Advertisement
ನಗರದ ಅಕ್ಕಮಹಾದೇವಿ ಅನುಭವ ಮಂಟಪದಲ್ಲಿ ಸೋಮವಾರ ವಿಧಾನ ಪರಿಷತ್ ಚುನಾವಣೆ ಪ್ರಚಾರದ ನಿಮಿತ್ತ ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಯ ಸ್ಥಳೀಯ ಸಂಸ್ಥೆಯ ಕಾಂಗ್ರೆಸ್ ಅಭ್ಯರ್ಥಿ ಸುನೀಲಗೌಡ ಪಾಟೀಲ ಪರ ಪ್ರಚಾರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ಬಿಜೆಪಿ ಸರ್ಕಾರ ಪಂಚಾಯತಿಗೆ ಶಕ್ತಿ ತುಂಬುವ ಕೆಲಸ ಮಾಡಿಲ್ಲ. ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಜಾರಿಗೆ ತಂದವರು ಮಾಜಿ ಪ್ರಧಾನಿ ಮನ ಮೋಹನ್ ಸಿಂಗ್. ಬಿಜೆಪಿ ಸರಕಾರ ಕಳೆದ ಎರಡು ವರ್ಷವಾದರೂ ಒಂದು ಮನೆ ಕಟ್ಟಿಲ್ಲ. ಕೊಟ್ಟ ಹಣ ವಾಪಸ್ಸು ತೆಗೆದುಕೊಂಡಿದ್ದಾರೆ. ಮಾತು ಕೊಟ್ಟಂತೆ ನಡೆದುಕೊಂಡವರು ನಾವು. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದರೆ ಒಳ್ಳೆಯ ದಿನಗಳು ಬರುತ್ತವೆ ಎನ್ನುತ್ತಿದ್ದರು. ಗ್ಯಾಸ್, ಪೆಟ್ರೋಲ್ ಡಿಸೇಲ್ ದರ ಗಗನಕ್ಕೇರಿದೆ. ರೈತರ ಆದಾಯ ದ್ವಿಗುಣಗೊಳ್ಳಲಿಲ್ಲ. ಪ್ರತಿ ವರ್ಷ ಯುವಕರಿಗೆ ಉದ್ಯೋಗ ನೀಡಲಿಲ್ಲ ಇದೇನಾ ಅಚ್ಚೇದಿನ್ ಎಂದು ಪ್ರಶ್ನಿಸಿದರು.
ಮಾಜಿ ಸಚಿವ ಶಾಸಕ ಎಂ.ಬಿ. ಪಾಟೀಲ ಮಾತನಾಡಿ, ಕಾಂಗ್ರೆಸ್ ಪಕ್ಷ ಪಂಚಾಯತ ರಾಜ್ ವ್ಯವಸ್ಥೆಗೆ ಶಕ್ತಿ ತುಂಬಿದೆ. ಸಿದ್ದರಾಮಯ್ಯ ಅವರ ಐದು ವರ್ಷದ ಅಧಿಕಾರಾವಧಿಯಲ್ಲಿ 165 ಭರವಸೆಯಲ್ಲಿ 164 ಬೇಡಿಕೆಗಳನ್ನು ಈಡೇರಿಸಿದ್ದಾರೆ. ಉಚಿತ ಅಕ್ಕಿ, ಶಾಲಾ ಮಕ್ಕಳಿಗೆ ಹಾಲು ಸೇರಿದಂತೆ ಸಮಾಜದ ಎಲ್ಲ ವರ್ಗದವರು ಜನಪರ ಕಾರ್ಯಕ್ರಮ ನೀಡಿದ್ದಾರೆ. ಬರುವ 2023ರ ವಿಧಾನಸಭೆ ಚುನಾವಣೆಯಲ್ಲಿ 150 ಸೀಟು ಗೆಲ್ಲುವ ಮೂಲಕ ಸಿದ್ದರಾಮಯ್ಯ ನೇತೃತ್ವದಲ್ಲಿಪುನಃ ಅ ಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅಭ್ಯರ್ಥಿ ಸುನೀಲಗೌಡ ಪಾಟೀಲ ಮಾತನಾಡಿ, ನನಗೆ ಮೊದಲ ಬಾರಿ ವಿಧಾನಪರಿಷತ್ ಆಯ್ಕೆಯಾಗಿ ಕಡಿಮೆ ಅವ ಧಿಯಲ್ಲಿ ಕೆಲಸ ಮಾಡಿದ್ದೇನೆ. ಪ್ರತಿ ಗ್ರಾಪಂ ಸ್ಯಾನಿಟೈಸರ್ ಮಷಿನ್ ಕೊಡಲಾಗಿದೆ. ಗ್ರಾಪಂ ಅಹವಾಲು ಸ್ವೀಕರಿಸಲಾಗಿದೆ. 6800 ಜನರಲ್ಲಿ 6500 ಜನ ಗ್ರಾಮ ಪಂಚಾಯತಿ ಸದಸ್ಯರಿಗೆ ಸನ್ಮಾನ ಮಾಡಲಾಗಿದೆ. ಗ್ರಾಪಂ ಸದಸ್ಯರ ಗೌರವಧನ ಹೆಚ್ಚಳ ಮಾಡಲಾಗಿದೆ. ಸದಸ್ಯರ ಗೌರವಧನ ಹೆಚ್ಚಳ ಕುರಿತು ವಿಧಾನಸಭೆಯಲ್ಲಿ ಒತ್ತಾಯಿಸಲಾಗಿದೆ. ಗ್ರಾಪಂ ಸದಸ್ಯರಿಗೆ ಉಚಿತ ಬಸ್ ಪಾಸ್ ನೀಡಲು ಒತ್ತಾಯಿಸಲಾಗಿದೆ. ಮಾಸಿಕ ಪಿಂಚಣಿ ನೀಡಲು ಒತ್ತಾಯಿಸಲಾಗಿದೆ. ಸಿದ್ದರಾಮಯ್ಯ ಅವ ಧಿಯಲ್ಲಿ ಸುಮಾರು 15 ಲಕ್ಷ ಮನೆ ನಿರ್ಮಿಸಿ ಕೊಡಲಾಗಿದೆ. ಬಿಜೆಪಿ ಅಧಿಕಾರಾವಧಿಯಲ್ಲಿ ಒಂದೂ ಮನೆ ಕೊಟ್ಟಿಲ್ಲ. ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ತೀವ್ರ ವಾಗ್ಧಾಳಿ ನಡೆಸಿದರು. ಬಿಜೆಪಿ, ಜೆಡಿಎಸ್ ಪಕ್ಷ ತೊರೆದು ಹಲವರು ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಮಾಜಿ ಸಚಿವರಾದ ಉಮಾಶ್ರೀ, ಆರ್.ಬಿ. ತಿಮ್ಮಾಪೂರ, ಬಿ.ಬಿ. ಚಿಮ್ಮನಕಟ್ಟಿ, ಎಚ್.ವೈ. ಮೇಟಿ, ಮಾಜಿ ಸಂಸದ ಐ.ಜಿ. ಸನದಿ, ವಿಜಯಪುರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜು ಅಲಗೂರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ, ಮುಖಂಡರಾದ ಡಾ|ಎಂ.ಎಚ್. ಚಲವಾದಿ, ಡಾ|ಎಂ.ಜಿ. ಕಿತ್ತಲಿ, ಎನ್.ಬಿ. ಬನ್ನೂರ, ಮಹೇಶ ಹೊಸಗೌಡ್ರ, ಭೀಮಸೇನ ಚಿಮ್ಮನಕಟ್ಟಿ, ಅಬ್ದುಲ್ ಮುಸಿ, ರಕ್ಷಿತಾ ಈಟಿ, ಶೈಲಾ ಪಾಟೀಲ, ಗಿರೀಶ ಅಂಕಲಗಿ, ಎಸ್.ವೈ. ಕುಳಗೇರಿ, ಮಹಾಂತೇಶ ಹಟ್ಟಿ, ಎಂ.ಡಿ. ಯಲಿಗಾರ ಸೇರಿದಂತೆ ಹಲವರಿದ್ದರು. ಸಬ್ ಕಾ ಸಾಥ್ ಸಬ್ ಕಾ ವಿಕಾಸ ಎಂದು ಮೋದಿ ಸರ್ವನಾಶ ಮಾಡಿದರು. ಬಸವತತ್ವದಲ್ಲಿ ನಂಬಿಕೆ ಇಟ್ಟವರು ನಾವು. ಉಚಿತ ಅಕ್ಕಿ ಕೇಂದ್ರ ಸರಕಾರದ ಯೋಜನೆಯಾದರೆ ಗುಜರಾತ್ ರಾಜ್ಯದಲ್ಲಿ ಯಾಕೆ ಅನುಷ್ಟಾನ ಮಾಡಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ವಯಸ್ಸಾಗಿದೆ ವಿಸರ್ಜನೆ ಮಾಡಲಿ ಎಂದು ಸಿಎಂ ಬೊಮ್ಮಾಯಿ ಹೇಳುತ್ತಿದ್ದಾರೆ. ಆರ್‌ಎಸ್‌ಎಸ್‌ಗೂ ವಯಸ್ಸಾಗಿದೆ ವಿಸರ್ಜನೆ ಮಾಡಲಿ. ದೇಶಕ್ಕಾಗಿ ಹೋರಾಡಿದವರು ಕಾಂಗ್ರೆಸ್‌ನವರು. ಬಿಜೆಪಿಯವರು ಒಬ್ಬರಾದರೂ
ಹೋರಾಡಿದ್ದಾರೆಯೇ?
ಸಿದ್ದರಾಮಯ್ಯ, ಮಾಜಿ ಸಿಎಂ