Advertisement
ದೇಶದ ಎಲ್ಲ ರಾಜ್ಯಗಳು, ಜಿಲ್ಲೆಗಳು, ಹಳ್ಳಿಗಳು ಹಾಗೂ ಬ್ಲಾಕ್ ಮಟ್ಟದಲ್ಲಿ ಈ ಅಭಿಯಾನ ನಡೆಯಲಿದ್ದು, ಪಕ್ಷದ ರಾಷ್ಟ್ರೀಯ, ರಾಜ್ಯ, ಜಿಲ್ಲಾ ಮತ್ತು ಬೇರು ಮಟ್ಟದ ನಾಯಕರು ಇದರ ನೇತೃತ್ವ ವಹಿಸಲಿದ್ದಾರೆ. ಇದರ ಅಂಗವಾಗಿ ವಿಚಾರ ಸಂಕಿರಣಗಳು, ಸಾರ್ವಜನಿಕ ಸಭೆಗಳು, ರ್ಯಾಲಿಗಳೂ ನಡೆಯಲಿವೆ. ಜ.26ರಂದು ಅಂಬೇಡ್ಕರ್ ಜನ್ಮಸ್ಥಳವಾದ ಮಧ್ಯಪ್ರದೇಶದ ಮಹೂವಿನಲ್ಲಿ ಬೃಹತ್ ಸಾರ್ವಜನಿಕ ರ್ಯಾಲಿಯೊಂದಿಗೆ ಸಮಾರೋಪಗೊಳ್ಳಲಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಮಾಹಿತಿ ನೀಡಿದ್ದಾರೆ.ಡಿ.27ರಂದೇ ಈ ಅಭಿಯಾನಕ್ಕೆ ಬೆಳಗಾವಿಯಿಂದಲೇ ಚಾಲನೆ ನೀಡಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಆದರೆ ಮಾಜಿ ಪ್ರಧಾನಿ ಡಾ| ಮನಮೋಹನ್ ಸಿಂಗ್ ನಿಧನ ಹಾಗೂ 7 ದಿನಗಳ ಶೋಕಾಚರಣೆ ಹಿನ್ನೆಲೆಯಲ್ಲಿ ಅದನ್ನು ಮುಂದೂಡಲಾಗಿತ್ತು. ಈಗ ಶುಕ್ರವಾರ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದೂ ಜೈರಾಂ ತಿಳಿಸಿದ್ದಾರೆ.
Related Articles
ಅಂಬೇಡ್ಕರ್ಗೆ ಸಚಿವ ಅಮಿತ್ ಶಾ ಅವಮಾನ ಹಿನ್ನೆಲೆ ಅಭಿಯಾನ
ದೇಶ, ರಾಜ್ಯ, ಜಿಲ್ಲೆ, ಬ್ಲಾಕ್ ಮಟ್ಟದಲ್ಲಿ ಹಲವು ಕಾರ್ಯಕ್ರಮ
ವಿಚಾರ ಸಂಕಿರಣಗಳು, ಸಾರ್ವಜನಿಕ ಸಭೆಗಳು, ರ್ಯಾಲಿ ಆಯೋಜನೆ
ಜ.26ರಂದು ಮಧ್ಯಪ್ರದೇಶದ ಮಹೂವಿನಲ್ಲಿ ಸಮಾರೋಪ
ಜ.26ರಿಂದ 1 ವರ್ಷ ಕಾಲ ಸಂವಿಧಾನ ಬಚಾವೋ ಪಾದಯಾತ್ರೆ
ಈ ವರ್ಷದ ಎಪ್ರಿಲ್ನಲ್ಲಿ ಎಐಸಿಸಿ ಅಧಿವೇಶನ
Advertisement