವಿಷಯಲ್ಲಿ ಸರ್ಕಾರ ಯಾವ ಅಂಕಿ ಸಂಖ್ಯೆಯನ್ನು ಮುಚ್ಚಿಡುವ ಕೆಲಸ ಮಾಡಿಲ್ಲ: ಡಾ. ಸುಧಾಕರ್
ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿ ಅವರ ಸಂಬಂಧಿಯಾಗಿರುವ ಶುಕ್ಲಾ ಅವರು ಕೋವಿಡ್ ಪಾಸಿಟಿವ್ ಎಂದು ವರದಿ ಬಂದ ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಕರುಣಾ ಶುಕ್ಲಾ ಅವರ ನಿಧನಕ್ಕೆ ಛತ್ತೀಸ್ ಗಢ್ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ರಾಜಕೀಯ ಹೊರತಾಗಿಯೂ ಕುಟುಂಬಕ್ಕೆ ಅತ್ಯಂತ ನಿಕಟವರ್ತಿಯಾಗಿದ್ದರು ಎಂದು ಬಾಘೇಲ್ ತಿಳಿಸಿದ್ದಾರೆ.
ಕರುಣಾ ಶುಕ್ಲಾ ಅವರು ಇನ್ನಿಲ್ಲ, ಕರುಣೆ ಇಲ್ಲದ ಕೋವಿಡ್ ಅವರನ್ನು ಪ್ರಾಣವನ್ನು ತೆಗೆದುಕೊಂಡು ಹೋಗಿದೆ. ಅವರೊಬ್ಬ ನಮ್ಮ ಕುಟುಂಬದ ಅತ್ಯಂತ ನಿಕಟವರ್ತಿ ವ್ಯಕ್ತಿಯಾಗಿದ್ದರು. ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಭೂಪೇಶ್ ಬಾಘೇಲ್ ಟ್ವೀಟ್ ನಲ್ಲಿ ತಿಳಿಸಿದ್ದರು.