Advertisement

Congress;ರಾಜ್ಯ ನಾಯಕರಿಂದ ಅಂತರ ಕಾಯ್ದುಕೊಂಡ ಖರ್ಗೆ!

01:11 AM Aug 19, 2024 | Team Udayavani |

ಬೆಂಗಳೂರು: ಮುಡಾ ಪ್ರಕರಣದಲ್ಲಿ ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿದಾಗಿನಿಂದ ಕಾಂಗ್ರೆಸ್‌ ಪಾಳಯದಲ್ಲಿ ತಳಮಳ ಶುರುವಾಗಿದ್ದು, ಶನಿವಾರದಂದು ರಾಜಕೀಯ ಕೇಂದ್ರಬಿಂದುವಾಗಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸ ರವಿವಾರದ ಮಟ್ಟಿಗೆ ತಣ್ಣಗಾಗಿತ್ತು. ನಾಯಕರ ಭೇಟಿ ತಪ್ಪು ಸಂದೇಶಕ್ಕೆ ಎಡೆಮಾಡಿಕೊಡಬಾರದು ಎಂಬ ಕಾರಣಕ್ಕೆ ರಾಜ್ಯ ನಾಯಕರಿಂದ ಅಂತರ ಕಾಯ್ದುಕೊಂಡಿದ್ದರು.

Advertisement

ವಿಷಯ ತಿಳಿದು ದಿಲ್ಲಿಯಿಂದ ಬೆಂಗಳೂರಿಗೆ ಆಗಮಿಸಿದ್ದ ಖರ್ಗೆ ಅವರನ್ನು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌ ಸೇರಿದಂತೆ ಹಲವು ಸಚಿವರು ಭೇಟಿ ಮಾಡಿ ಸುದೀರ್ಘ‌ ಸಮಾಲೋಚನೆ ನಡೆಸಿದ್ದರು. ಈ ಸಂದರ್ಭದಲ್ಲಿ ಸಿದ್ದರಾಮಯ್ಯರ ಬೆಂಬಲಕ್ಕೆ ನಾವೆಲ್ಲರೂ ಇದ್ದೇವೆ. ಅವರು ಕಾನೂನು ಹೋರಾಟ ಮುಂದುವರಿಸಲಿ. ಪಕ್ಷದ ವತಿಯಿಂದ ರಾಜಕೀಯ ಹೋರಾಟ ನಡೆಸಿ. ಇಂಡಿ ಒಕ್ಕೂಟದ ನಾಯಕರೊಂದಿಗೂ ಮಾತುಕತೆ ನಡೆಸಿ, ರಾಷ್ಟ್ರಮಟ್ಟದಲ್ಲಿ ಯಾವ ರೀತಿಯ ಹೋರಾಟ ಕೈಗೆತ್ತಿಕೊಳ್ಳಬಹುದು ಎಂಬುದರ ಬಗ್ಗೆ ಚಿಂತನೆ ನಡೆಸುತ್ತೇವೆ ಎಂದು ಖರ್ಗೆ ಭರವಸೆ ಕೊಟ್ಟಿದ್ದರು.

ಅಷ್ಟೇ ಅಲ್ಲದೆ, ರಾಜ್ಯಪಾಲರು ಅನುಮತಿ ಕೊಟ್ಟಿರುವ ಬಗ್ಗೆ ನಾನು ಪರಿಶೀಲಿಸಿಲ್ಲ, ಗಮನಿಸಿಲ್ಲ ಎಂದಿದ್ದ ಖರ್ಗೆ, ರವಿವಾರ ಪಕ್ಷದ ನಾಯಕರ ಭೇಟಿಗೆ ಒಲ್ಲೆ ಎಂದಿದ್ದಾರೆ. ಗೃಹ ಸಚಿವ ಡಾ| ಜಿ. ಪರಮೇಶ್ವರ್‌ ಅವರು ಖರ್ಗೆ ನಿವಾಸಕ್ಕೆ ಭೇಟಿ ನೀಡಿ ಸುಮಾರು ಒಂದು ತಾಸು ಚರ್ಚೆ ನಡೆಸಿದ್ದಾರೆ. ಇನ್ನುಳಿದ ಯಾವುದೇ ನಾಯಕರಿಗೆ ಅವಕಾಶ ಸಿಕ್ಕಿಲ್ಲ. ಬೇರೆ ಬೇರೆ ನಾಯಕರು ಭೇಟಿ ಮಾಡುವುದರಿಂದ ಪಕ್ಷದಲ್ಲಿ ತಪ್ಪು ಸಂದೇಶ ರವಾನೆಯಾಗುತ್ತದೆ ಎಂಬ ಕಾರಣದಿಂದ ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next