Advertisement

ಕೈ-ದಳ ಬೃಹತ್‌ ಸಮಾವೇಶ ಇಂದು

02:18 AM Mar 31, 2019 | Team Udayavani |

ಬೆಂಗಳೂರು: ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ ಸೀಟು ಹೊಂದಾಣಿಕೆಯಡಿ ಕಣಕ್ಕಿಳಿದಿರುವ ಕಾಂಗ್ರೆಸ್‌-ಜೆಡಿಎಸ್‌ ಭಾನುವಾರ ಅಧಿಕೃತ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಿದೆ.

Advertisement

ಈ ಸಂಬಂಧ ನಗರದ ಹೊರವಲಯದ ಮಾದಾವರದಲ್ಲಿ ಸಂಜೆ 4 ಗಂಟೆಗೆ ಬೃಹತ್‌ ಸಮಾವೇಶ ಆಯೋಜಿಸಲಾಗಿದ್ದು, ಐದು ಲಕ್ಷ ಜನ ಸೇರಿಸಲು ಎರಡೂ ಪಕ್ಷಗಳ ಶಾಸಕರಿಗೆಟಾರ್ಗೆಟ್‌ ನೀಡಲಾಗಿದೆ. ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ, ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಳ್ಳಲಿರುವ ಈ ಸಮಾವೇಶದ ಮೂಲಕ ಎರಡೂ ಪಕ್ಷಗಳು ತಳಮಟ್ಟದ ಕಾರ್ಯಕರ್ತರು ಹಾಗೂ ಮುಖಂಡರಿಗೆ ಒಗ್ಗಟ್ಟಿನ ಸಂದೇಶ ರವಾನಿಸಲು ತೀರ್ಮಾನಿಸಲಾಗಿದೆ.
ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ದಕ್ಷಿಣ ಹಾಗೂ ಕೇಂದ್ರ ಲೋಕಸಭೆ ಕ್ಷೇತ್ರಗಳ ವ್ಯಾಪ್ತಿಯ 30 ಶಾಸಕರಿಗೆ ಸಮಾವೇಶಕ್ಕೆ ಜನ ಸೇರಿಸುವ ಹೊಣೆಗಾರಿಕೆ ನೀಡಲಾಗಿದೆ. ಒಬ್ಬೊಬ್ಬ ಶಾಸಕರು 10 ರಿಂದ 15 ಸಾವಿರ ಜನ ಸೇರಿಸುವಂತೆ ಸೂಚಿಸಲಾಗಿದೆ. ಏಳು ಕ್ಷೇತ್ರಗಳ ವ್ಯಾಪ್ತಿಗೆ ಬರುವ ಕಾಂಗ್ರೆಸ್‌ ಶಾಸಕರಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್‌ಗುಂಡೂರಾವ್‌ ಹಾಗೂ ಜೆಡಿಎಸ್‌ ಶಾಸಕರಿಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರೇ ಈ ಕುರಿತು ನಿರ್ದೇಶಿಸಿದ್ದಾರೆ.

ಈ ಮಧ್ಯೆ, ಮುಖ್ಯಮಂತ್ರಿ ಕುಮಾರಸ್ವಾಮಿ ಶನಿವಾರ ಸಮಾವೇಶದ ಸ್ಥಳಕ್ಕೆ ಭೇಟಿ ನೀಡಿ ಸಿದ್ಧ ತೆ ಪರಿಶೀಲಿಸಿದರು. ಸಂಜೆ ನಾಲ್ಕು ಗಂಟೆಗೆ ಸಮಾವೇಶ ಆರಂಭವಾಗುವುದರಿಂದ ಸುತ್ತಮುತ್ತಲ ಭಾಗಗಳಿಂದ ಎರಡೂ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಿಂದ ವಾಹನ ನಿಲುಗಡೆ ಹಾಗೂ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಸಂಬಂಧ ಕೆಲ ಸೂಚನೆ ನೀಡಿದರು.

ಸಮಾವೇಶ ಕುರಿತು ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್‌
ಗುಂಡೂರಾವ್‌, ರಾಹುಲ್‌ಗಾಂಧಿ ನೇತೃತ್ವದಲ್ಲಿ ಸಮಾವೇಶ
ನಡೆಯಲಿದ್ದು, ದೇವೇಗೌಡ, ಸಿದ್ದರಾಮಯ್ಯ ಸೇರಿ ಅನೇಕ
ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಖರ್ಗೆ ಗೆಲ್ಲಿಸುವುದೇ ಪ್ರಮುಖ ಗುರಿ: ಅಲ್ಲಂ

Advertisement

ಬಳ್ಳಾರಿ: ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಗೆಲ್ಲಿಸು ವುದೇ ಪ್ರಮುಖ ಗುರಿ ಎಂದು
ವಿಧಾನಪರಿಷತ್‌ ಸದಸ್ಯ ಅಲ್ಲಂ ವೀರಭದ್ರಪ್ಪ ಹೇಳಿದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖರ್ಗೆ ಅವರನ್ನು ಸೋಲಿಸೋ
ದೇ ಬಿಜೆಪಿಯವರ ಪ್ರಮುಖ ಗುರಿಯಾಗಿದೆ. ಹೀಗಾಗಿ ಖರ್ಗೆ ಅವರಿಗೆ ಬಲ ತುಂಬಲು ಕಲಬುರಗಿಗೆ ತೆರಳಿ ಅವರ ಪರ ಪ್ರಚಾರ ಮಾಡಲಾಗುವು
ದು ಎಂದರು. ಖರ್ಗೆಯವರು ನನ್ನನ್ನು ವಿಧಾನಪರಿಷತ್‌ ಸದಸ್ಯರನ್ನಾಗಿ ಮಾಡುವಲ್ಲಿ ಸಹಕಾರ ನೀಡಿದ್ದಾರೆ. ಎಐಸಿಸಿ ಮಾಜಿ ಅಧ್ಯಕ್ಷೆ
ಸೋನಿಯಾ ಗಾಂಧಿಯವರನ್ನು ವೈಯಕ್ತಿಕವಾಗಿ ಭೇಟಿಯಾಗಿ ಮನವಿ ಮಾಡಿ ದ್ದಾರೆ. ಅಲ್ಲದೇ, ಕಲಬುರಗಿಯಲ್ಲಿ ಪ್ರಚಾರ ಮಾಡು ವಂತೆ
ಹೈಕಮಾಂಡ್‌ ಸಹ ಸೂಚನೆ ನೀಡಿದೆ. ಹೀಗಾಗಿ ಖರ್ಗೆ ಯವರನ್ನು ಗೆಲ್ಲಿಸು ವುದು ನಮ್ಮ ಜವಾಬ್ದಾರಿಯಾಗಿದೆ ಎಂದರು.

ನಾಳೆ ದಾವಣಗೆರೆ ಕ್ಷೇತ್ರದ ಕೈ ಅಭ್ಯರ್ಥಿ ಆಯ್ಕೆ

ದಾವಣಗೆರೆ: ಲೋಕಸಭಾ ಸಾರ್ವತ್ರಿಕ ಚುನಾವಣೆ ಯ ದಾವಣಗೆರೆ ಕ್ಷೇತ್ರದ ಪರ್ಯಾಯ ಅಭ್ಯರ್ಥಿ ಆಯ್ಕೆ ಇನ್ನೂ ನಿಗೂಢವಾಗಿದ್ದು,
ಕ್ಷೇತ್ರದಲ್ಲಿ ಕಣಕ್ಕಿಳಿಸುವ ಹುರಿಯಾಳು ಯಾರೆಂದು ಸೋಮವಾರ ತಿಳಿಯಲಿದೆ. ಬೆಂಗಳೂರಲ್ಲಿ ಶುಕ್ರವಾರ ರಾತ್ರಿ ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿ, ದಾವಣಗೆರೆಗೆಮರಳಿರುವ ಮಾಜಿ ಸಚಿವ ಎಸ್‌.ಎಸ್‌.
ಮಲ್ಲಿಕಾ ರ್ಜುನ್‌ ಶನಿವಾರ ತಮ್ಮನ್ನು ಭೇಟಿಯಾದ ಮಾಧ್ಯಮದವರೊಂದಿಗೆ ಮಾತನಾಡಿ, ಇನ್ನೂ ಯಾವುದೂ ಅಂತಿಮವಾಗಿಲ್ಲ. ಪಕ್ಷದ ಧುರೀಣ ರೊಂದಿಗೆ ಜನರಲ್‌ ಆಗಿ
ಎಲ್ಲಾ ವಿಷಯ ಚರ್ಚಿಸಿದ್ದೇವೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ
ಭಾನುವಾರ ರಾಜ್ಯಕ್ಕೆ ಬರಲಿದ್ದಾರೆ. ಅವರು ಬಂದು ಹೋದ ನಂತರ ವರಿಷ್ಠರು ಸಭೆ ಸೇರಿ ಚರ್ಚಿಸಲಿದ್ದಾರೆ ಎಂದರು.

ದಾವಣಗೆರೆ ಕ್ಷೇತ್ರದ್ದೊಂದೇ ಸಮಸ್ಯೆಯಲ್ಲ. ಉತ್ತರ ಕರ್ನಾಟಕದ 2-3 ಕ್ಷೇತ್ರಗಳ ಬಗ್ಗೆಯೂ ಚರ್ಚೆ ನಡೆಯಬೇಕಿದೆ. ದಾವಣಗೆರೆ ಸೇರಿದಂತೆ 2ನೇ ಹಂತದಲ್ಲಿ ನಡೆಯುವ ಉತ್ತರ ಕರ್ನಾಟಕದ ಕೆಲವು ಕ್ಷೇತ್ರಗಳಲ್ಲೂ
ಏನೇನು ಸಮಸ್ಯೆಗಳಿವೆ. ಯಾವ ಯಾವ ಸಮುದಾಯಕ್ಕೆ ಟಿಕೆಟ್‌ ಕೊಡಬೇಕು ಎಂಬ ಅಂಶಗಳ ಸಂಬಂಧ ವರಿಷ್ಠರು ಚರ್ಚಿಸಲಿದ್ದಾರೆ.
ನಾನೂ ಕೂಡ ವರಿಷ್ಠರ ಗಮನಕ್ಕೆ ಕೆಲವು ಸಂಗತಿ ತಂದಿದ್ದೇನೆ. ಸಿದ್ದರಾಮಯ್ಯನವರ ನೇತೃತ್ವದಲ್ಲಿ ಮಾತಕತೆ ನಡೆಯಲಿದೆ. 2ನೇ
ಹಂತದ ಚುನಾವಣೆ ನಡೆಯುವ ಕೆಲವು ಕ್ಷೇತ್ರಗಳ ಬಗ್ಗೆ ಸಾಧ್ಯವಾದಲ್ಲಿ ದಾವಣಗೆರೆ ಯಲ್ಲೇ ಮಾತನಾಡುವ ಬಗ್ಗೆಯೂ ತಿಳಿಸಿದ್ದಾರೆ.
ಸೋಮವಾರ ಎಲ್ಲವೂ ಬಗೆಹರಿಯಲಿದೆ ಎಂದು ಹೇಳಿದರು.

ನಂಗೇನೂ ಗೊತ್ತಿಲ್ಲ’
ದಾವಣಗೆರೆ ಲೋಕಸಭಾ ಅಭ್ಯರ್ಥಿ ಬಗ್ಗೆ ನಂಗೇನೂ ಗೊತ್ತಿಲ್ಲ. ನನ್ನನ್ನು ಯಾರೂ ಮಾತನಾಡಿಸಿಲ್ಲ ಎಂದು ಶಾಸಕ ಶಾಮನೂರು ಶಿವಶಂಕರಪ್ಪ
ಹೇಳಿದ್ದಾರೆ. ದಾವಣಗೆರೆ ಕ್ಷೇತ್ರಕ್ಕೆ ಪರ್ಯಾಯ ಅಭ್ಯರ್ಥಿ ಯಾರೆಂದು ಮಾಧ್ಯಮದವರು ಕೇಳಿದಾಗ, ನನಗೇನು ಗೊತ್ತು. ನನ್ನೊಂದಿಗೆ ಯಾವ ಮುಖಂಡರು ಚರ್ಚಿಸಿಲ್ಲ. ನಾನು ಇಲ್ಲೇ ಇದ್ದೇನೆ ಎಂದರು. ಮಲ್ಲಿಕಾರ್ಜುನ್‌
ಅಭ್ಯರ್ಥಿಯಾಗ ಲಿದ್ದಾರೆ ಯೇ ಎಂಬ ಪ್ರಶ್ನೆಗೆ ಅವರನ್ನೇ ಕೇಳಿ. ನನಗಂತೂ ಖಂಡಿತಾ ಏನೂ ಗೊತ್ತಿಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next