Advertisement
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹದಾಯಿ ವಿವಾದವನ್ನು ಮೊದಲು ನೀರಾವರಿ ನ್ಯಾಯಾಧೀ ಕರಣಕ್ಕೆ ಕೊಂಡೊಯ್ದಿದ್ದು ಮನಮೋಹನ್ ಸಿಂಗ್ ಸರ್ಕಾರ. ನೀರು ಕೊಡುವ ಬಗ್ಗೆ ವಿರೋಧಿಸಿದವರು ಸೋನಿಯಾಗಾಂಧಿ. ಒಂದು ತೊಟ್ಟು ನೀರು ಬಿಡಬಾರದೆಂದರು. ರಾಹುಲ್‌ಗಾಂಧಿ ಸಹ ಇದಕ್ಕೆ ಸಾಥ್ ನೀಡಿದರು. ಹೀಗಾಗಿ ಗೋವಾದಲ್ಲಿ ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಪಕ್ಷ ವಿರೋಧಿಸುತ್ತಾ ಬಂತು, ಈಗಲೂ ವಿರೋಧಿಸುತ್ತಿದೆ ಎಂದರು. ಗೋವಾ ಮುಖ್ಯಮಂತ್ರಿ ಪರ್ರಿಕರ್ ಉತ್ತಮ ನಿಲುವು ತೆಗೆದುಕೊಂಡು ಕುಡಿವ ನೀರಿಗಾಗಿ 6.5 ಟಿಎಂಸಿ ನೀರು ಬಿಡೋಣ. ಕುಡಿವ ನೀರಿಗಾಗಿ ಇದನ್ನು ನ್ಯಾಯಾಧೀಕರಣದ ಹೊರಗೆ ಪರಿಹರಿಸಿಕೊಳ್ಳೋಣಎಂದಿದ್ದರು. ಗೋವಾ ಕಾಂಗ್ರೆಸ್ ಇದನ್ನು ಬೆಂಬಲಿಸಬೇಕಿತ್ತು. ಆದರೆ, ಹಾಗೆ ಮಾಡಲಿಲ್ಲ ಎಂದು ಹೇಳಿದರು.