Advertisement
ಅವರು ತಾಲೂಕಿನ ಆನೆಗೊಂದಿಯಲ್ಲಿ ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ ಪರವಾಗಿ ಬಹಿರಂಗ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿದರು. ಕಳೆದ 70 ವರ್ಷಗಳಿಂದ ಆಗಸ್ಟ್ 15, ಜನವರಿ 26ರಂದು ಕಾಂಗ್ರೆಸ್‌ನವರು ಇಂದಿರಾಗಾಂಧಿ, ಜವಾಹರಲಾಲ್ ನೆಹರೂ, ರಾಜೀವ್ ಗಾಂಧಿ ಸಮಾದಿ ಗಳಿಗೆ ಹೋಗುತ್ತಾರೆ. ದೇವಾಲಯ, ಧಾರ್ಮಿಕ ಕೇಂದ್ರಗಳಿಗೆ ಹೋಗುವುದಿಲ್ಲ.
ಇನ್ನೂ ಯಾಕೆ ಬಡತನ ನಿರ್ಮೂಲನೆಯಾಗಿಲ್ಲ. ವ್ಯಾಪಕ ಭ್ರಷ್ಟಾಚಾರ ನಡೆಸುವ ಮೂಲಕ ಕಾಂಗ್ರೆಸ್ ನಾಯಕರು ಶ್ರೀಮಂತರಾಗಿದ್ದಾರೆ. ಈಗಾಗಲೇ ಪ್ರಧಾನಿ ಮೋದಿ ಅವರು ವಿಶ್ವದ ಮಾನ್ಯತೆ ಪಡೆದಿದ್ದಾರೆ. ವಿದೇಶಾಂಗ ವ್ಯವಹಾರ ಉತ್ತಮವಾಗಿದ್ದರಿಂದ ರಷ್ಯಾದಂತಹ ದೇಶಗಳು ಬಹುಮಾನ ನೀಡುತ್ತಿವೆ. ಕಾದಂಬರಿಕಾರ ಎಲ್.ಎಲ್. ಭೈರಪ್ಪ ಹೇಳುವಂತೆ ಸತತವಾಗಿ ಮೋದಿಯವರು ಪ್ರಧಾನಿಯಾಗುತ್ತಿದ್ದರೆ ಭಾರತಕ್ಕೆ ವಿಶ್ವಗುರು ಸ್ಥಾನ ಖಂಡಿತ ಬರುತ್ತದೆ ಎಂದರು.
Related Articles
Advertisement
ರೈತರು ಬೆಳೆದ ಬೆಳೆ ನಷ್ಟವಾದ ಸಂದರ್ಭದಲ್ಲಿ ವಿಮೆ ದೊರಕಿಸಲು ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆ ಅನುಷ್ಠಾನ ಮಾಡಿದರೂ ರಾಜ್ಯ ಸರಕಾರದ ಅಸಹಕಾರದಿಂದ ಬೆಳೆವಿಮೆ ರೈತರಿಗೆ ತಲುಪಿಲ್ಲ. ಮತ್ತೂಮ್ಮೆ ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದರೆ ತುಂಗಭದ್ರಾ ಡ್ಯಾಮ್‌ಗೆ ಕೃಷ್ಣಾ ನದಿ ನೀರನ್ನು ತರಲಾಗುತ್ತದೆ. ಜತೆಗೆ ರಾಜ್ಯದ ಎಲ್ಲಾ ನೀರಾವರಿ ಯೋಜನೆಗಳು ಪೂರ್ಣಗೊಳ್ಳಲಿವೆ ಎಂದರು.
ಶಾಸಕ ಪರಣ್ಣ ಮುನವಳ್ಳಿ, ಎಪಿಎಂಸಿ ಅಧ್ಯಕ್ಷ ಸಣ್ಣಕ್ಕಿ ನೀಲಪ್ಪ, ತಿಪ್ಪೇರುದ್ರಸ್ವಾಮಿ, ಸಿಂಗನಾಳ ವಿರೂಪಾಕ್ಷಪ್ಪ, ಕೃಷ್ಣಾದೇವರಾಯ, ಹರಿಹರದೇವರಾಯ, ಎಚ್.ಸಿ. ಯಾದವ್, ಗೌರೀಶ ಬಾಗೋಡಿ, ಸಿದ್ದರಾಮಯ್ಯ, ಜೋಗದ ಹನುಮಂತಪ್ಪ ನಾಯಕ, ವೀರಭದ್ರಪ್ಪ ನಾಯಕ, ದೇವಪ್ಪ ಕಾಮದೊಡ್ಡಿ, ರಾಜೇಶ್ವರಿ ಸುಚಿತ್ರಾ, ಸಿರಿಗೇರಿ ಸೇರಿ ಅನೇಕರಿದ್ದರು.